Karnataka Times
Trending Stories, Viral News, Gossips & Everything in Kannada

Evtric Ride: ಓಲಾ ಗೆ ನೇರವಾಗಿ ಸೆಡ್ಡು ಹೊಡೆಯಲು ಬಂತು ಇನ್ನೊಂದು ಎಲೆಕ್ಟ್ರಿಕ್ ಬೈಕ್! 145Km ಮೈಲೇಜ್

advertisement

ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲ ಹಾಗೂ ಜನರಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳ (Electric Vehicles) ಬಳಕೆ ಹಾಗೂ ಇದು ಪರಿಸರದ ಮೇಲೆ ಬೀರುವ ಕಡಿಮೆ ಪರಿಣಾಮದಿಂದ ಎಲೆಕ್ಟ್ರಿಕ್ ನ ಹೆಚ್ಚಿನ ವಾಹನಗಳು ರಸ್ತೆ ಮೇಲೆ ಕಾಣ ಸಿಗುತ್ತಿವೆ. ಕಾರುಗಳ ಮಾರ್ಕೆಟ್ ಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸೇಲ್ಸ್ ಕಾಣುತ್ತಿವೆ.

ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ದೈನಂದಿನ ಬಳಕೆಗೆ ಬಳಸುವುದರಿಂದ, ಇವು ನೀಡುವ ರೇಂಜ್ ಹೆಚ್ಚಿನ ಜನರಿಗೆ ಸಾಕಾಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು ಬೈಕು 80 ರಿಂದ 120 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ. ಹೀಗಾಗಿ ಒಂದು ದಿನಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಬೈಕನ್ನು ಚಾರ್ಜ್ ಮಾಡಿಕೊಂಡು ತಮ್ಮ ದೈನಂದಿನ ಕೆಲಸಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಜನರಿಗೆ ಸಾಧ್ಯವಾಗುತ್ತದೆ.
ಹಲವಾರು ದ್ವಿಚಕ್ರ ವಾಹನಗಳ ಇವಿ ಮೋಡಲ್ ಗಳು ಬಂದಿದ್ದರು ಕೂಡ, ಹಲವಾರು ಹೊಸ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡಿದ್ದರು ಕೂಡ ಓಲಾ (OLA), ಏಥರ್ (Ather), ಟಿವಿಎಸ್ (TVS) ಮುಂತಾದ ಕಂಪನಿಗಳ ದ್ವಿಚಕ್ರ ವಾಹನಗಳು ಹೆಚ್ಚು ಸೇಲ್ಸ್ ಕಾಣುತ್ತಿವೆ. ಹೆಚ್ಚಿನ ಜನರು ಈ ವಾಹನಗಳ ಮೇಲೆ ಭರವಸೆ ಇಟ್ಟಿದ್ದಾರೆ. ಅದರಲ್ಲೂ ಓಲಾ ವಾಹನಗಳು ಹೆಚ್ಚಿನ ಸೇಲ್ಸ್ ಕಾಣುತ್ತಿವೆ. ಆದರೆ ಈಗ ಓಲಾ ದ್ವಿಚಕ್ರ ವಾಹನಗಳಿಗೆ ಒಂದು ಬೈಕ್ ಟಕ್ಕರ್ ನೀಡಲು ಮಾರುಕಟ್ಟೆಗೆ ಲಾಂಚ್ ಆಗುತ್ತಿದೆ. ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮ ಮುಂದೆ:

Image Source: BikeDekho

ಎವ್ ಟ್ರಿಕ್ ರೈಡ್ ಎಲೆಕ್ಟ್ರಿಕ್ ಸ್ಕೂಟರ್ (Evtric Ride Electric Scooter)

ಎವ್ ಟ್ರಿಕ್ ರೈಡ್ (Evtric Ride) ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗಿದೆ. ಇದು ಒಂದು ಶಕ್ತಿಯುತವಾದ ಬ್ಯಾಟರಿ ಪ್ಯಾಕ್ ನೊಂದಿಗೆ ಲಾಂಚ್ ಆಗುತ್ತಿದ್ದು ಇದರಲ್ಲಿ 250 ವ್ಯಾಟ್ ನ ಪವರ್ಫುಲ್ ಆದ ಮೋಟಾರ್ ನಿಮಗೆ ಸಿಗಲಿದೆ. ಕೇವಲ ಬ್ಯಾಟರಿ ಹಾಗೂ ಪರ್ಫಾರ್ಮೆನ್ಸ್ ಅಷ್ಟೇ ಅಲ್ಲದೆ ಈ ಬೈಕಿನಲ್ಲಿ ಟ್ಯೂಬ್ಲೆಸ್ ಟೈಯರ್ ಗಳು ಹಾಗೂ ಮುಂದೆ-ಹಿಂದೆ ಎರಡೂ ಕಡೆ ಡಿಸ್ಕ್ ಬ್ರೇಕ್ ನಂತಹ ಆಯ್ಕೆಗಳು ಗ್ರಾಹಕರಿಗೆ ಸಿಗಲಿದೆ.

advertisement

ಎವ್ ಟ್ರಿಕ್ ರೈಡ್ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ಟೈಮ್ ಮತ್ತು ರೇಂಜ್:

ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಿನ ಪ್ರಶ್ನೆಗಳು ಇರುವುದು ಚಾರ್ಜ್ ಎಷ್ಟು ಬೇಗನೆ ಆಗುತ್ತದೆ ಹಾಗೂ ಎಷ್ಟು ರೇಂಜ್ ಸಿಗುತ್ತದೆ ಎಂಬುದಾಗಿ. ಈ ಎರಡೂ ಪ್ರಶ್ನೆಗಳಿಗೆ ಉತ್ತಮ ಸಲ್ಯೂಷನ್ ನೀಡುವ ಬೈಕ್ ಇದಾಗಿದೆ. ಕೇವಲ 2 ಗಂಟೆಗಳಲ್ಲಿ ಈ ಬೈಕ್ ನ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲಿದ್ದು ಒಂದು ಬಾರಿ ಚಾರ್ಜ್ ಮಾಡಿದಲ್ಲಿ 140 ಕಿಲೋಮೀಟರ್ ಗಳ ರೇಂಜ್ ಅನ್ನು ಇದು ನೀಡಲಿದೆ.

Image Source: ET Auto

ಎವ್ ಟ್ರಿಕ್ ರೈಡ್ (Evtric Ride)ಎಲೆಕ್ಟ್ರಿಕ್ ಸ್ಕೂಟರ್ ಬೆಲೆ

ಕೇವಲ ಶಕ್ತಿಯುತವಾದ ಮೋಟಾರ್ ಹಾಗೂ ಉತ್ತಮ ಫೀಚರ್ಸ್ ಗಳನ್ನು ನೀಡುವುದಷ್ಟೇ ಅಲ್ಲದೆ ಈ ಬೈಕು ಉತ್ತಮವಾದ ಬೆಲೆಯೊಂದಿಗೆ ಮಾರುಕಟ್ಟೆಗೆ ಲಾಂಚ್ ಆಗಿದೆ. ಈ ಬೈಕಿನ ಎಕ್ಸ್ ಶೋರೂಮ್ ಬೆಲೆ 86,800 ಆಗಿದೆ. ಈ ಬೆಲೆಯಲ್ಲಿ ಈ ಬೈಕು ಅತ್ಯುತ್ತಮವಾದ ಆಯ್ಕೆ ಆಗಿರುವುದು ಸುಳ್ಳಲ್ಲ.

advertisement

Leave A Reply

Your email address will not be published.