Karnataka Times
Trending Stories, Viral News, Gossips & Everything in Kannada

Profitable Crop: ಜುಲೈ-ಆಗಸ್ಟ್ ತಿಂಗಳಿನಲ್ಲಿ ಈ ಬೆಳೆ ಬೆಳೆದರೆ ಭರ್ಜರಿ ಆದಾಯ! ಮುಗಿಬಿದ್ದ ರೈತರು

advertisement

ಭಾರತ ಕೃಷಿ ಪ್ರಧಾನ ದೇಶ ಹಾಗಾಗಿ ಇಲ್ಲಿ ರೈತರು ಕಷ್ಟ ಇದ್ದರೂ ಹೆಚ್ಚು ಖರ್ಚು ಇದ್ದರೂ ‌ಕೃಷಿ ಆಸಕ್ತಿ ಕಡಿಮೆ ಮಾಡಿಕೊಂಡಿಲ್ಲ.‌ ಇಂದು ಸರಕಾರ ಕೂಡ ಕೃಷಿಗೆ ಹೆಚ್ಚಿನ ಬೆಂಬಲವನ್ನು ‌ನೀಡುವ ಮೂಲಕ ರೈತರನ್ನು ಪ್ರೋತ್ಸಾಹ ಮಾಡುತ್ತಿದೆ. ಅದೇ ರೀತಿ ಕೃಷಿಗೆ ಬೇಕಾದ ಕೆಲವೊಂದು ಸೌಕರ್ಯಗಳನ್ನು ಕೂಡ ಒದಗಿಸುತ್ತಿದೆ.

ಇಂದು ಕೃಷಿ ಮಾಡ ಬೇಕಾದ್ರೆ ಯಾವ ಕೃಷಿ ಮಾಡಿದ್ರೆ ಹೆಚ್ಚಿನಲಾಭಕರ ಎಂಬುದನ್ನು ಮೊದಲು ನೀವು ತಿಳಿದು ಕೊಳ್ಳಬೇಕು. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಯಾವ ಕೃಷಿಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಈ ಬೆಳೆ ಬೆಳೆಯಬಹುದು:

Tomato Crop:

 

Image Source: EOS Data Analytics

 

ಮಳೆಗಾಲದಲ್ಲಿ ನೀವು ತರಕಾರಿ ಯಾದಂತಹ ಟೊಮೆಟೋ ಬೆಳೆ ಬೆಳೆದರೆ ಬಹಳ ಉತ್ತಮ. ಈ ಸಂದರ್ಭದಲ್ಲಿ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಇರಲಿದೆ. ಇದರಲ್ಲಿ ಮಳೆಗಾಲದ ಸಂದರ್ಭದಲ್ಲಿ ರೋಗಗಳು ಹರಡುವುದು ಕಡಿಮೆ. ಮತ್ತು ಆ ಸಂದರ್ಭದಲ್ಲಿ ಹೆಚ್ಚಿನ ಇಳುವರಿಯನ್ನು ಟೊಮ್ಯಾಟೊ ನೀಡಲಿದೆ.

ದೊಣ್ಣೆ ಮೆಣಸಿನಕಾಯಿ ಮತ್ತು ಹಸಿ ಮೆಣಸಿನ ಕಾಯಿ:

 

Image Source: News18

 

ಅದೇ ರೀತಿ ಈ ಸಂದರ್ಭದಲ್ಲಿ ನೀವು ಈ ಬೆಳೆಯಲ್ಲೂ ಉತ್ತಮ ಇಳುವರಿ ಪಡೆಯಬಹುದು.ಆರರಿಂದ ಏಳು‌ತಿಂಗಳ ವರೆಗೂ ಈ ಬೆಳೆ ಉತ್ತಮ ಇಳುವರಿ ನೀಡಲಿದೆ. ಇದರಲ್ಲಿ‌ರೋಗ ರಹಿತ ಬೀಜವನ್ನು ಮೊದಲು ನೀವು ಆಯ್ಕೆ ಮಾಡಿಕೊಳ್ಳಬೇಕು.80-100ಗ್ರಾಂ ಬೀಜ‌ಬೇಕಾಗಿದ್ದು ಸಮಯಕ್ಕೆ ಸರಿಯಾಗಿ ಕೀಟ ನಿರ್ವಹಣೆ ಮಾಡಿದ್ರೆ ಹೆಚ್ಚಿನ ಲಾಭ ನೀವು ಗಳಿಸಬಹುದಾಗಿದೆ.

advertisement

ಬದನೆಕಾಯಿ ಬೆಳೆ:

 

Image Source: Homes & Gardens

 

ಆದೇ ರೀತಿ ಮಳೆಗಾಲದಲ್ಲಿ ನೀವು ಬದನೆಕಾಯಿ ಬೆಳೆ ಬೆಳೆದರೆ ಮಾರುಕಟ್ಟೆ ಯಲ್ಲಿ ಹೆಚ್ಚಿನ ಬೆಲೆ ಇರಲಿದೆ.‌ ಈ ಸಂದರ್ಭದಲ್ಲಿ ಕೀಟ ನಾಶಕ ಹೆಚ್ಚಿದ್ದರು ನೀವು ಅದರ ನಿರ್ವಹಣೆ ಮಾಡುವ ಮೂಲಕ ಮಾರುಕಟ್ಟೆ ಯಲ್ಲಿ ಉತ್ತಮ ಧಾರಣೆ ಪಡೆಯಬಹುದು.

ಸೊಪ್ಪು ಬೆಳೆಗಳು:

 

Image Source: News18

 

ಅದೇ ರೀತಿ ಮಳೆಗಾಲದಲ್ಲಿ ಸೊಪ್ಪು ಬೆಳೆಗಳಿಗೆ ಹೆಚ್ಚು ಬೇಡಿಕೆ ಇರಲಿದೆ. ಯಾಕಂದ್ರೆ ಈ ಸಂದರ್ಭದಲ್ಲಿ ಸೊಪ್ಪು ಕೊಳೆತು ಹೋಗುವ ಸಂದರ್ಭ ಹೆಚ್ಚು‌. ಹಾಗಾಗಿ ಇದನ್ನು‌ ಬೆಳೆಯುವವರ ಸಂಖ್ಯೆ ಕಡಿಮೆ ಇರಲಿದೆ.ಹಾಗಾಗಿ ಈ ಸಂದರ್ಭದಲ್ಲಿ ಸೊಪ್ಪು ಬೆಳೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಉತ್ತಮ ಫಸಲು ಪಡೆಯಬಹುದು.

ಎಲೆಕೋಸು:

 

Image Source: Yara Ireland

 

ಅದೇ ರೀತಿ ಮಳೆಗಾಲದಲ್ಲಿ ಈ ತರಕಾರಿ ಮಾಡಿದರೂ ಹೆಚ್ಚಿನ ಲಾಭವನ್ನು ನೀವು ಗಳಿಸಬಹುದು.‌ ಈ ತರಕಾರಿಗೂ ಮಳೆಗಾಲದಲ್ಲಿ ಹೆಚ್ಚಿನ ಬೇಡಿಕೆ ಇರಲಿದೆ. ಹಾಗಾಗಿ ಯಾವ ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಮೊದಲು ಆಯ್ಕೆ ಮಾಡಿದ್ರೆ ಒಳಿತು

advertisement

Leave A Reply

Your email address will not be published.