Karnataka Times
Trending Stories, Viral News, Gossips & Everything in Kannada

Indian Railways: ರೈಲಿನಲ್ಲಿ ಊಟ ಮಾಡುವ ಹಿರಿಯರು, ಯುವಕರು, ಮಹಿಳೆಯರು ಸೇರಿ ದೇಶದ ಎಲ್ಲಾ ಜನರಿಗೂ ಗುಡ್ ನ್ಯೂಸ್!

advertisement

ಇತ್ತೀಚಿನ ದಿನಗಳಲ್ಲಿ ರೈಲು ಪ್ರಯಾಣ ಮಾಡುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಅಗ್ಗದ ಹಣದೊಂದಿಗೆ ಹೆಚ್ಚು ದೂರ ಕೂಡ ಪ್ರಯಾಣ ಮಾಡಲು ಅನುಕೂಲ ಎಂದು ರೈಲು ಪ್ರಯಾಣ ವನ್ನೇ ಹೆಚ್ಚಿನ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ರೈಲ್ವೆ ಇಲಾಖೆ ಕೂಡ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಹೊಸ ಸೌಲಭ್ಯ ಗಳನ್ನು ಸಹ ನೀಡುತ್ತಿದೆ. ಇದೀಗ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ‌ ಊಟ ನೀಡುವ ಸೌಲಭ್ಯ ವಿಚಾರವಾಗಿಯು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

ಟಿಕೆಟ್ ಬುಕ್ಕಿಂಗ್ ಕೂಡ ಸುಲಭ:

ಈ ಡಿಜಿಟಲ್ ಯುಗದಲ್ಲಿ ಟಿಕೆಟ್ ಬುಕ್ಕಿಂಗ್ ಕೂಡ ಸುಲಭ,ರೈಲು ಪ್ರಯಾಣ ಈಗ ಮತ್ತಷ್ಟು ಸುಲಭ ವಾಗಿದ್ದು ಇಂದು ಮನೆಯಲ್ಲೇ ಕುಳಿತು ಆರಾಮವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಅದೇ ರೀತಿ ರೈಲಿನೊಳಗೆ ಟಿಕೆಟ್ ನೀಡುವ ಸೌಲಭ್ಯವನ್ನೂ ಕೂಡ ರೈಲ್ವೇ ಇಲಾಖೆ ಆರಂಭ ಮಾಡಿದ್ದು ಈ ಸೌಲಭ್ಯದ ಮೂಲಕ ಟಿಕೆಟ್ ಇಲ್ಲದ ಪ್ರಯಾಣಿಕರು ಟಿಟಿಇಯನ್ನು ಸಂಪರ್ಕಿಸಿ ಟಿಕೆಟ್ ಪಡೆದು ಪ್ರಯಾಣ ಮಾಡಬಹುದಾಗಿದೆ.

ಹೊಸ ಸೌಲಭ್ಯ ಜಾರಿಗೆ ತಂದಿದೆ:

 

Image Source: The Hindu

 

ಇದೀಗ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಆರೋಗ್ಯಕರ ಊಟವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದೊಂದಿಗೆ ಭಾರತೀಯ ರೈಲ್ವೆ ಎಕಾನಮಿ ಮೀಲ್ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದು ರೈಲು ಪ್ರಯಾಣಿಕರಿಗೆ ಈ ವಿಚಾರ ಬಹಳಷ್ಟು ಖುಷಿ ನೀಡಿದೆ. ರೈಲು ಪ್ರಯಾಣ ಮಾಡುವವರು ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ, ಕಡಿಮೆ ವೆಚ್ಚದಲ್ಲಿ ಊಟವನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ.

advertisement

ಎಷ್ಟು ಮೊತ್ತ ಇರಲಿದೆ:

 

Image Source: Medium

 

ಪ್ರಯಾಣಿಕರು ಎಕಾನಮಿ ಮೀಲ್ಸ್ ಮೂಲಕ‌ ಹೊಟ್ಟೆ ಹಸಿವು ತಗ್ಗಿಸಿಕೊಳ್ಳಲು ಬಜೆಟ್ ಫ್ರೆಂಡ್ಲಿ ಆಗಿದ್ದು, 20 ರೂಪಾಯಿಗೆ ಆಹಾರ ಲಭ್ಯವಿದೆ.ಹಾಗಾಗಿ ಇನ್ಮುಂದೆ 20 ರೂ.ಗಳ ಬೆಲೆಯ ಎಕಾನಮಿ ಮೀಲ್ ಅನ್ನು ಸಹ ಪಡೆಯಬಹುದು‌. ಅದೇ ರೀತಿ ಸ್ನ್ಯಾಕ್ ಮೀಲ್ ಇದರಲ್ಲಿ ಇದು ಎಕಾನಮಿ ಮೀಲ್ಸ್‌ಗಿಂತ ಸ್ವಲ್ಪ ಹೆಚ್ಚಿನ ಮೊತ್ತದ್ದು ಆಗಿದ್ದು ಇದು 50 ರೂಪಾಯಿಗೆ ಲಭ್ಯವಿದೆ.

ಎಲ್ಲಿ ಲಭ್ಯವಿದೆ?

ರೈಲ್ವೆ ಪ್ಲಾಟ್ ಫಾರ್ಮ್ ಗಳಲ್ಲಿ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳ ಬಳಿ ಇರುವ ಕೌಂಟರ್ ಗಳಲ್ಲಿ ಈ ಊಟ ಲಭ್ಯವಿದೆ. ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಈ ಫುಡ್ ಕೌಂಟರ್ ಅನ್ನು ರೈಲ್ವೆ ಇಲಾಖೆ ಆರಂಭ ಮಾಡಿದೆ.

ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ, ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ನಿಲ್ಲುವ ಫ್ಲಾಟ್‌ಫಾರಂ ನ ಬಳಿ ಇಂತಹ ಫುಡ್‌ ಕೌಂಟರ್‌ಗಳು ಈಗಾಗಲೇ ಇದೆ ಹಾಗಾಗಿ ರೈಲು ಪ್ರಯಾಣಿಕರು ಕೈಗೆಟುಕುವ ದರದ ಊಟ ಮತ್ತು ತಿಂಡಿಗಳನ್ನು ಪ್ರಯಾಣದ ಸಂದರ್ಭದಲ್ಲಿ ಪಡೆಯಬಹುದಾಗಿದೆ.

advertisement

Leave A Reply

Your email address will not be published.