Karnataka Times
Trending Stories, Viral News, Gossips & Everything in Kannada

Passport: ದೇಶಾದ್ಯಂತ ಪಾಸ್ಪೋರ್ಟ್ ವಿಷಯವಾಗಿ ಹೊಸ ಸ್ಕೀಮ್! ಸಂತಸದ ಸುದ್ದಿ

advertisement

ಪಾಸ್ಪೋರ್ಟ್ (Passport) ಮಾಡಿಸಲು ಹಲವರು ಹಲವು ರೀತಿಯಾದಂತಹ ಅಡ್ಡಿ ತಡೆಗಳನ್ನು ಎದುರಿಸುತ್ತಾ ಇರುತ್ತಾರೆ. ಮತ್ತು ಈ ಬಾರಿ ಸರ್ಕಾರವು ಹೊಸ ರೀತಿಯಾದಂತಹ ಯೋಜನೆ ಒಂದನ್ನು ಅನುಷ್ಠಾನಗೊಳಿಸಿದ್ದು ಇದರ ಮೂಲಕ ಪಾಸ್ಪೋರ್ಟ್ ಮಾಡಿಸಿಕೊಳ್ಳುವಂತಹ ವಿಧಾನವು ಕೂಡ ಸುಲಭವಾಗಲಿದೆ. ಮತ್ತು ಪಾಸ್ಪೋರ್ಟ್ ಪಡೆದುಕೊಳ್ಳುವ ಅವಧಿಯು ಕೂಡ ಕಡಿಮೆ ಇರಲಿದೆ. ಹಾಗಾದರೆ ಈ ರೀತಿಯಾಗಿ ಜಾರಿ ಆದಂತಹ ಸ್ಕೀಮ್ ಯಾವುದು ಎಂದರೆ “ತಾತ್ಕಾಲ್ ಸ್ಕೀಮ್” .

ತಾತ್ಕಲ್ ಸ್ಕೀಮ್ (Tatkal Scheme) ಇಂದಾಗುವ ಪ್ರಯೋಜನಗಳು?

ಪಾಸ್ಪೋರ್ಟ್ ಅಪ್ಲೈ ಮಾಡಲು ಮೊದಲು ಮಧ್ಯವರ್ತಿಗಳ ಮೊರೆಯನ್ನು ಹೋಗಬೇಕಿತ್ತು. ಮತ್ತು ಅದರ ಜೊತೆಗೆ ಪಾಸ್ಪೋರ್ಟ್ ತಯಾರಾಗಿ ನಮ್ಮ ಕೈಗೆ ಸೇರುವ ಅಷ್ಟರಲ್ಲಿ ಕನಿಷ್ಠ ಒಂದು ತಿಂಗಳಾದರೂ ಸಮಯ ಹಿಡಿಯುತ್ತಿತ್ತು. ಆದರೆ, ಈ ಬಾರಿ ಕೇಂದ್ರ ಸರ್ಕಾರವು ತಂದಿರುವ ಹೊಸ ಯೋಜನೆ ಅಡಿಯಲ್ಲಿ ಪಾಸ್ಪೋರ್ಟ್ ಮಾಡಿಸಿಕೊಳ್ಳುವವರಿಗೆ ಐದು ದಿನಗಳ ಒಳಗಾಗಿಯೇ ಪಾಸ್ಪೋರ್ಟ್ ಸಿಗುವಂತಹ ಹೊಸ ಅವಕಾಶವನ್ನು ಕೇಂದ್ರ ಸರ್ಕಾರವು ನೀಡಿದೆ.

