Karnataka Times
Trending Stories, Viral News, Gossips & Everything in Kannada

Personal Loan: ಬೇಕೆಂದಾಗೆಲ್ಲ ಪರ್ಸನಲ್ ಲೋನ್ ಮಾಡಿದ್ರೆ ಸಂಕಷ್ಟ ಫಿಕ್ಸ್! ಆರ್ ಬಿಐ ನಿಯಮಗಳೇನು?

advertisement

ಅನ್ ಸೆಕ್ಯೂರ್ಡ್ ಲೋನ್ ಬಗ್ಗೆ ಸಾಕಷ್ಟು ಊಹಾಪೋಹಗಳ ನ್ನು ಕೇಳಿರ್ತಿರಿ .ಅದರಲ್ಲೂ ಸ್ಮಾಲ್ ಪರ್ಸನಲ್ ಲೋನ್ ಬಗ್ಗೆ ನೆಗೆಟಿವ್ ಮಾತುಗಳೆ ಇವೆ. ಬ್ಯಾಂಕ್ ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಎನ್ ಬಿ‌ ಎಫ್ ಸಿ ಗಳು ಬ್ಯುಸಿನೆಸ್ ಗೆ ಮತ್ತು ಆದಾಯ ಹೆಚ್ಚಳಕ್ಕೆ ಸಾಲವನ್ನು ಫ್ರೀಬೀಸ್ ತರಹ ಅಥವಾ ಉಚಿತವಾಗಿ ಕೊಡುವ ಸವಲತ್ತಿನ ರೀತಿ ಕೊಡುತ್ತಿವೆ. ಇದು ಬ್ಯುಸಿನೆಸ್ ಅನ್ನೇನೋ‌ ಸುಧಾರಿಸಿದೆ. ಜೊತೆಗೆ ರಿಸ್ಕ್ ಕೂಡ ಹೆಚ್ಚು‌ ಮಾಡಿದೆ. ಹೀಗಾಗಿ, ಅನ್ ಸೆಕ್ಯುರ್ಡ್ ಸಾಲ ನಿಯಂತ್ರಿಸೋಕೆ RBI ಮುಂದಾಗಿದೆ. ಇಂತಹ ಸನ್ನಿವೇಶದಲ್ಲಿ ಅನ್ ಸೆಕ್ಯೂರ್ಡ್ ಲೋನ್ ಎಂದರೇನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಈ ಸಾಲವನ್ನು ಯಾವ ಕಾರಣಕ್ಕೆ ತೆಗೆದುಕೊಳ್ಳಬಾರದು. ಆರ್ ಬಿ ಐ ನಿರ್ಧಾರ ನಿಮ್ಮ‌ ಮೇಲೆ ಹೇಗೆ ಪರಿಣಾಮ ಬೀರಬಹುದು? ಎನ್ನುವುದನ್ನು ನಿಮಗೆ ತಿಳಿಸಿಕೊಡುತ್ತೇವೆ.

ಎರಡು ಬಗೆಯ ಸಾಲಗಳಾವವು?

