Karnataka Times
Trending Stories, Viral News, Gossips & Everything in Kannada

Indian Oil: ಫುಲ್ ಟ್ಯಾಂಕ್ ಪೆಟ್ರೋಲ್ ಡೀಸೆಲ್ ಹಾಕಿಸುವ ಎಲ್ಲರಿಗೂ ಹೊಸ ಸೂಚನೆ! ಇಂಡಿಯಿನ್ ಆಯಿಲ್ ಘೋಷಣೆ

advertisement

ಇಂದು ವಾಹನಗಳ ಖರೀದಿ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ.‌ಅದರ ಜೊತೆ ವಾಹನ ಸವಾರರು ತಮ್ಮ ಸುರಕ್ಷತೆ ಬಗ್ಗೆ ಎಚ್ಚೆತ್ತುಕೊಳ್ಳುವುದು ಸಹ ಬಹಳ ಮುಖ್ಯ. ಇಂದು ರಸ್ತೆಯಲ್ಲಿ ವಾಹನ ಸವಾರರು ಬೇಕಾ ಬಿಟ್ಟಿಯಾಗಿ ವಾಹನ ಚಲಾವಣೆ ಮಾಡಿ ಪ್ರಾಣ ಕಳೆದು ಕೊಂಡ ಘಟನೆಗಳು ಸಹ ನಡೆದಿದೆ.ಹಾಗಾಗಿ ಸಾರಿಗೆ ಇಲಾಖೆ ಹೊಸ ಹೊಸ ನೀತಿ ನಿಯಮ ಜಾರಿಗೆ ತರುತ್ತಲೆ ಇರುತ್ತದೆ.ಅದೇ ರೀತಿ ವಾಹನಕ್ಕೆ ಸಂಬಂಧ ಪಟ್ಟಂತೆ ಇದೀಗ ಸುಳ್ಳು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಈ ಸುದ್ದಿ ವೈರಲ್ ಆಗುತ್ತಿದೆ

ಈ ಬೇಸಿಗೆಯಲ್ಲಿ ನಿಮ್ಮ ವಾಹನಗಳಿಗೆ ಪುಲ್ ಟ್ಯಾಂಕ್ ಪೆಟ್ರೋಲ್, ಡೀಸೆಲ್ ಹಾಕಿಸಬಾರದು.ಹಾಗೇ ಹಾಕಿದ್ದಲ್ಲಿ ಈ ಬಿಸಿಲಿಗೆ ನಿಮ್ಮ ವಾಹನ ಬ್ಲಾಸ್ಟ್ ಆಗಿ ಹೊತ್ತಿಕೊಳ್ಳೋ ಸಾಧ್ಯತೆ ಇದೆ,ಈ ಬಗ್ಗೆ ಜಾಗೃತೆ ವಹಿಸಿ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಇಂಡಿಯನ್ ಆಯಿಲ್ (Indian Oil) ಸ್ಪಷ್ಟನೆ ಪಡಿಸಿದೆ.

ನಕಲಿ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಈ ಸಂದೇಶವು ನಕಲಿ ಎಂದು ಇಂಡಿಯನ್ ಆಯಿಲ್ ಇದೀಗ ತಿಳಿಸಿದೆ. ಆಧುನಿಕ ಇಂಧನ ಟ್ಯಾಂಕ್ ಗಳನ್ನು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ವಿನ್ಯಾಸ ಗೊಳಿಸಲಾಗಿದೆ.ಒಂದು ವೇಳೆ ಆ ರೀತಿ ನಿಯಮ ಇದ್ದಲ್ಲಿ ಅದರ ನೋಟಿಫಿಕೇಶನ್ ಅನ್ನು ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ ಇದು ನಕಲಿ ವಿಚಾರ ಎಂದು ಸ್ಪಷ್ಟನೆ ‌ಪಡಿಸಿದೆ.

advertisement

Image Source: Mint

ಸುರಕ್ಷಿತವಾಗಿದೆ

ವಾಹನ ತಯಾರಕರು ಒಂದು ವಾಹನದ ‌ ಎಲ್ಲಾ ಗುಣಮಟ್ಟದ ಅಂಶಗಳನ್ನು ಸುರಕ್ಷತಾ ಅಂಶ ಗಳೊಂದಿಗೆ ಪರಿಶೀಲನೆ ‌ಮಾಡಿ ವಾಹನಗಳನ್ನು ವಿನ್ಯಾಸ ಗೊಳಿಸುತ್ತಾರೆ. ಪೆಟ್ರೋಲ್ ,ಡೀಸೆಲ್ ವಾಹನಗಳಿಗೆ ಇಂಧನ ಟ್ಯಾಂಕ್ ನಲ್ಲಿ ನಿಗದಿಪಡಿಸಿರುವ ಗರಿಷ್ಠ ಪ್ರಮಾಣವು ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಯಾವುದೇ ಸಂದರ್ಭದಲ್ಲಿ ತಯಾರಕರು ತಿಳಿಸಿದ ಗರಿಷ್ಠ ಮಿತಿಯವರೆಗೆ ವಾಹನಗಳಲ್ಲಿ ಇಂಧನವನ್ನು ಹಾಕುವುದು ಸುರಕ್ಷಿತವಾಗಿದೆ.ಇದರಿಂದ ಯಾವುದೇ ಸಮಸ್ಯೆ ‌ಇಲ್ಲ ಎಂದು ಮಾಹಿತಿ ನೀಡಿದೆ.

ಮನವಿ ಮಾಡಿದೆ

ಯಾವ ವಾಹನದಲ್ಲೂ ಕೂಡ ಸಾಮರ್ಥ್ಯಕ್ಕಿಂತ ಸ್ವಲ್ಪ ಹೆಚ್ಚು ಇಂಧನ ತುಂಬಿಸಿದರೂ ಏನೂ ಸಮಸ್ಯೆ ಇಲ್ಲ. ಇಂತಹ ಸುಳ್ಳು ಮಾಹಿತಿಯನ್ನು ಜನರು ನಂಬಬಾರದು. ಇಂತಹ ಸುದ್ದಿಯ ಬಗ್ಗೆ ಕಂಪನಿಯ ವೆಬ್ಸೈಟ್ ಅಥವಾ ಸರ್ಕಾರಿ ವೆಬ್ಸೈಟ್ ಮತ್ತು ಪತ್ರಿಕೆಗಳಲ್ಲಿ ಇದ್ದರೆ ನೀವು ಪರೀಶಿಲನೆ ಮಾಡಬೇಕು. ಅಂತಹ ವದಂತಿಗಳನ್ನು ನಿರ್ಲಕ್ಷಿಸಲು ಸಾರ್ವಜನಿಕರಿಗೆ ಇದೀಗ ಮನವಿ ಮಾಡಿದ್ದಾರೆ.

advertisement

Leave A Reply

Your email address will not be published.