Karnataka Times
Trending Stories, Viral News, Gossips & Everything in Kannada

Gruha Jyothi: ರಾಜ್ಯದ ಯಾವುದೇ ಮೂಲೆಯಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ‌ಪಡೆಯುವ ಫಲಾನುಭವಿಗಳಿಗೆ ಬಿಗ್ ಸುದ್ದಿ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಕೂಡ ಬಹಳಷ್ಟು ಪ್ರಚಲಿತ ದಲ್ಲಿದ್ದು ಅದರಲ್ಲಿ ಗೃಹಜ್ಯೋತಿ ಯೋಜನೆಯು ಹೆಚ್ಚು ಪ್ರಸಿದ್ಧಿ ಪಡೆದಿದ್ದು ಹೆಚ್ಚಿನ ಜನರು ಜಿರೋ ವಿದ್ಯುತ್ ಬಿಲ್ ಅನ್ನು ‌ಪಡೆಯುತ್ತಿದ್ದಾರೆ. ಆದರೆ‌ ಗೃಹಜ್ಯೋತಿ (Gruha Jyothi) ಆರಂಭ ವಾದ ಬಳಿಕ ಮಿತಿ ಇಲ್ಲದೆ ಜನರು ಸಿಕ್ಕ ಪಟ್ಟೆ ವಿದ್ಯುತ್ ಅನ್ನು ಖರ್ಚು‌ಮಾಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಅದರಲ್ಲೂ ಈ ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಬಳಕೆ ಬಹಳಷ್ಟು ಹೆಚ್ಚಿದ್ದು ಗೃಹಜ್ಯೋತಿ ಬಳಕೆದಾರರಿಗೆ ರಾಜ್ಯ ಸರಕಾರ ಮಹತ್ವದ ಮಾಹಿತಿ ನೀಡಿದೆ‌.

ಬಳಕೆ ಹೆಚ್ಚಳ:

 

Image Source: Energy Theory

 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 3496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ವಿದ್ಯುತ್ ಕೂಡ ಬಳಕೆ ಯಾಗಿದೆ. ಹಾಗಾಗಿ ವಿದ್ಯುತ್ ಬಳಕೆಯ ಬಗ್ಗೆ ಸರಕಾರ ಅರಿವನ್ನು ಮೂಡಿಸುತ್ತಲೆ ಬಂದಿದೆ.‌ಇದೀಗ ಹೆಚ್ಚುವರಿ ವಿದ್ಯುತ್ ಬಳಕೆಯ ಬಗ್ಗೆ ಮಾಹಿತಿ ನೀಡಿದೆ.

ಹೆಚ್ಚುವರಿ ಬಿಲ್ ಪಾವತಿ ಮಾಡಬೇಕು:

ಗೃಹ ಬಳಕೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (Free Electricity) ನೀಡಿದ್ದು ಹೆಚ್ಚಿನ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಸರಕಾರ 200 ಯುನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ನೀಡಿದ್ದು ಇದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದಲ್ಲಿ ಗ್ರಾಹಕರೇ ವಿದ್ಯುತ್ ಪಾವತಿ ಮಾಡಬೇಕು ಎಂದು ಈಗಾಗಲೇ ಆದೇಶ ದಲ್ಲಿ ತಿಳಿಸಲಾಗಿದೆ.

advertisement

ಎಸಿ ಬಳಕೆ ಹೆಚ್ಚಳ:

 

Image Source: Western Coast Insurance Services

 

ಇಂದು ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಸೆಕೆಯನ್ನು ತಡೆದುಕೊಳ್ಳಲು ಬಹಳಷ್ಟು ಕಷ್ಟ ವಾಗುತ್ತಿದೆ.‌ಅದರಲ್ಲೂ ಇಂದು ಎಸಿ ಬಳಸಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಸಾಮಾನ್ಯ ವಿದ್ಯುತ್ ಬೆಳಕಿಗಿಂತ ಹೆಚ್ಚಿನ ವಿದ್ಯುತ್ ಬೇಕಾಗಿರುತ್ತದೆ. ಅವುಗಳ ನಿರ್ವಹಣೆ ಕೂಡ ದುಬಾರಿ ವೆಚ್ಚದಾಗಿದ್ದು ಇದಕ್ಕೆ ಹೆಚ್ಚು ವಿದ್ಯುತ್ ಬಳಕೆ ಯಾಗಲಿದೆ. ನೀವು ಸಿಕ್ಕಾಪಟ್ಟೆಯಾಗಿ ಎಸಿ ಬಳಕೆ ಮಾಡಿದರೆ ನೀವು ಉಚಿತ ವಿದ್ಯುತ್ ಮಿತಿಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸಿ ಕರೆಂಟ್ ಬಿಲ್ (Current Bill) ಅನ್ನು ಕಟ್ಟ ಬೇಕಾಗುತ್ತದೆ.ಹಾಗಾಗಿ ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎನ್ನುವ ಸೂಚನೆ ‌ನೀಡಿದೆ‌

ಎಸಿ ಬಳಕೆ ಮಾಡುವವರು ಈ ವಿಧಾನ ಅನುಸರಿಸಿ:

ಗ್ರಾಹಕರು ಎಸಿ ಬಳಸುವ ಸಂದರ್ಭದಲ್ಲಿ ಸರಿಯಾದ ಟೆಂಪರೇಚರ್ ಅನ್ನು ಇಟ್ಟು ಬಳಕೆ ಮಾಡಬೇಕು. ಹೀಗೆ ಮಾಡುವುದರಿಂದ ವಿದ್ಯುತ್ ಬಳಕೆಯಲ್ಲಿ ಉಳಿತಾಯ ಮಾಡಬಹುದಾಗಿದೆ.

  • ಇನ್ನು ನೀವು ಎಸಿ ಜೊತೆಗೆ ಫ್ಯಾನ್ ಅನ್ನು ಕೂಡ ನೀವು ಬಳಸ್ತಾ ಇದ್ರೆ ಬಹಳಷ್ಟು ನಷ್ಟ ವಾಗಲಿದೆ.
  • ಇನ್ನು ನೀವು ಅಗತ್ಯ ಬೇಕಾದ ಸಂದರ್ಭದಲ್ಲಿ ಮಾತ್ರ ಎಸಿ ಬಳಕೆ ಮಾಡಿ. ಇದರಿಂದ ನಿಮ್ಮ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ.

ಇನ್ನು ಗೃಹಜ್ಯೋತಿ ಯೋಜನೆ (Gruha Jyothi Yojana) ಯ ಮೂಲಕ‌ ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡ್ತಾ ಇದ್ದು ಈ ಯೋಜನೆಗೆ ಇನ್ನು ಕೂಡ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ಅದರೆ ಹೆಚ್ಚುವರಿ ಬಿಲ್ ಅನ್ನು ಫಲಾನುಭವಿಗಳೇ ಪಾವತಿ ಮಾಡಬೇಕಾಗುತ್ತದೆ‌.

advertisement

Leave A Reply

Your email address will not be published.