ಸೆಕ್ಯೂರ್ಡ್ ಮತ್ತು ಅನ್ ಸೆಕ್ಯೂರ್ಡ್… ಗೃಹ ಸಾಲ (Home Loan), ವಾಹನ ಸಾಲ (Vehicle Loan) ಮತ್ತು ಪ್ರಾಪರ್ಟಿ ಲೋನ್ (Property Loan) ನಂತಹ ಸೆಕ್ಯೂರ್ಡ್ ಲೋನ್ ಅಡಿಯಲ್ಲಿ ನೀವು ಆಸ್ತಿ, ಭೂಮಿ ಅಥವಾ ನಿಶ್ಚಿತ ಠೇವಣಿಗಳನ್ನ ಭದ್ರೆತೆಯಾಗಿ ಕೊಡಬೇಕು. ಆದ್ರೆ ಪರ್ಸನಲ್ ಲೋನ್ (Personal Loan) ಕ್ರೆಡಿಟ್ ಕಾರ್ಡ್ ಅಥವಾ ಶೈಕ್ಷಣಿಕ ಸಾಲದಂತಹ ಅನ್ ಸೆಕ್ಯೂರ್ಡ್ ಲೋನ್ ನಲ್ಲಿ ನೀವು ಯಾವುದೇ ಆಸ್ತಿ ಅಡವಿಡಬೇಕಿಲ್ಲ, ಸೆಕ್ಯೂರ್ಡ್ ಲೋನ್ ಗಳಲ್ಲಿ ಬ್ಯಾಂಕ್ ನ ರಿಸ್ಕ್ ಕಡಿಮೆ ಇರುತ್ತದೆ. ಏಕೆಂದರೆ ನೀವು ಸಾಲದ ಎದುರು ನಿಮ್ಮ‌ ಆಸ್ತಿಯನ್ನ ಅಡವಿಟ್ಟಿರುತ್ತೀರಿ. ಒಂದು ವೇಳೆ ನೀವು ಸಾಲ ಮರುಪಾವತಿ ಮಾಡದೇ ಹೋದರೆ, ನೀವು ಅಡವಿಟ್ಟ ಆಸ್ತಿ ಮಾರಾಟ ಮಾಡಿ, ಬ್ಯಾಂಕ್ ತನ್ನ ಹಣವನ್ನ ರಿಕವರ್ ಮಾಡಿಕೊಳ್ಳುತ್ತದೆ. ಅನ್ ಸೆಕ್ಯೂರ್ಡ್ ಲೋನ್ ಆದರೆ ಅದಕ್ಕೆ ಯಾವ ಆಧಾರಾನೂ ಕೊಡಬೇಕಾಗಿಲ್ಲ. ಇದರಿಂದಾಗಿ ಬ್ಯಾಂಕ್ ಗಳ ಕ್ಯಾಪಿಟಲ್ ಮೇಲೆ ರಿಸ್ಕ್ ಜಾಸ್ತಿ ಇರತ್ತದೆ. ಹೀಗೆ ರಿಸ್ಕ್ ಜಾಸ್ತಿ ಇರುವುದರಿಂದ ಅನ್ ಸೆಕ್ಯೂರ್ಡ್ ಲೋನ್ (Secured Loan) ಮೇಲೆ ಸೆಕ್ಯೂರ್ಡ್ ಲೋನ್ ಗಿಂತ ಜಾಸ್ತಿ ಬಡ್ಡಿ ವಿಧಿಸಲಾಗತ್ತದೆ. ‌

ಸಾಲ ಮಾಡಿದಾಗ ಏನಾಗುತ್ತದೆ?

 

 

HDFC Bank ವೆಬ್ಸೈಟ್ ‌ಪ್ರಕಾರ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಶೇಕಡ 10.5 ರಿಂದ 24 ರಷ್ಟಿದೆ. ಗೃಹ ಸಾಲದ ಮೇಲೆ ಬಡ್ಡಿ ದರ ಶೇಕಡ 8.5 ರಿಂದ 9.4 ರಷ್ಟಿದೆ. ಅಂದರೆ ಎರಡೂ ಬಗೆಯ ಸಾಲಗಳನ್ನ ಹೋಲಿಕೆ ಮಾಡಿದರೆ ಆರಂಭಿಕ ಬಡ್ಡಿ ದರದಲ್ಲಿ ಶೇಕಡ 2 ರಷ್ಟು ವ್ಯತ್ಯಾಸ ಇದೆ. ಸಾಮಾನ್ಯವಾಗಿ, ಬಡ್ಡಿ ದರದಲ್ಲಿ ಇದಕ್ಕಿಂತ ಹೆಚ್ಚಿನ ವ್ಯತ್ಯಾಸ ಇರುವ ಸಾಧ್ಯತೆ ಇದೆ. ಮತ್ತೊಂದೆಡೆ ಕ್ರೆಡಿಟ್ ಕಾರ್ಡ್ ಬಗ್ಗೆ ಮಾತಾಡುವುದಾದರೆ ಗಡುವಿಗೆ ಬಿಲ್ ಮೊತ್ತ ಪಾವತಿ ಮಾಡದೇ ಹೋದಲ್ಲಿ ಪ್ರತಿ ತಿಂಗಳು ಶೇಕಡ 3 ರಿಂದ 4 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಅಂದರೆ ವಾರ್ಷಿಕವಾಗಿ ಶೇಕಡ 36 ರಿಂದ 48 ರಷ್ಟು ಬಡ್ಡಿ ಪಾವತಿಸಬೇಕಾಗಬಹುದು.

