Karnataka Times
Trending Stories, Viral News, Gossips & Everything in Kannada

LPG Cylinder Connection: ಈ ಪಟ್ಟಿಯಲ್ಲಿರುವ LPG ಗ್ರಾಹಕರ ಗ್ಯಾಸ್ ಕನೆಕ್ಷನ್ ಸಂಪೂರ್ಣ ಸ್ಥಗಿತಗೊಳ್ಳಲಿದೆ! ಕೂಡಲೇ ಪರಿಶೀಲಿಸಿಕೊಳ್ಳಿ.

advertisement

ನೀವೇನಾದರೂ ಉತ್ತರಪ್ರದೇಶದ ನಿವಾಸಿಗಳಾಗಿದ್ದರೆ, ನಿಮ್ಮ ಮನೆಗೆ ತಲುಪುವಂತಹ ಗ್ಯಾಸ್ ಸಿಲಿಂಡರ್ (Gas Cylinder) ಸಂಪರ್ಕದಲ್ಲಿ ಹೇರಳವಾದ ಬದಲಾವಣೆಗಳು ಉಂಟಾಗಲಿದೆ. ಅನಿಲ ವಿತರಕ ಕಂಪನಿಗಳು ಗ್ರಾಹಕರ ಕೆವೈಸಿ ಇಲ್ಲದೆ ಯಾವುದೇ ಎಲ್ಪಿಜಿ ಸಿಲಿಂಡರ್ ಕನೆಕ್ಷನನ್ನು (LPG Cylinder Connection) ನೀಡಬಾರದು ಎಂಬ ಅಧಿಕೃತ ಸೂಚನೆ (Official Notice) ನೀಡಿದ್ದು, ಈ ಪ್ರಕ್ರಿಯೆಯನ್ನು ಉತ್ತರ ಪ್ರದೇಶದಾತ್ಯಂತ ವೇಗಗೊಳಿಸಲಾಗುತ್ತಿದೆ ಹಾಗೂ ಹಲವು ಬಾರಿ ತಮ್ಮ ಗಡುವಿನ ದಿನಾಂಕವನ್ನು ಕೂಡ ಮುಂದೂಡಿದ್ದಾರೆ. ಆದರೂ ಕೂಡ ಕೆಲ ಗ್ರಾಹಕರು ತಮ್ಮ ಕೆವೈಸಿ ಪ್ರಕ್ರಿಯೆ (KYC process)ಯನ್ನು ಪೂರ್ಣಗೊಳಿಸಿಲ್ಲ, ಅಂತವರ ಎಲ್ಪಿಜಿ ಸಿಲಿಂಡರ್ ಕನೆಕ್ಷನ್ ಮುಂದಿನ ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಿಲಿಂಡರ್ ಪುರಕ್ಕೆ ಸ್ಥಗಿತ:

 

Image Source: Mathrubhumi English

 

advertisement

  1. ಹಲವು ಬಾರಿ ಗಡುವಿನ ದಿನಾಂಕವನ್ನು ಮುಂದುವರಿಸಿದರು ಕೂಡ ಕೆಲವು ಗ್ರಾಹಕರು ಇಂದಿಗೂ ಕೂಡ ತಮ್ಮ ಕೆ ಎ ಸಿ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿಲ್ಲ. ಮುಂದಿನ ತಿಂಗಳಿನಲ್ಲಿ ಅಂತವರ ಸಿಲಿಂಡರ್ ಸಂಪರ್ಕ ಕಡಿತಗೊಳ್ಳಲಿದೆ.
  2. ಕೆವೈಸಿ ಪ್ರಕ್ರಿಯೆ (KYC Process) ಮಾಡಿಕೊಳ್ಳದೆ ಸಾಕಷ್ಟು ಜನರು ನಕಲಿ ರೂಪದಲ್ಲಿ ಸಿಲಿಂಡರ್ಗಳನ್ನು ಪಡೆಯುತ್ತಿದ್ದಾರೆ ಅಂತವರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸಿ ನಿಜವಾದ ಗ್ರಾಹಕರಿಗೆ ಮಾತ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ರೂಪದ ಸಿಲಿಂಡರ್ ಗಳನ್ನು ಒದಗಿಸಲಿದ್ದಾರೆ.
  3. LPG ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಅಗಲಿ ವರ್ಷಗಳೇ ಉರುಳಿದರು ಅವರ ಕುಟುಂಬಸ್ಥರ ಹೆಸರಿಗೆ ಅದು ವರ್ಗಾವಣೆಯಾಗಿಲ್ಲ (Not Transferred) ಅಂತವರ ಹೆಸರನ್ನು ತೆಗೆದುಹಾಕಲಾಗುತ್ತದೆ.
  4. ಕೆಲ ಗ್ರಾಹಕರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಸ್ಥಳಾಂತರಿಸಿದರೂ ಅವರ ಹೆಸರಿನಲ್ಲಿ ಹೊಸಬರು ಸಿಲಿಂಡರ್ ಪಡೆದುಕೊಳ್ಳುತ್ತಿದ್ದಾರೆ. ಇಂಥವರನ್ನು ಎಲ್ಪಿಜಿ ಸಿಲಿಂಡರ್ ಸಂಪರ್ಕದಿಂದ ಕಡಿತಗೊಳಿಸಲಾಗುತ್ತದೆ.

ಈ ಪ್ರಕ್ರಿಯೆಯನ್ನು ಅನುಸರಿಸಿ ಕೆವೈಸಿ ಮಾಡಿಕೊಳ್ಳಿ:

 

Image Source: Goemkarponn

 

ಎಲ್ಪಿಜಿ ಸಿಲಿಂಡರ್ ಸಂಪರ್ಕ ಹೊಂದಿರುವಂತಹ ಗ್ರಾಹಕರು ನಿಮ್ಮ ಹತ್ತಿರದ ವಿತರಕರ ಆಫೀಸ್ಗೆ ತೆರಳಿ ಇ-ಕೆವೈಸಿಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಅಲ್ಲಿ ಎಲ್ ಪಿ ಜಿ ಸಿಲಿಂಡರ್ ಕನೆಕ್ಷನ್ (LPG Cylinder Connection) ಪಡೆದಿರುವ ಗ್ರಾಹಕರ ಆಧಾರ್ ವೆರಿಫಿಕೇಶನ್ ಮಾಡಲಾಗುತ್ತದೆ. ಆಧಾರ್ ಕಾರ್ಡ್ ನಂಬರ್ ನೊಂದಿಗೆ ವಿತರಕರ ಬಳಿ ಇರುವ ರೆಕಾರ್ಡ್ಗಳು (Aadhaar number should match with Distributor’s record) ಹೊಂದಾಣಿಯಾದರೆ ಮಾತ್ರ ಮುಂದಿನ ತಿಂಗಳಿನಿಂದ ಎಲ್ಪಿಜಿ ಸಂಪರ್ಕ ಮುಂದುವರಿಯಲಿದೆ ಇಲ್ಲವಾದಲ್ಲಿ ನಿಮ್ಮ ಹೆಸರನ್ನು ಪಟ್ಟಿಯಿಂದ ತೆರವು ಗೊಳಿಸಲಾಗುತ್ತದೆ.

advertisement

Leave A Reply

Your email address will not be published.