Karnataka Times
Trending Stories, Viral News, Gossips & Everything in Kannada

Indian Railway: ರೈಲಿನಲ್ಲಿ ಲಗೇಜ್ ಹಾಗು ಅಮೂಲ್ಯವಾದ ವಸ್ತುಗಳನ್ನು ತಗೆದುಕೊಂಡು ಹೋಗುವವರಿಗೆ ಸಿಹಿಸುದ್ದಿ! ರೈಲ್ವೇ. ನಿಯಮ ಬದಲು

advertisement

GOOD NEWS FROM INDIAN RAILWAY: ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಮೂರು ಕೋಟಿಗೂ ಪ್ಯಾಸೆಂಜರ್ಸ್(3 crore passenger) ಗಳು ಪ್ರಯಾಣಿಸುತ್ತಲೇ ಇರುತ್ತಾರೆ. ಪ್ರಪಂಚದ ಅತಿ ದೊಡ್ಡ ರೈಲ್ವೆ ಸಂಸ್ಥೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವ ಭಾರತೀಯ ರೈಲ್ವೆ(Indian Railway) ಪ್ರಯಾಣಿಕರಿಗೆ ನಾನಾ ರೀತಿಯಾದಂತಹ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಈ ಕಾರಣದಿಂದ ಪ್ರಯಾಣಿಕರು ದೂರದೂರಿಗೆ ಪ್ರಯಾಣ ಬೆಳೆಸಲು ರೈಲ್ವೆ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಹಲವು ದಿನಗಳ ಕಾಲ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿರುತ್ತಾರೆ.

ರೈಲ್ವೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಮತ್ತೊಂದು ವಿಶೇಷ ಸೌಲಭ್ಯ!

ರೈಲ್ವೆ ಇಲಾಖೆಯು(Railway Department) ಜನರಿಗೆ ಅನುಕೂಲವಾಗುವ ಸಾಕಷ್ಟು ಸೌಲಭ್ಯವನ್ನು ಒದಗಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇನ್ನು ಸಾಕಷ್ಟು ವಿಚಾರಗಳಲ್ಲಿ ರೈಲ್ವೆ ಮುಂದುವರೆಯಬೇಕಿದೆ. ಉದಾಹರಣೆಗೆ ರೈಲಿನಲ್ಲಿ ಪ್ರಯಾಣಿಸುವ ಪ್ಯಾಸೆಂಜರ್ಸ್ಗಳ ಅಮೂಲ್ಯವಾದ ವಸ್ತು/ಲಗೇಜ್ಗಳು ಪ್ರತಿನಿತ್ಯ ಕಳುವಾಗುತ್ತಲೇ ಇರುತ್ತದೆ. ಇದನ್ನು ತಡೆಯುವ ಯಾವ ವ್ಯವಸ್ಥೆಯನ್ನು ರೈಲ್ವೆ ಸಂಸ್ಥೆ ಇಂದಿಗೂ ಮಾಡಿಲ್ಲ. ಪ್ರಯಾಣಿಸುವಾಗ ನಿಮ್ಮ ಲಗೇಜ್ ಅಥವಾ ಅಮೂಲ್ಯವಾದ ವಸ್ತುಗಳು ಕಳುಹಿಸಿದರೆ ಅದಕ್ಕೆ ನೀವು ಜವಾಬ್ದಾರರಾಗಿರುತ್ತೀರಾ, ಹಾಗೂ ರೈಲ್ವೆ ಇಲಾಖೆಯಿಂದ ಇದಕ್ಕೆ ಯಾವುದೇ ರೀತಿಯ ಪರಿಹಾರ ಧನ(compensation) ದೊರಕುವುದಿಲ್ಲ. ಇನ್ಮುಂದೆ ಈ ನಿಯಮದಲ್ಲಿ ಕೆಲ ಬದಲಾವಣೆ ಉಂಟಾಗಲಿದೆ.

advertisement

Image source: informalnewz

ನಿಮ್ಮ ಲಗೇಜ್ ಕಳುವಾದರೆ ಅದಕ್ಕೆ ರೈಲ್ವೆ ಅಧಿಕಾರಿಗಳು ಪರಿಹಾರ ಧನ ನೀಡುತ್ತಾರೆ!

