Karnataka Times
Trending Stories, Viral News, Gossips & Everything in Kannada

Income Tax: ಹೊಸ ತೆರಿಗೆ ನಿಯಮ, 10 ಲಕ್ಷ ರೂಪಾಯಿ ಮೇಲೆ ಶೂನ್ಯ ತೆರಿಗೆ ಪಾವತಿ!

advertisement

ಐಟಿ ರಿಟರ್ನ್ (IT Return) ಸಲ್ಲಿಕೆ ಬಗ್ಗೆ ಈಗಾಗಲೇ ಅನೇಕ ಮಾಹಿತಿಯನ್ನು ಕೇಂದ್ರ ಸರಕಾರ ನೀಡುತ್ತಲೇ ಬಂದಿದೆ. ಪ್ರತೀ ತೆರಿಗೆಗೂ ಕೂಡ ನಿರ್ದಿಷ್ಟ ನಿಯಮಗಳು ಅನ್ವಯವಾಗಲಿದ್ದು ನಿಮ್ಮ ಒಟ್ಟು ಆದಾಯದ ಇಂತಿಷ್ಟು ಪ್ರಮಾಣಕ್ಕೆ ತೆರಿಗೆ ವಿನಾಯಿತಿ ಎಂಬ ಅಂಶ ಕೂಡ ಇರಲಿದೆ. ಅದೇ ರೀತಿ ಇತ್ತೀಚೆಗೆ IT Return ಸಲ್ಲಿಕೆ ಮೇಲೆ ಕೆಲ ಅಗತ್ಯ ಬದಲಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಕೆಲ ಮಹತ್ವದಾಯಕ ಮಾಹಿತಿ ಇಲ್ಲಿದೆ.

ಹೊಸ ತೆರಿಗೆ ಕಾಯ್ದೆ ಬಗ್ಗೆ ಇತ್ತೀಚೆಗೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾತನಾಡಿದ್ದು ತೆರಿಗೆ ಮಿತಿ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಮೂಲಕ ಬಾಡಿಗೆ ಆದಾಯದದಿಂದ ಬರುವ ಹಣದ ಮೇಲೆ ವಿಧಿಸಲಾಗುವ ತೆರಿಗೆ ನಿಯಮವನ್ನು ಮರುಪರಿಶೀಲನೆ ಮಾಡಲಾಗಿದೆ. ಈ ಮೂಲಕ ಓರ್ವ ವ್ಯಕ್ತಿಗೆ ಸೂಕ್ತ ಕಾರಣಗಳೊಂದಿಗೆ 7 ಲಕ್ಷ ರೂಪಾಯಿ ವರೆಗೆ ಆದಾಯದ ಮೇಲೆ ತೆರಿಗೆ ನಿಯಮ (Income Tax Rules) ಅನ್ವಯವಾಗಲಾರದು. ಹಾಗೇಯೇ ಅದಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ ನೀವು ತೆರಿಗೆ ಪಾವತಿ (Tax Payment) ಮಾಡುವುದು ಕಡ್ಡಾಯವಾಗಲಿದೆ ಎಂದು ವಿತ್ತ ಸಚಿವರು ಇತ್ತೀಚಿನ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.

New Income Tax Rule:

advertisement

ಹೊಸ ತೆರಿಗೆ ನಿಯಮದ ಪ್ರಕಾರ 3 ರಿಂದ 5 ಲಕ್ಷ ಆದಾಯದ ಮೇಲೆ 5% ತೆರಿಗೆ ನಿಯಮ ಇದ್ದು ಅದನ್ನು ರಿಟರ್ನ್ ಪಡೆಯಬಹುದು. 7 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದ್ದರೆ ಆಗ ತೆರಿಗೆ ಮೇಲೆ 10% ತೆರಿಗೆ ವಿಧಿಸುವ ನಿಯಮ ಇದೆ‌. ಅನೇಕ ಸಂದರ್ಭದಲ್ಲಿ ಬಾಡಿಗೆ ಪಾವತಿ ಮೊತ್ತವಾಗಿ 10 ಲಕ್ಷ ರೂಪಾಯಿ ಗಳಿಸುವುದು ಇದೆ. ಆದರೆ ನಿಯಮದನ್ವಯ ನಿಮಗೆ ಇಲ್ಲಿ ಕೂಡ ತೆರಿಗೆ ಕಟ್ಟಬೇಕಾಗುತ್ತಾ ಎಂಬ ಪ್ರಶ್ನೆ ಎದುರಾಗಬಹುದು. ಆದರೆ ಇಂತಹ ಹಣಕ್ಕೆ ಶೂನ್ಯ ತೆರಿಗೆ ಪಾವತಿ ವ್ಯವಸ್ಥೆ ಇದೆ.

ಈ ಕಾರಣ ಇದ್ದರೆ ಮಾತ್ರವೇ ಶೂನ್ಯ ತೆರಿಗೆ:

ಹೊಸ ತೆರಿಗೆ ಪದ್ಧತಿಯ ಪ್ರಕಾರ ಹತ್ತು ಲಕ್ಷ ರೂಪಾಯಿ ವರೆಗೆ ಬಾಡಿಗೆ ಇಂದ ಬಂದ ಆದಾಯ ಇದ್ದರೆ ವಿನಾಯಿತಿ ಪಡೆಯಬಹುದು. ಹಾಗೆಂದು ಎಲ್ಲರಿಗೂ ಈ ಆಯ್ಕೆ ಇಲ್ಲದೇ ಆಸ್ತಿ ತೆರಿಗೆ ಮತ್ತು ಗೃಹಸಾಲ (Home Loan) ದ ಅಡಿಯಲ್ಲಿ ಕ್ಲೈಂ ಮಾಡಲು ಅವಕಾಶ ನೀಡಲಾಗಿದೆ. ಹಾಗಾಗಿ ಇಂತಹ ಕಾರಣ ಇದ್ದರೆ ಮಾತ್ರವೇ ಹತ್ತು ಲಕ್ಷದ ವರೆಗೆ ಹಣ ಬಂದರೂ ಅದಕ್ಕೆ ಶೂನ್ಯ ಬಡ್ಡಿದರ ಅನ್ವಯವಾಗುತ್ತದೆ.

ನಿವ್ವಳ ವಾರ್ಷಿಕ ಆದಾಯದ ಮೇಲೆ ನಿಮ್ಮ ಮನೆ ದುರಸ್ತಿ ಮತ್ತು ನಿರ್ವಹಣೆಗೆ 30% ವರೆಗೆ ಆಸ್ತಿ ತೆರಿಗೆ ಮೇಲೆ ಕ್ಲೈಂ ಮಾಡಬಹುದು. ಅಂದರೆ ನಿಮಗೆ ಬಾಡಿಗೆ ಮೊತ್ತದಿಂದ 10 ಲಕ್ಷ ರೂಪಾಯಿ ವರೆಗೆ ಆದಾಯ ಬಂದಿದ್ದರೆ ಆಗ ನೀವು ಗೃಹಸಾಲ ಹಾಗೂ ಆಸ್ತಿ ತೆರಿಗೆ ತೋರಿಸಿ ಕ್ಲೈ ಮಾಡಿದರೆ ನಿಮಗೆ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ. ಇಲ್ಲದಿದ್ದರೆ 10 ಲಕ್ಷದಲ್ಲಿ 3 ಲಕ್ಷ ತೆರಿಗೆ ಪಾವತಿಯಾಗಿ 7 ಲಕ್ಷ ರೂಪಾಯಿ ನಿಮಗೆ ಮಿಕ್ಕುವ ಕಾರಣ ಆ ಆದಾಯ ತೆರಿಗೆ ಮಿತಿ ಒಳಗೆ ಬರಲಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.