Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್, ಮಹೀಳೆಯರ ಖಾತೆಗೆ ಈ ದಿನದಂದು ಗೃಹಲಕ್ಷ್ಮಿ ಹಣ ಜಮೆ ಆಗಲಿದೆ.

advertisement

ಕಾಂಗ್ರೆಸ್ ಸರಕಾರದ ಪ್ರಣಾಳಿಕೆಯಂತೆ ನಾಲ್ಕು ಯೋಜನೆಗಳ ಸದುಪಯೋಗ ವನ್ನು ಬಹಳಷ್ಟು ಜನರು ಪಡೆದು ಕೊಳ್ಳುತ್ತಿದ್ದಾರೆ. ಅದರಲ್ಲಿ ಮುಖ್ಯವಾದ ಮಹೀಳಾ ಪರವಾದ ಯೋಜನೆಯಾದ ಗೃಹಲಕ್ಷ್ಮಿ (Gruha Lakshmi Yojana) ಈ ಬಗ್ಗೆ ಹಣ ಬಾರದ ವಿಚಾರವಾಗಿ ಮತ್ತೆ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾಹಿತಿ ನೀಡಿದ್ದಾರೆ. ಹಣ ಬಾರದೇ ಇದ್ದ ಫಲಾನುಭವಿಗಳ ಖಾತೆಗೆ ಹಣ ಯಾವಾಗ ಜಮೆ ಯಾಗಲಿದೆ ಎಂದು ಮಾಹಿತಿ‌ನೀಡಿದ್ದಾರೆ.

ಇಂತವರ ಖಾತೆಗೆ ಹಣ ಜಮೆಯಾಗಿದೆ:

ಈಗಾಗಲೇ ಈ ಯೋಜನೆಯ ಹಣವನ್ನು ಒಂದು ತಿಂಗಳ ಒಳಗೆ ಒಂದು ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿತ್ತು. ನೊಂದಣಿ ಮಾಡಿದವರ ಅರ್ಜಿ ಯನ್ನು ಪರೀಶಿಲಿಸಿ ಹಣ ಜಮೆ ಮಾಡಿದ್ದೇವೆ. ಇದುವರೆಗೆ ಸುಮಾರು 1.17 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಿದ್ದು ಜನವರಿ 5 ರ ನಂತರ ಮತ್ತೆ ಹಣ ಜಮಾ ಮಾಡಲಾಗುವುದು ಎಂದಿದ್ದಾರೆ.

ಡಿಸೆಂಬರ್ ತಿಂಗಳ ಹಣ ಯಾವಾಗ ಜಮೆ:

 

 

advertisement

ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ ಕೆಲವು ಮಹೀಳೆಯರಿಗೆ ಯಾವುದೇ ಕಂತಿನ ಜಮೆಯಾಗಿಲ್ಲ. ಅರ್ಜಿಗಳ ನ್ಯೂನ್ಯತೆ , ಮಾಹಿತಿ ಸರಿ ಇಲ್ಲದೆ, ಬ್ಯಾಂಕ್ ಖಾತೆ ನಿಷ್ಕ್ರೀಯ, ಆಧಾರ್ ಲಿಂಕ್ (Aadhaar Link) ಸೇರಿ ಹಲವು ಸಮಸ್ಯೆ ಇರುವುದರಿಂದ ಹಣ ಜಮೆಯಾಗಿಲ್ಲ. ಈಗಾಗಲೇ ಇಂತಹ ದಾಖಲೆಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ಡಿಸೆಂಬರ್ ತಿಂಗಳ ಹಣವೂ ಜನವರಿ 5 ರ ನಂತರ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ತಿಳಿಸಿದ್ದಾರೆ.

ಹಂತ ಹಂತವಾಗಿ ಹಣ ಜಮೆ:

ಈಗಾಗಲೇ ಅರ್ಜಿ ಸಲ್ಲಿಸಿದ ನಂತರ‌ಆಗಸ್ಟ್‌ ತಿಂಗಳಿನಲ್ಲಿ ಶೇಕಡ 80 ರಷ್ಟು ನೊಂದಣಿ ಮಾಡಿದ ಮಹೀಳೆಯರಿಗೆ ಹಣ ಸಂದಾಯಮಾಡಲಾಗಿದ್ದು , ಗೃಹಲಕ್ಷ್ಮಿ ಹಣ ಹಂತ ಹಂತವಾಗಿ ಸಂದಾಯವಾಗುತ್ತಿದೆ.ಈ ಯೋಜನೆಯ ಹಣ ಬಾರದವರು ಯೋಜನೆಗೆ ನೋಂದಾಯಿಸಿದವರು ತಮ್ಮ ಹೆಸರು ನೋಂದಣಿಯಾಗಿದೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು Gruha Lakshmi Scheme Beneficiary Status ಪರಿಶೀಲನೆ ಮಾಡಿ ತಿಳಿದು ಕೊಳ್ಳಲು ಅವಕಾಶ ‌ಇದೆ.

ಈ ಕೆಲಸ ಮೊದಲು ಮಾಡಿ:

ಗೃಹಲಕ್ಷ್ಮಿ ಹಣ (Gruha Lakshmi Money) ಖಾತೆಗೆ ಹಣ ಬಾರದೇ ಇರುವುದಕ್ಕೆ ತಾಂತ್ರಿಕ ಕಾರಣ ಸೇರಿದಂತೆ ಹಲವಾರು ಸಮಸ್ಯೆ ಗಳಿದ್ದು ಮಹೀಳೆಯರು ತಮ್ಮ ರೇಷನ್ ಕಾರ್ಡ್ (Ration Card), ಬ್ಯಾಂಕ್ ಪುಸ್ತಕ (Bank Passbook) ಮತ್ತು ಮೊಬೈಲ್ ಸಂಖ್ಯೆ (Mobile Number) ಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಖಾತೆಗೆ ಈ ಹಣ ಜಮೆಯಾಗುವುದಿಲ್ಲ.

advertisement

Leave A Reply

Your email address will not be published.