Karnataka Times
Trending Stories, Viral News, Gossips & Everything in Kannada

Gruha Jyothi: ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆದವರಿಗೆ ಬೆಳ್ಳಂಬೆಳಗ್ಗೆ ಕಹಿಸುದ್ದಿ!

advertisement

ಕರ್ನಾಟಕದಲ್ಲಿ ಗೃಹಜ್ಯೋತಿ (Gruha Jyothi) ಯೋಜನೆ ಜಾರಿಗೆ ಬಂದಾಗ ಜನರಿಗೆಲ್ಲ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ಘೋಷಣೆ ಮಾಡಲಾಗಿತ್ತು ಈ ಮೂಲಕ ರಾಜ್ಯದ ಜನತೆಗೆಲ್ಲ ಗೃಹ ಜ್ಯೋತಿ ದೊಡ್ಡ ವರದಾನವಾಗಿತ್ತು. ಎಷ್ಟೋ ಜನರ ಪಾಲಿಗೆ ಶೂನ್ಯ ಬಿಲ್ ಕೂಡ ಬಂದಿದ್ದು ದೊಡ್ಡ ಮಟ್ಟಿಗೆ ಇಡೀ ರಾಷ್ಟ್ರದಲ್ಲಿ ಈ ಮಾಹಿತಿ ವೈರಲ್ ಆಗಿದೆ. ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಗೃಹಜ್ಯೋತಿ ಯೋಜನೆಯು ಉಚಿತ ವಿದ್ಯುತ್ ಪಡೆಯುವ ಮೂಲಕವಾಗಿ ಬಡವರ್ಗಕ್ಕೆ ದೊಡ್ಡ ಮಟ್ಟಿಗೆ ಕೊಡುಗೆ ನೀಡಿದೆ. ಆದರೆ ಇದೇ ಗೃಹಜ್ಯೋತಿ ಪಡೆಯುವವರಿಗೆ ಆಘಾತಕಾರಿ ಅಂಶ ಹೊರಬಿದ್ದಿದೆ.

ಯಾವುದು ಆ ಸುದ್ದಿ:

ರಾಜ್ಯದ ಕಾಂಗ್ರೆಸ್ ಯೋಜನೆಯಾದ ಗೃಹಜ್ಯೋತಿ ಬಂದ್ ಆಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಕರ್ನಾಟಕ ವಿದ್ಯುತ್ ನಿಗಮವು ಭಾರೀ ನಷ್ಟದಲ್ಲಿದೆ ಎಂಬ ಮಾಹಿತಿ ಸಹ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಸರಕಾರವು ಯಂತ್ರೋಪಕರಣಗಳನ್ನು ಅಡವಿಟ್ಟು ಕೋಟಿ ಕೋಟಿ ಹಣವನ್ನು ಸಾಲವಾಗಿ ಪಡೆದಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾಗಿ ಎಲ್ಲರಿಗೂ ಈ ವಿಚಾರ ಅಚ್ಚರಿಯ ಜೊತೆಗೆ ದೊಡ್ಡ ಆಘಾತ ಸಹ ನೀಡುತ್ತಿದೆ.

Image Source: Telegraph India

Gruha Jyothi ಯೋಜನೆಗೆ ಎಲ್ಲಿ ಸಾಲ ಪಡೆದದ್ದು:

advertisement

ಕರ್ನಾಟಕ ಸರಕಾರವು ಗೃಹಜ್ಯೋತಿ (Gruha Jyothi) ಅಡಿಯಲ್ಲಿ ಪಡೆದ ಯೋಜನೆಗೆ ಸಮಾನಾಗಿ ಅದರ ವೆಚ್ಚವನ್ನು ಸರಿದೂಗಿಸಬೇಕು ಎಂಬ ಉದ್ದೇಶಕ್ಕಾಗಿ ಕೋಟಿ ಕೋಟಿ ರೂಪಾಯಿ ಸಾಲವನ್ನು ಅಡಮಾನವಿಟ್ಟು ಪಡೆಯುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಬ್ಯಾಂಕ್ ನಲ್ಲಿ ಸರಕಾರದ ಯಂತ್ರೋಪಕರಣಗಳನ್ನು ಅಡವಿಟ್ಟು ಸಾಲ ಪಡೆಯಲಾಗಿದೆ ಎಂಬುದು ತಿಳಿದು ಬಂದಿದೆ. ಹಾಗಾಗಿ ವೆಚ್ಚ ಸರಿ ಮಾಡಲು ಮತ್ತು ಮುಂದಿನ ದಿನದಲ್ಲಿಯೂ ಸಾಲ ನೀಡಬೇಕು ಎಂಬ ಕಾರಣಕ್ಕೆ ಈ ಸಾಲ ಪಡೆಯಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. PFC, RFCಹಾಗೂ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದದ್ದು ತಿಳಿದು ಬಂದಿದೆ.

