Karnataka Times
Trending Stories, Viral News, Gossips & Everything in Kannada

ಅಷ್ಟಕ್ಕೂ BH-Series ನಂಬರ್ ಪ್ಲೇಟ್ ಯಾರಿಗೆಲ್ಲಾ ಸಿಗುತ್ತೆ? ಇದರಿಂದ ಸಿಗುತ್ತೆ ಅನೇಕ ಲಾಭ!

advertisement

ಪ್ರತಿಯೊಬ್ಬರೂ ವಾಹನಗಳನ್ನು ಹೊಂದಿದ್ದರೆ, ವಾಹನ ನೋಂದಣಿ ಮಾಡಿಕೊಳ್ಳಬೇಕು. ವಾಹನ ನೋಂದಣಿ ವೇಳೆಯಲ್ಲಿ ನಂಬರ್ ಪ್ಲೇಟ್ ನಂಬರ್ (Number Plate Number) ನೀಡಲಾಗುತ್ತದೆ. ಆದರೆ ಇತ್ತೀಚೆಗಷ್ಟೇ ಭಾರತ್​ ಸರಣಿ (BH-Series)ನೋಂದಣಿ ಪದ್ಧತಿಯನ್ನು ಕೇಂದ್ರ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೆ ತಂದಿದೆ. ಆದರೆ ಭಾರತ್ ಸರಣಿ ಸಂಖ್ಯೆಯನ್ನು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಓದಿ ತಿಳಿದುಕೊಳ್ಳಿ.

ಭಾರತ್ ಸರಣಿ ಸಂಖ್ಯೆಯಿದ್ದರೆ ಏನು ಲಾಭದಾಯಕ?

ಭಾರತ್ ಸರಣಿ ಸಂಖ್ಯೆಯು ವಾಹನ ಮಾಲೀಕರಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ವರ್ಗಾವಣೆ ಮಾಡುವಾಗ ಅನುಕೂಲವಾಗುತ್ತದೆ. ಹೌದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವ ಅಥವಾ ಕೆಲಸಕ್ಕೆ ಹೋಗುವ ಜನರು ತಮ್ಮ ವಾಹನಗಳನ್ನ ಜೊತೆಗೆ ಕೊಂಡೊಯ್ಯಬೇಕಾಗುತ್ತದೆ. ಅಂತಹವರಿಗೆ ಈ ಹೊಸ ನೋಂದಣಿ ಸಂಖ್ಯೆಯು ಅನುಕೂಲವಾಗಲಿದೆ. ಭಾರತ್ ಸರಣಿಯ ನೊಂದಣಿ ಸಂಖ್ಯೆಯಿದ್ದರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳನ್ನು ರವಾನೆ ಮಾಡಬೇಕಾದರೆ ನೊಂದಣಿಯನ್ನು ರವಾನೆ ಮಾಡಬೇಕಾಗಿಲ್ಲ.

advertisement

ಭಾರತ್ ಸರಣಿ ಸಂಖ್ಯೆ (BH-Series) ಯನ್ನು ಯಾರಿಗೆಲ್ಲಾ ನೀಡಲಾಗುತ್ತದೆ

ಭಾರತ್ ಸರಣಿ ಸಂಖ್ಯೆಯನ್ನು ರಕ್ಷಣಾ ಇಲಾಖೆಯ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಿಗಳು ಹಾಗೂ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಚೇರಿ ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನೀಡಲಾಗುತ್ತದೆ.

advertisement

Leave A Reply

Your email address will not be published.