Karnataka Times
Trending Stories, Viral News, Gossips & Everything in Kannada

Toyota Land Cruiser: ಟೊಯೋಟಾ ಕಂಪನಿಯ ಈ ಕಾರು ಕೊಳ್ಳಲು ಮುಗಿಬಿದ್ದ ಜನ, ಅರ್ಧ ಗಂಟೆಯಲ್ಲೇ 1,000 ಕಾರು ಮಾರಾಟ!

advertisement

ರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಯ ವಾಹನಗಳು ಅಧಿಪತ್ಯವನ್ನು ಸಾಧಿಸಿದೆ. ಅಂತಹ ಸಾಲಿಗೆ ಜಪಾನಿನ ಕಾರು ತಯಾರಕ ಕಂಪೆನಿಯು ಟೊಯೊಟಾ ಮೋಟಾರ್ (Toyoto Motors) ಕೂಡ ಸೇರಿಕೊಂಡಿದೆ. ಆದರೆ ಇದೀಗ ಈ ಟೊಯೊಟಾ ಮೋಟಾರ್ ಕಂಪೆನಿಯ ಟೊಯೋಟಾ ಲ್ಯಾಂಡ್ ಕ್ರೂಸರ್ (Toyota Land Cruiser) ಹೊಸ ಕಾರು ದಾಖಲೆಯ ಸಾಧನೆಯನ್ನು ಮಾಡುವ ಮೂಲಕ ಸುದ್ದಿಯಾಗಿದೆ. ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಮಾಹಿತಿಗಾಗಿ ಈ ಲೇಖನವನ್ನು ಓದಿ

ಅರ್ಧಗಂಟೆಯಲ್ಲಿ 1000 ಯುನಿಟ್ ಕಾರುಗಳು ಬುಕಿಂಗ್

ಕೆಲವು ತಿಂಗಳ ಹಿಂದೆಯಷ್ಟೇ ಜರ್ಮನಿಯಲ್ಲಿ ನಡೆದ 201 ಬುಷ್ ಟ್ಯಾಕ್ಸಿ ಸಭೆಯಲ್ಲಿ ಟೊಯೊಟಾ ಹೊಸ ತಲೆಮಾರಿನ ಲ್ಯಾಂಡ್ ಕ್ರೂಸರ್ ಅನ್ನು ಅನಾವರಣಗೊಳಿಸಲಾಗಿತ್ತು. ಇತ್ತೀಚಿನ ವರದಿಯ ಪ್ರಕಾರ, ಜರ್ಮನಿಯಲ್ಲಿ ಟೊಯೋಟಾ ಲ್ಯಾಂಡ್ ಕ್ರೂಸರ್ ಕೇವಲ ಅರ್ಧ ಗಂಟೆಯಲ್ಲಿ ಮಾರಾಟವಾಗಿದ್ದು ದಾಖಲೆ ಬರೆದಿದೆ. ಟೊಯೊಟಾದ ಹೊಸ ತಲೆಮಾರಿನ ಲ್ಯಾಂಡ್ ಕ್ರೂಸರ್‌ನ ಅಧಿಕೃತ ಬುಕಿಂಗ್ ಡಿಸೆಂಬರ್ 21 ರಂದು ಬೆಳಿಗ್ಗೆ 8:00 ಗಂಟೆಗೆ ಪ್ರಾರಂಭವಾಯಿತು. ಟೊಯೋಟಾ ಲ್ಯಾಂಡ್ ಕ್ರೂಸರ್ ಒಟ್ಟು 1000 ಯುನಿಟ್ ಕಾರುಗಳಿದ್ದು, ಎಲ್ಲಾ ಕಾರುಗಳು ಬುಕ್ ಆಗಿವೆ. ಹೀಗಾಗಿ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

advertisement

ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ

ಹೊಸ ತಲೆಮಾರಿನ ಟೊಯೋಟಾ ಲ್ಯಾಂಡ್ ಕ್ರೂಸರ್ (Toyota Land Cruiser) ವಿವಿಧ ಎಂಜಿನ್ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಕಾರು 2.4 ಲೀಟರ್ 4- ಸಿಲಿಂಡರ್ ಟರ್ಬೊ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದ್ದು, ಇದು 330 ಪಿಎಸ್ ಪವರ್ ಮತ್ತು 630 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಈ ಟೊಯೋಟಾ ಲ್ಯಾಂಡ್ ಕ್ರೂಸರ್ ಬೆಲೆಯು 2.10 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ, ಮಧ್ಯಮವರ್ಗದ ಜನರಿಗೆ ಈ ಕಾರು ದುಬಾರಿ ಎನಿಸುವುದಂತೂ ಗ್ಯಾರಂಟಿ.

advertisement

Leave A Reply

Your email address will not be published.