Gruha Jyothi ಯೋಜನೆಯ ಹಳೆ ಸಾಲವೇ ಇದೆ:

ಕರ್ನಾಟಕ ವಿದ್ಯುತ್ ನಿಗಮವು (Karnataka Vidyut Nigama) ಬಹಳ ಹಿಂದಿನಿಂದಲೇ ಸಾಲ ಪಡೆದಿದೆ. ಮಾಹಿತಿ ಪ್ರಕಾರ 2018ರಿಂದಲೇ 21,821 ಕೋಟಿ ರೂಪಾಯಿ ಸಾಲ ಪಡೆದಿದೆ. 2019- 20 ರಲ್ಲಿ 26,460 ಕೋಟಿ ರೂಪಾಯಿ, 2020-21ರಲ್ಲಿ 26,090ರೂಪಾಯಿ, ಈಗ ಪ್ರಸ್ತುತ 2023 -24ರಲ್ಲಿ 33,345ಕೋಟಿ ರೂಪಾಯಿಗಳನ್ನು ಯಂತ್ರೋಪಕರಣಗಳನ್ನು ಅಡಮಾನ ವಿಟ್ಟು ತರಲಾಗಿದೆ ಎಂದು ಸರಕಾರದ ಮಾಹಿತಿ ಮೂಲಗಳು ತಿಳಿಸಿವೆ. ನಿಗಮದ ಬಂಡವಾಳ ವೆಚ್ಚ ಸರಿದೂಗಿಸಬೇಕು ಎಂಬ ಕಾರಣಕ್ಕೆ ಈ ಸಾಲ ಮಾಡಿರುವುದಾಗಿ ತಿಳಿದು ಬಂದಿದೆ.

Image Source: Oneindia

ಲೋಡ್ ಶೆಡ್ಡಿಂಗ್ ಸಾಧ್ಯತೆ:

ಗೃಹಜ್ಯೋತಿ ಫ್ರೀ ಕರೆಂಟ್ ಆಗಿದ್ದರೂ ಅದರ ಪೂರೈಕೆ ವಿಚಾರ ಸಾಮಾನ್ಯವಲ್ಲ. ಫ್ರೀ ಎಂದು ಬೇಕಾ ಬಿಟ್ಟಿ ಯೂಸ್ ಮಾಡೋರಿಗೆ ಈಗೊಂದು ಆಘಾತಕಾರಿ ವಿಚಾರ ತಿಳಿದಿದೆ. ವಿದ್ಯುತ್ ಪೂರೈಕೆ ಕೂಡ ಕಡಿಮೆ ಇರುವ ಕಾರಣ ಲೋಡ್ ಶೆಡ್ಡಿಂಗ್ ಮಾಡಿ ವೆಚ್ಚ ಸರಿದೂಗಿಸುವ ಜೊತೆಗೆ ವಿದ್ಯುತ್ ಉಳಿಸಲು ಕೂಡ ಸರಕಾರ ಚಿಂತಿಸಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ. 200 ಯುನಿಟ್ ವರೆಗೆ ಉಚಿತ ವಿದ್ಯುತ್ ಸಿಗಲಿದ್ದು ಮುಂದಿನ ದಿನದಲ್ಲಿ ಇದೇ ವ್ಯವಸ್ಥೆ ಮುಂದುವರಿಯಲಿದೆಯಾ ಎಂದು ಕಾದುನೋಡಬೇಕು.

advertisement

Leave A Reply

Your email address will not be published.