Image Source: Telegraph India

advertisement

Tatkal Passport Process:

ಇನ್ನು ಯಾರೆಲ್ಲ ಈ ಸ್ಕೀಮ್ ಅಡಿಯಲ್ಲಿ ಪಾಸ್ಪೋರ್ಟ್ ಮಾಡಿಸಿಕೊಳ್ಳಲು ಸಾಧ್ಯ ಇದೆ ಅಥವಾ ಸಾಧ್ಯ ಇಲ್ಲ ಎಂಬುದನ್ನು ತಿಳಿದುಕೊಳ್ಳುವುದಾದರೆ, ಇದರಲ್ಲಿ ದತ್ತು ಪಡೆದ ಮಗು, ತಂದೆ ಅಥವಾ ತಾಯಿ ತೀರಿಕೊಂಡ ಅಪ್ರಾಪ್ತ ಮಗು, ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗು ಈ ರೀತಿಯಾಗಿ ಇರುವವರಿಗೆ ಪಾಸ್ಪೋರ್ಟ್ ಅಪ್ಲೈ ಮಾಡುವ ಅವಕಾಶ ದೊರಕುವುದಿಲ್ಲ. ಇಷ್ಟನ್ನು ಹೊರೆತುಪಡಿಸಿ ಮಿಕ್ಕ ಎಲ್ಲರಿಗೂ ಕೂಡ ಪಾಸ್ಪೋರ್ಟ್ ಅಪ್ಲೈ ಮಾಡುವಂತಹ ಅವಕಾಶವನ್ನು ಸರ್ಕಾರ ಕಲ್ಪಿಸಿದೆ, ಅದು ಕೂಡ ಆನ್ಲೈನ್ ಅಪ್ಲಿಕೇಶನ್ ನ ಮೂಲಕ ಪಾಸ್ಪೋರ್ಟ್ ಅಪ್ಲೈ ಮಾಡುವಂತಹ ಸ್ಕೀಮ್ ಇದಾಗಿದೆ.

Image Source: India TV News

ಇನ್ನು ಈ ತಾತ್ಕಾಲ್ ಸ್ಕೀಮ್ ಅಡಿಯಲ್ಲಿ ಮಾಡಿಸಿಕೊಳ್ಳುವಂತಹ ಪಾಸ್ಪೋರ್ಟ್ ನ ಬೆಲೆಯು 3500 ಆಗಿದ್ದು, ಸಾಮಾನ್ಯವಾಗಿ ಮಾಡಿಸಿಕೊಳ್ಳುವಂತಹ ಪಾಸ್ಪೋರ್ಟ್ ನ ಬೆಲೆ 1500 ಆಗಿದೆ. ಆದರೆ ಇದರಿಂದ ಸುಲಭವಾಗಿ ಐದು ದಿನಗಳಲ್ಲಿಯೇ ನಾವು ಪಾಸ್ಪೋರ್ಟ್ ಅನ್ನು ಹೊಂದಬಹುದಾಗಿದೆ. ಇನ್ನು ಆಕಸ್ಮಿಕವಾಗಿ ನಮ್ಮ ಪಾಸ್ಪೋರ್ಟ್ ಕಳೆದು ಹೋದಲ್ಲಿ  ಮತ್ತೆ ಪಾಸ್ಪೋರ್ಟ್ ಅನ್ನು ಮಾಡಿಸಿಕೊಳ್ಳುವಂತಹ ಅವಕಾಶ ಸಿಕ್ಕುವುದಿಲ್ಲ. ಜೊತೆಗೆ ಯಾವುದೇ ರೀತಿಯಾದಂತಹ ಹೆಸರನ್ನು ಕೂಡ ಬದಲಾಯಿಸುವಂತಹ ಅವಕಾಶವನ್ನು ಕೂಡ ಕಲ್ಪಿಸಲಾಗಿಲ್ಲ. ಆದ್ದರಿಂದ ಸರಿಯಾದ ದಾಖಲೆಗಳೊಂದಿಗೆ ಈ ಯೋಜನೆ ಅಡಿಯಲ್ಲಿ ಸುಲಭವಾಗಿ ಪಾಸ್ಪೋರ್ಟ್ ಮಾಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

advertisement

Leave A Reply

Your email address will not be published.