Karnataka Times
Trending Stories, Viral News, Gossips & Everything in Kannada

PMKSY: ದೇಶದ ರೈತರಿಗೆ ಸಿಹಿ ಸುದ್ದಿ ನಾಳೆ 12.30ಕ್ಕೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ!

advertisement

ಭಾರತದ ರೈತರನ್ನು ಕೃಷಿಯಲ್ಲಿ ಉತ್ತೇಜಿಸುವ ಸಲುವಾಗಿ ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ (Pradhan Mantri Kisan Samman Nidhi) ಯನ್ನು ಜಾರಿಗೊಳಿಸಿದರು. ಈ ಯೋಜನೆಯಿಂದ ಕೋಟಿಗಟ್ಟಲೆ ರೈತರು ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಪ್ರತಿ ವರ್ಷವೂ ಭಾರತದ ಎಲ್ಲಾ ರೈತಾಪಿ ವರ್ಗದವರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತಿದೆ.

ಕಳೆದ ಫೆಬ್ರವರಿ 28, 2024 ರಂದು ಹದಿನಾರನೇ ಕಂತಿನ ಹಣವನ್ನು ಹಾಕಲಾಗಿತ್ತು, ಅದರಂತೆ ಈಗ 17ನೇ ಕಂತಿನ ಹಣವನ್ನು (17th Installment Amount) ಇದೇ ತಿಂಗಳು ವರ್ಗಾವಣೆ ಮಾಡಲಾಗುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದ್ದರು, ಹಾಗಾದ್ರೆ ಯಾವೆಲ್ಲ ರಾಜ್ಯದ ರೈತರಿಗೆ ಹಣ ವರ್ಗಾವಣೆಯಾಗಿದೆ? ಅದನ್ನು ಪರಿಶೀಲಿಸುವುದು ಹೇಗೆ ಎಂಬ ಸಂಕ್ಷಿಪ್ತ ವಿವರವನ್ನು ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ಓದಿ.

Pradhan Mantri Kisan Samman Nidhi:

 

Image Source: Y20 India

 

advertisement

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ (PM Narendra Modi) ಅವರು ಹಲವು ವರ್ಷಗಳ ಹಿಂದೆ ರೈತರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಿ, ರೈತಪಿ ವರ್ಗದವರನ್ನು ಕೃಷಿಯಲ್ಲಿ ಉತ್ತೇಜಿಸಲು ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಸುಗಮವಾಗಿಸಲು ಸರ್ಕಾರದ ವತಿಯಿಂದ ಪ್ರತಿ ವರ್ಷವೂ ಧನ ಸಹಾಯ ಮಾಡುತ್ತಾರೆ. ಈ ಯೋಜನೆಯ ಅಡಿಯಲ್ಲಿ ಕೋಟಿಗಟ್ಟಲೆ ರೈತರು ಬರೋಬ್ಬರಿ ಆರು ಸಾವಿರ ರೂಪಾಯಿ ಹಣವನ್ನು ಮೂರು ಕಂತಿನ ರೀತಿ ಸ್ವೀಕರಿಸುತ್ತಿದ್ದರು.

ವರ್ಷದಲ್ಲಿ ಮೂರು ಬಾರಿ 2000 ಹಣ ಸಿಗಲಿದೆ:

ವರ್ಷದಲ್ಲಿ ಮೂರು ಬಾರಿ ರೈತರ ಖಾತೆಗೆ ಎರಡು ಸಾವಿರ ರೂಪಾಯಿ ಹಣ ಜಮೆಯಾಗುತ್ತಿತ್ತು. ಕಳೆದ ಫೆಬ್ರವರಿ ತಿಂಗಳಿನಲ್ಲಿ ಸ್ವತಃ ನರೇಂದ್ರ ಮೋದಿಯವರೇ ಈ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ಫಲಾನುಭವಿಗಳಿಗೆ 2,000 ಹಣವನ್ನು ಜಮೆ ಮಾಡಿಸಿದರು. ಅದರಂತೆ ಎಲೆಕ್ಷನ್ ಬರುವ ಮುನ್ನವೇ ಮುಂದಿನ ಕಂತಿನ ಹಣವನ್ನು ಹಾಕುವುದಾಗಿ ಭರವಸೆಯನ್ನು ನೀಡಲಾಗಿತ್ತು. ಅದರಂತೀಗ 17ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ರೈತರು ತಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.ಇನ್ನು ಮೂಲಗಳ ಪ್ರಕಾರ ನಾಳೆ 12.30 ರೊಳಗೆ ಹಣ ಜಮೆ ಆಗಲಿದೆ ಎನ್ನಲಾಗಿದೆ.

ಹಣ ಜಮೆ ಆಗಿದೆಯಾ? ಎಂಬುದನ್ನು ಈ ಕೆಳಗಿನಂತೆ ಪರಿಶೀಲಿಸಿ:

  1. ಅಂತರ್ಜಾಲದಲ್ಲಿ ಲಭ್ಯವಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಆದ https://pmkisan.gov.in ಭೇಟಿ ನೀಡಿ.
  2. ಬಲಗಡೆಯಲ್ಲಿ ಲಭ್ಯವಿರುವ ವ್ಯೂವ್ ಸ್ಟೇಟಸ್ (View status) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ಆನಂತರ ನಿಮ್ಮ ವೈಯಕ್ತಿಕ ಮಾಹಿತಿಯಾದ ಅಪ್ಲಿಕೇಶನ್ ನಂಬರ್, ಆಧಾರ್ ನಂಬರ್, ಅಕೌಂಟ್ ನಂಬರ್ ಮತ್ತು ಮೊಬೈಲ್ ನಂಬರ್ ಮುಂತಾದವುಗಳನ್ನು ದಾಖಲು ಮಾಡಿ.
  4. ಆನಂತರ ಸಬ್ಮಿಟ್ (Submit) ಮಾಡಿ, ವ್ಯೂವ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆಗೆ ಹಣ ರವಾನೆ ಆಗಿದೆಯೇ ಎಂಬ ಮಾಹಿತಿಯನ್ನು ತಿಳಿಯಬಹುದು.
  5. ಅದೇ ಪುಟದಲ್ಲಿ ಫಾರ್ಮರ್ ಸ್ಟೇಟಸ್ (Farmer status) ಮತ್ತು ಪೇಮೆಂಟ್ ಸ್ಟೇಟಸ್ (Payment Status) ಎರಡನ್ನು ತೋರಿಸಲಾಗುತ್ತದೆ.

advertisement

Leave A Reply

Your email address will not be published.