Karnataka Times
Trending Stories, Viral News, Gossips & Everything in Kannada

Vijayalakshmi Darshan: ಪ್ರೇಮಿಗಳ ದಿನದಂದು ಮಗನ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್, ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು!

advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challengind Star Darshan) ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟನಾಗಿದ್ದು ಮೊನ್ನೆಯಷ್ಟೆ ಬಿಡುಗಡೆ ಗೊಂಡ ಕಾಟೇರ ಚಿತ್ರ ಬಹಳಷ್ಟು ಸಕ್ಸಸ್ ಪಡೆದಿತ್ತು. ಹೆಚ್ಚು ಕಲೆಕ್ಷನ್ ಮಾಡುವ ಮೂಲಕವು ಸದ್ದು ಕೂಡ ಮಾಡಿದೆ. ಇವರ ಅಭಿಮಾನಿಗಳ ಸಂಖ್ಯೆ ಬಹಳಷ್ಟು ಮಂದಿ ಇದ್ದು, ಮುಂದಿನ‌ ಚಿತ್ರದ ತಯಾರಿಯಲ್ಲಿ ನಟ ದರ್ಶನ್ ಇದ್ದಾರೆ. ಅದೇ‌ ರೀತಿ ದರ್ಶನ್ ಅವರು ವೈಯಕ್ತಿಕ ವಿಚಾರದಲ್ಲೂ ಸುದ್ದಿ ಯಾಗ್ತಾರೆ. ಮೊನ್ನೆಯಷ್ಟೆ ದರ್ಶನ್ ಅವರ ಜೊತೆಗೆ ಇರುವ ಫೋಟೋಗಳನ್ನು ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಅಕ್ರೋಶ ಕೂಡ ಹೊರಹಾಕಿದ್ದರು.

ಆಕ್ರೋಶಕ್ಕೆ ಕಾರಣವೇನು?

ಪವಿತ್ರ ಗೌಡ (Pavitra Gowda) ಅವರು ದರ್ಶನ್ ಜೊತೆಗೆ ನಮ್ಮ ಸಂಬಂಧಕ್ಕೆ 10 ವರ್ಷ ಎಂದು ಬರೆದು ಕೊಂಡಿರುವುದೇ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗಳು ನಡೆದಿದ್ದವು. ಇದಕ್ಕೆ ಪ್ರತ್ಯುತ್ತರ ವಾಗಿ ನಟಿ ಪವಿತ್ರ ಗೌಡ ಕೂಡ ಉತ್ತರ ‌ನೀಡಿದ್ದರು‌.ತದ ನಂತರ ಈ ವಿಚಾರ ತಣ್ಣಗಾಗಿತ್ತು. ಇದೀಗ ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಮತ್ತು ಅವರ ಮಗನ‌ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

 

advertisement

ಮಗನ‌ಜೊತೆ ಪೋಟೋ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್(Vijayalakshmi Darshan):

ಇಂದು ಪ್ರೇಮಿಗಳಿಗೆ ವ್ಯಾಲೆಂಟೈನ್ಸ್ ಡೇಯ ಸಂಭ್ರಮ ಜೋರಾಗಿತ್ತು. ಅದೇ ರೀತಿ ಇಂದು ಪ್ರೇಮಿಗಳ ದಿನ ಆಗಿರುವುದರಿಂದ ವಿಜಯಲಕ್ಷ್ಮಿ ಅವರು ಮಗನ ಜೊತೆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅಭಿಮಾನಿಗಳು ಬಾಸ್ ಪೊಟೋ ಎಲ್ಲಿ? ಅಪ್ಲೋಡ್ ಮಾಡಿ ಎಂದು ಕಾಮೆಂಟ್ ಹಾಕಿದ್ದಾರೆ. ಪೆಬ್ರವರಿ 16 ರಂದು‌ ತಪ್ಪದೆ ಪೋಟೋ ಅಪ್ಲೋಡ್ ಮಾಡಿ‌ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ.

ಹೊಸ ಸಿನಿಮಾದ ಅಪ್ಡೇಟ್

ದರ್ಶನ್ ಅಭಿನಯದ ಡೆವಿಲ್ ಚಿತ್ರದ ಸುದ್ದಿಯು ಹರಿದಾಡ್ತ ಇದ್ದು ಫೆಬ್ರವರಿ 16 ರಂದು ದರ್ಶನ್ ಜನ್ಮ ದಿನ ಇರುವ ಕಾರಣ ಅದೇ ದಿನವೇ ಚಿತ್ರದ ಟೀಸರ್ ರಿಲೀಸ್ ಮಾಡ್ತಾ ಇದ್ದಾರೆ.ಚಿತ್ರದ ಫಸ್ಟ್ ಲುಕ್ ಟೀಸರ್ ಸರಿಗಮ ಕನ್ನಡ ಯೂಟ್ಯೂಬ್ ಚಾನಲ್ ರಿಲೀಸ್ ಆಗುತ್ತಿದೆ. ಈಗಾಗಲೇ ಕಾಟೇರ ಚಿತ್ರ ಸಕ್ಸಸ್ ಆಗಿದ್ದು ಡೆವೀಲ್ ಸಿನಿಮಾದ ಬಗ್ಗೆಯು ಅಭಿಮಾನಿಗಳಲ್ಲಿ‌ ಥ್ರಿಲ್ ಹೆಚ್ಚಾಗಿದೆ.

advertisement

Leave A Reply

Your email address will not be published.