Karnataka Times
Trending Stories, Viral News, Gossips & Everything in Kannada

RBI: ಬೆಳ್ಳಂಬೆಳಿಗ್ಗೆ ರಿಸರ್ವ್ ಬ್ಯಾಂಕ್ ಘೋಷಣೆ! ಈ ಬ್ಯಾಂಕ್ ಮೇಲೆ ನಿರ್ಬಂಧ ಹೇರಿಕೆ, ಹಣ ತಗೆಯುವಂತಿಲ್ಲ

advertisement

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಪ್ರತಿಯೊಂದು ಆರ್ಥಿಕ ವ್ಯಕ್ತಿಯ ನಿಯಮಾವಳಿಗಳನ್ನು ರೂಪಿಸುವುದು ಹಾಗೂ ಪ್ರತಿಯೊಂದು ವಿಚಾರಗಳನ್ನ ನಿಯಂತ್ರಿಸುವಂತಹ ಕೆಲಸವನ್ನು ಮಾಡುವಂತಹ ಸಂಸ್ಥೆಯಾಗಿದೆ. ಇತ್ತೀಚಿಗಷ್ಟೇ ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ಇರುವಂತಹ ಕೋನಾರ್ಕ್ ಅರ್ಬನ್ ಬ್ಯಾಂಕ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕಿಂಗ್ ಕೆಲಸಗಳನ್ನು ನಡೆಸುವುದಕ್ಕೆ ಗ್ರಾಹಕರಿಗೆ ತಡೆಯನ್ನು ಒಡ್ಡಿದೆ. ಬನ್ನಿ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

RBI ನಿಂದ ಬಂದಿದೆ ಹೊಸ ಆಜ್ಞೆ. ಈ ಬ್ಯಾಂಕ್ನಿಂದ ಹಣ ಪಡೆಯೋ ಹಾಗಿಲ್ಲ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೊನಾರ್ಕ್ ಅರ್ಬನ್ ಬ್ಯಾಂಕಿ (Konark Urban Bank) ನ ಮೇಲೆ 1949ರ ಆಕ್ಟ್ 35 ರ ಪ್ರಕಾರ ನಿರ್ಬಂಧವನ್ನು ಹೇರಿದೆ. ಗ್ರಾಹಕರು ಈ ಬ್ಯಾಂಕಿನಲ್ಲಿ ಇಟ್ಟಿರುವಂತಹ ಹಣದಲ್ಲಿ ಕೇವಲ 5 ಲಕ್ಷ ರೂಪಾಯಿಗಳನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಿದೆ. ಅದು ಕೂಡ ರಿಸರ್ವ್ ಬ್ಯಾಂಕಿನ ಅಡಿಯಲ್ಲಿ ಕೆಲಸ ಮಾಡುವಂತಹ ಇನ್ಸೂರೆನ್ಸ್ ನಿಯಮಗಳ ಪ್ರಕಾರ ಜಾರಿಯಲ್ಲಿರುತ್ತೆ.

advertisement

ಮಾಹಿತಿ ಪ್ರಕಾರ ಈ ಬ್ಯಾಂಕಿನಲ್ಲಿ ಯಾವುದೇ ರೀತಿಯ ಹೊಸ ಹೂಡಿಕೆಯನ್ನು ಹಾಗೂ ಇರುವಂತಹ ಸಾಲವನ್ನು ನವೀಕರಣ ಮಾಡುವುದಕ್ಕೆ ಕೂಡ ಸಾಧ್ಯವಿಲ್ಲ ಎಂಬುದಾಗಿ ತಿಳಿದು ಬಂದಿದೆ. ಈ ಬ್ಯಾಂಕಿನಲ್ಲಿ ಯಾವುದೇ ರೀತಿಯ ಟ್ರಾನ್ಸಾಕ್ಷನ್ ಅನ್ನು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳಿಗೆ ವಿರುದ್ಧವಾಗಿ ಮಾಡುವ ಹಾಗಿಲ್ಲ ಅನ್ನೋದನ್ನ ಕೂಡ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಕೇವಲ ಈ ಬ್ಯಾಂಕಿಗೆ ಮಾತ್ರ ಅಲ್ಲ ರಿಜರ್ವ್ ಬ್ಯಾಂಕಿನ ಆದೇಶದ ಮೇರೆಗೆ ನಿರ್ಬಂಧವನ್ನು ಹೇರಿರುವ ಪ್ರತಿಯೊಂದು ಬ್ಯಾಂಕಿನಲ್ಲಿ ಕೂಡ ನೀವು ಇದನ್ನೇ ಪಾಲಿಸಬೇಕಾಗಿರುತ್ತದೆ.

Image Source: CNBC

ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಮೂಲಕ ಈ ಬ್ಯಾಂಕಿನಲ್ಲಿ ನೀವು ಉಳಿತಾಯ ಖಾತೆಯಲ್ಲಿ ಜಮ ಮಾಡಿರುವಂತಹ ಹಣವನ್ನು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಆದರೆ ಈ ಬ್ಯಾಂಕಿನಿಂದ ಪಡೆದುಕೊಂಡಿರುವಂತಹ ಸಾಲದ ಮರುಪಾವತಿಯನ್ನು ಮಾಡೋದಕ್ಕೆ ಹಣವನ್ನ ನೀಡಬಹುದಾಗಿದೆ. ಈ ಬ್ಯಾಂಕಿನ ಗ್ರಾಹಕರು ಇದು ಬ್ಯಾಂಕನ್ನು ಮುಚ್ಚುವುದಕ್ಕಾಗಿ ಮಾಡ್ತಾ ಇದ್ದಾರೆ ಎಂಬುದಾಗಿ ತಪ್ಪು ಭಾವನೆಯಲ್ಲಿ ಇರಬಾರದು ಯಾಕೆಂದರೆ ಕೋನಾರ್ಕ್ ಅರ್ಬನ್ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವೊಂದು ಕಠಿಣ ನಿಯಮಗಳ ಮೂಲಕ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯನ್ನು ಮತ್ತೆ ಸುಧಾರಿಸುವ ನಿಟ್ಟಿನಲ್ಲಿ ಈ ಕೆಲವೊಂದು ಕಟ್ಟುನಿಟ್ಟಿನ ಕ್ರಮವನ್ನು ಕೈ ತೆಗೆದುಕೊಳ್ಳುತ್ತಿದೆ. ಹೀಗಾಗಿ ಈ ಬ್ಯಾಂಕಿನ ಗ್ರಾಹಕರು ಯಾವುದೇ ಕಾರಣಕ್ಕೂ ಚಿಂತೆ ಪಡಬೇಕಾದ ಅಗತ್ಯ ಇರುವುದಿಲ್ಲ.

advertisement

Leave A Reply

Your email address will not be published.