ನೀವೇನಾದರೂ ಕಾಯ್ದಿರಿಸಿದ ಕಂಪಾರ್ಟ್ಮೆಂಟ್ನಲ್ಲಿ(Reserved Compartment)ಪ್ರಯಾಣ ಬೆಳೆಸುತ್ತಿರುವಾಗ ನಿಮ್ಮ ಬಳಿ ಇರುವಂತ ಅಮೂಲ್ಯವಾದ ವಸ್ತುವನ್ನು ಕಳ್ಳಕಾಕರು ಕದ್ದು ಪರಾರಿಯಾಗಿ, ನೀವು ಆರ್ಥಿಕ ಸಂಕಷ್ಟಕ್ಕೆ ನೀವು ಗುರಿಯಾದರೆ, ರೈಲ್ವೆ ಇಲಾಖೆಯಿಂದ ಪರಿಹಾರ ದೊರಕುತ್ತದೆ. ಹೌದು ಸ್ನೇಹಿತರೆ ಇನ್ಮುಂದೆ ರಿಸರ್ವ್ಡ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹಾಗೂ ಅವರು ತಂದಿರುವ ವಸ್ತುಗಳ ಸಂಪೂರ್ಣ ಜವಾಬ್ದಾರಿ ಟ್ರೈನಿನ ಟಿಟಿಇ ಹಾಗೂ ಕೋಚ್ ಅಟೆಂಡೆಂಟ್(TTE and Coach Attendant) ಅವರದ್ದೇ ಆಗಿರುತ್ತದೆ. ರೈಲಿನೊಳಗೆ ಕಳ್ಳರು ಬಾರದಂತೆ ತಡೆಯುವುದು ಅದರ ಜವಾಬ್ದಾರಿಯಾಗಿರುತ್ತದೆ.

ಕಳೆದ ವರ್ಷ ಚಂಡಿಗರ್ ಮೂಲದ ಯುವಕನಿಗೆ ಇದೇ ರೀತಿಯಾದ ಪ್ರಸಂಗ ಎದುರಾಗಿತ್ತು ರಿಸರ್ವ್ಡ್ ಕಂಪಾರ್ಮೆಂಟ್(Reserved Compartment) ನಲ್ಲಿ ಪ್ರಯಾಣಿಸುತ್ತಿರುವಾಗ ಕಳ್ಳರು ಅವನ ಬಳಿ ಇದ್ದಂತಹ ₹50,000 ಹಣವನ್ನು ದೋಚಿಪರಾರಿಯಾಗಿದ್ದರು. ಈ ಕುರಿತು ಕನ್ಸ್ಯುಮರ್ ಫೋರಂ(Consumer Forum) ತನಿಖೆ ನಡೆಸಿ ರೈಲ್ವೆ ಇಲಾಖೆ ಯುವಕನ ಮೊತ್ತವನ್ನು ಹಾಗೂ ಪರಿಹಾರ ಧನವನ್ನು ನೀಡುವಂತೆ ಆದೇಶಿಸಿತ್ತು. ಅದರಂತೆ ಇನ್ನು ಮುಂದೆ ಟ್ರೈನಿನೊಳಗೆ ಅನುಮಾನಾಸ್ಪದ ವ್ಯಕ್ತಿಗಳು ಬಾರದಂತೆ ತಡೆಯುವುದು ಟಿಟಿಇ ಮತ್ತು ಅಟೆಂಡೆಂಟ್ ಗಳ ಜವಾಬ್ದಾರಿ ಆಗಿರುತ್ತದೆ. ಅವರ ಬೇಜವಾಬ್ದಾರಿತನದಿಂದ ಪ್ಯಾಸೆಂಜರ್ ನಷ್ಟಕ್ಕೆ ಒಳಗಾದರೆ ಅದನ್ನು ಇನ್ನು ಮುಂದೆ ರೈಲ್ವೆ ಭರಿಸಲಿದೆ.

advertisement

Leave A Reply

Your email address will not be published.