Karnataka Times
Trending Stories, Viral News, Gossips & Everything in Kannada

Crop Relief Money: 2ನೇ ಕಂತಿನ ಬೆಳೆ ಪರಿಹಾರಕ್ಕೆ ಕಾಯುತ್ತಿದ್ದವರಿಗೆ ಹೊಸ ಟ್ವಿಸ್ಟ್! ಇಂತಹವರಿಗೆ ಸಿಗೋದಿಲ್ಲ

advertisement

ಈ ಭಾರೀ ಮಳೆ ಇಲ್ಲದೆ ರೈತರು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಬೆಳೆ ಅರ್ಧದಷ್ಟು ಹಾನಿ ಯಾಗಿದ್ದು ಇದಕ್ಕೆ ಪರಿಹಾರ ನೀಡಲು ಸರಕಾರ ತಿರ್ಮಾನಿಸಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರ ಉಂಟಾಗಿದ್ದು ಸುಮಾರು 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ‌ಮಾಡಿದೆ.

ಮೊದಲ ಕಂತಿನ ಹಣ ಬಿಡುಗಡೆ?

 

Image Source: Zee Business

 

ಈಗಾಗಲೇ ರಾಜ್ಯ ಸರಕಾರವು ದಾಖಲೆ ಸರಿ ಇದ್ದ ರೈತರಿಗೆ ಮೊದಲ‌ಕಂತಿನ ಹಣ (Crop Relief Money) ಬಿಡುಗಡೆ ಮಾಡಿದೆ.. ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾವಣೆ ಪ್ರಕ್ರಿಯೆ ಆರಂಭಗೊಂಡಿದೆ.ಇನ್ನು‌ ಎರಡನೇ ಕಂತಿನ ಹಣ ಇನ್ನಷ್ಟೆ ಬಿಡುಗಡೆಯಾಗಬೇಕಿದ್ದು ಇದೀಗ ರೈತರಿಗೆ ಈ ವಿಚಾರವಂತು ಶಾಕಿಂಗ್ ಆಗಿದೆ.

ಇವರಿಗೆ ಇಲ್ಲ ಈ ಹಣ:

 

Image Source: Naidunia

 

advertisement

  • ಆಧಾರ್‌ ಕಾರ್ಡ್‌ಗೆ ಬ್ಯಾಂಕ್‌ ಖಾತಾ ಸಂಖ್ಯೆ ಜೋಡಣೆ ಆಗದಿದ್ದರೆ, ಜಮೀನು ಮಾರಾಟವಾಗಿದ್ದು ಹಳೆಯ ಪಹಣಿ ನೀಡಿದ್ದರೆ ಇಂತವರಿಗೆ ಈ ಹಣ ಜಮೆ‌ ಇಲ್ಲ.
  • ಬಹುತೇಕ ಕುಟುಂಬಗಳ ಆಸ್ತಿಯ ಮಾಲೀಕರು ಮೃತರಾಗಿದ್ದು ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆಯೂ ಆಗಿಲ್ಲ,ಹಾಗಾಗಿ ಈ ಹಣ ಬಂದಿಲ್ಲ
  • ಫ್ರೂಟ್ಸ್ ತಂತ್ರಾಂಶದಲ್ಲಿ 8 ಲಕ್ಷ ರೈತರ ಮಾಹಿತಿಯೇ ಇಲ್ಲ, ಹಾಗಾಗಿ ಈ ಹಣ ಬಂದಿಲ್ಲ.

ಎಫ್ ಐಡಿ ಮಾಡಿಸಿ:

ರೈತರು ತಮ್ಮ ಎಫ್ ಐಡಿಯನ್ನು ಮಾಡಿಸುವುದು ಕಡ್ಡಾಯ ವಾಗಿದ್ದು ಎಫ್ ಐ ಡಿ ಏನಾದರೂ ಮಾಡಿಸಿಲ್ಲ ಅಂದರೆ ನಿಮ್ಮ ಗ್ರಾಮ ಲೆಕ್ಕಧಿಕಾರಿಯನ್ನು ಸಂಪರ್ಕಿಸಿ ಬೇಕಾದ ದಾಖಲೆಗಳನ್ನು ಒದಗಿಸುವ ಮೂಲಕ ನೊಂದಣಿ ಮಾಡಿಕೊಳ್ಳಿ.

ಕೇಂದ್ರ ಸರಕಾರದಿಂದ ಹಣ ಬಿಡುಗಡೆ:

ಬರ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಸುಪ್ರೀಂ ಕೋರ್ಟ್‌ನ ವಿಚಾರಣೆಯಲ್ಲಿ ಬರ ಪರಿಹಾರ (Crop Relief Money) ಬಿಡುಗಡೆಯ ಬಗ್ಗೆ ಒಂದು ವಾರದೊಳಗೆ ನಿರ್ಧರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಮಾಹಿತಿ‌ನೀಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದ್ದು ತಮಿಳುನಾಡಿಗೆ 275 ಕೋಟಿ ರೂ. ನೆರೆ ಪರಿಹಾರವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರದ ಹಣ ಬಿಡುಗಡೆ ಯಾಗಿರುವ ಬಗ್ಗೆ ನಿಮ್ಮ ಹೆಸರು ಪರಿಶೀಲಿಸಲು ನೀವು https://parihara.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ‌ ಚೆಕ್ ಮಾಡಿ.

advertisement

Leave A Reply

Your email address will not be published.