ಕ್ರೆಡಿಟ್ ಕಾರ್ಡ್ ಇರಲಿ ಅಥವಾ ವೈಯಕ್ತಿಕ ಸಾಲ‌ ಇರಲಿ, ಅನೇಕರು ತಮ್ಮ ಹಣಕಾಸಿನ ಅಗತ್ಯಗಳಿಗಾಗಿ ಇವುಗಳನ್ನು ಆಶ್ರಯಿಸುತ್ತಾರೆ. ಕಳೆದ‌ ಕೆಲವು ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಟ್ರೆಂಡ್ ಹೆಚ್ಚಾಗಿದೆ. ಯಾಕೆ ಅಂದರೆ ರಿಸರ್ವ್ ಬ್ಯಾಂಕ್ ಅನ್ ಸೆಕ್ಯೂರ್ಡ್ ಲೋನ್ ಅಡಿಯಲ್ಲಿ ಬರೋ Personal Loan, Credit Card Loan ಹೀಗೆ ಎಲ್ಲದಕ್ಕೂ ಕಠಿಣ ನಿಯಮಗಳನ್ನ ವಿಧಿಸಿದೆ. ಆರ್ ಬಿ ಐ ಈ ಸಾಲಗಳ ಮೇಲೆ ಮಾಡಿರೋ‌ ಕಠಿಣ ನಿಯಮಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕಿದೆ.

advertisement

RBI ನಿಯಮಗಳೇನು?

 

 

ಬ್ಯಾಂಕ್ ಗಳ ಪೋರ್ಟ್ ಫೋಲಿಯೋ ದ ಅನ್ ಸೆಕ್ಯೂರ್ಡ್ ಲೋನ್ ಕುರಿತಂತೆ ನವೆಂಬರ್ 2023 ರಲ್ಲಿ ರಿಸರ್ವ್ ಬ್ಯಾಂಕ್ ಅಪ್ಡೇಟ್ ಬಿಡುಗಡೆ ಮಾಡಿದೆ. ಅದರಲ್ಲಿ, ಅನ್ ಸೆಕ್ಯೂರ್ಡ್ ಲೋನ್ ಪೋರ್ಟ್ ಫೋಲಿಯೋಗಾಗಿ ಬ್ಯಾಂಕ್ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹೆಚ್ಚಿನ ಬಂಡವಾಳವನ್ನ‌‌ ಎತ್ತಿಡಬೇಕಿದೆ ಅಂತಾ RBI ಹೇಳಿದೆ.

ಅನ್ ಸೆಕ್ಯೂರ್ಡ್‌ ಲೋನ್ ಪ್ರಮಾಣ ವಿಪರೀತವಾಗಿ ಹೆಚ್ಚಾಗಿರುವ ಕಾರಣ RBI ಈ ನಿಯಮ ರೂಪಿಸಿದೆ. ವರದಿಗಳ ಪ್ರಕಾರ, ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಗಳು ಒಟ್ಟಾರೆ ಸಾಲ ಪ್ರಗತಿಯ ಬಹುಪಾಲು ಹೊಂದಿವೆ. ಇದರ ಜೊತೆಗೆ, Personal Loan ಡಿಫಾಲ್ಟ್ ಪ್ರಕರಣ ಅದರಲ್ಲೂ ಹತ್ತರಿಂದ ಐವತ್ತು ಸಾವಿರ ರೂಪಾಯಿ ವರೆಗಿನ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲ ದಂತಹ ಚಿಲ್ಲರೆ ಸಾಲಗಳ ಪ್ರಮಾಣ ಹೆಚ್ಚಾಗಿದ್ದು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವವರ ಪ್ರಮಾಣ ಕಡಿಮೆ ಆಗಿರುವುದು ಗಂಭೀರ ಸಂಗತಿ.

ಅನ್ ಸೆಕ್ಯೂರ್ಡ ಲೋನ್ ಮೇಲಿನ ರಿಸ್ಕ್ ವೇಟೇಜ್ ಹೆಚ್ಚು ಮಾಡೋದು ರಿಸರ್ವ್ ಬ್ಯಾಂಕ್ ನ‌ ಈ ನಡೆಯ ಹಿಂದಿರುವ ಉದ್ದೇಶ. ಅಂದರೆ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲಕ್ಕಾಗಿ ಹೆಚ್ಚಿನ ಬಂಡವಾಳ ಎತ್ತಿಡಬೇಕು ಎನ್ನುವುದಾದರೆ ಮುಂದಿನ ದಿನಗಳಲ್ಲಿ ಈ ಸಾಲ ಪಡೆಯೋದು ಅಷ್ಟು ಸುಲಭವಾಗಿರಲ್ಲ. ಸಹಜವಾಗಿಯೇ, ಈ ನಡೆಯು ಬ್ಯಾಂಕ್, NBFC ಮತ್ತು ಕ್ರೆಡಿಟ್ ಕಾರ್ಡ್ ಸೇವಾದಾತರು ಹೆಚ್ಚು ಚಿಂತಾಕ್ರಾಂತರಾಗೋ ಮಾಡುತ್ತದೆ. ಬಂಡವಾಳ ಕೊರತೆ ಉದ್ಭವಿಸತ್ತದೆ. ಹಾಗೇ ಕಡಿಮೆ ಬಂಡವಾಳ ಇದ್ದರೆ ಕಡಿಮೆ ಸಾಲ ಮಾತ್ರ ಕೊಡೊಲು ಸಾಧ್ಯವಾಗುತ್ತದೆ. ಆದರೆ ಸಾಲದ ಬೇಡಿಕೆ ಮಾತ್ರ ಮೊದಲಿನಷ್ಟೇ ಇರುತ್ತದೆ. ಇದರಿಂದಾಗಿ ಜನರು ಹೆಚ್ಚಿನ ಮೊತ್ತದ ಬಡ್ಡಿ ಪಾವತಿಸಬೇಕಾಗುತ್ತದೆ.

ಬಡ್ಡಿದರಗಳು ಹೇಗಿವೆ?

Credit Card ಮತ್ತು Personal Loan ಗಳ ಮೇಲಿನ ಬಡ್ಡಿ ದರ ಈಗಾಗಲೇ ಹೆಚ್ಚೇ ಇದೆ. ಈಗ RBI ನ ಈ ನಡೆಯಿಂದ ಬಡ್ಡಿ ದರ ಇನ್ನಷ್ಟು ಹೆಚ್ಚಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಪೇಮೆಂಟ್ ಅಥವಾ EMI ಮಿಸ್ ಮಾಡಿದರೆ, ನೀವು ಭಾರಿ ಮೊತ್ತದ ಬಡ್ಡಿ ಮತ್ತು ದಂಡ ತೆರಬೇಕಾಗುತ್ತದೆ. ಇದು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಬಹುದು. ನೀವು ಡೀಫಾಲ್ಟರ್ ಆದರೆ, ನಿಮ್ಮ‌ ಕ್ರೆಡಿಟ್ ಸ್ಕೋರ್ ಇನ್ನಷ್ಟು ಹಾಳಾಗತ್ತೆ.. ಇದರಿಂದಾಗಿ ನಿಮಗೆ ಭವಿಷ್ಯದಲ್ಲಿ ಸಾಲ ಸಿಗುವುದಕ್ಕೆ ತೊಂದರೆಗಳಾಗಬಹುದು.. ಸಾಲ ವಾಪಸ್ ಪಡೆಯೋಕೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಅಂದರೆ ನೀವು ಕೋರ್ಟು ಕಚೇರಿ ಅಂತಾ ಅಲೆದಾಡಬೇಕಾಗುತ್ತದೆ.‌ ಹೀಗಾಗಿ, ಇಂತಹ ಸನ್ನಿವೇಶದಲ್ಲಿ ಅನ್ ಸೆಕ್ಯೂರ್ಡ್ ಲೋನ್ ಗಳಿಂದ ದೂರ ಇರೋದು ಒಳ್ಳೇದು. ಹಣ ಉಳಿಸಿ, ನಂತರ ಖರ್ಚು ಮಾಡಿ.. ನಿಮಗೆ ಮರುಪಾವತಿ ಮಾಡೋಕೆ ಸಾಧ್ಯ ಎನ್ನುವುದಾದರೆ ಮಾತ್ರ ಇಂಥ ಸಾಲದ ಕಡೆ ಮುಖ ಮಾಡಿ.

advertisement

Leave A Reply

Your email address will not be published.