Karnataka Times
Trending Stories, Viral News, Gossips & Everything in Kannada

MG Motors: ಎರಡು ಎಲೆಕ್ಟ್ರಿಕ್ ಕಾರುಗಳ ಮೇಲೆ 1.2ಲಕ್ಷ ರಿಯಾಯಿತಿ ಘೋಷಿಸಿದ MG ಮೋಟರ್ಸ್, ಖರೀದಿಗೆ ಮುಗಿಬಿದ್ದ ಜನ!

advertisement

ಎಂಜಿ ಮೋಟಾರ್ಸ್ ಕಾಮೆಟ್ ಹಾಗೂ Zs EV ಬೆಲೆ ಈಗ ಮತ್ತಷ್ಟು ಕಡಿಮೆಯಾಗಿದೆ. ಬ್ರಿಟಿಷ್ ಮೂಲದ ಆಟೋಮೊಬೈಲ್ ಉತ್ಪಾದಕ ಕಂಪನಿ ಆಗಿರುವ ಎಂಜಿ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತದಲ್ಲಿ ಇದೆ. ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಕೂಡ ಜನರಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಿ ಕೊಟ್ಟಿದ್ದು, ಈಗ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಜೊತೆಗೆ ಒಂದಷ್ಟು ರಿಯಾಯಿತಿಯನ್ನು ಕೂಡ ಘೋಷಿಸಿದೆ. ಹಾಗಾಗಿ ನೀವು ಎಂಜಿ ಕಾಮೆಟ್ ಇವಿ ಹಾಗೂ Zs EV ಖರೀದಿಯ ಮೇಲೆ ಒಂದು ಲಕ್ಷ ರೂಪಾಯಿಗಳಷ್ಟು ಆಫರ್ ಪಡೆಯಬಹುದು.

100 ವರ್ಷ ಪೂರ್ಣಗೊಳಿಸಿದ್ದಕ್ಕೆ ಕಂಪನಿ ಘೋಷಿಸಿದೆ ಆಫರ್!

ಎಂಜಿ ಮೋಟಾರ್ಸ್ (MG Motors) 100 ವರ್ಷಗಳನ್ನು ಪೂರೈಸಿದ ಯಶಸ್ಸಿನ ಹಿನ್ನೆಲೆಯಲ್ಲಿ ತನ್ನ ಎಲೆಕ್ಟ್ರಿಕ್ ವೆಹಿಕಲ್ ಪೋರ್ಟ್ ಪೋಲಿಯೋದಲ್ಲಿ ರಿಯಾಯಿತಿಯನ್ನು ಘೋಷಿಸಿದೆ. ಕಾಮೆಟ್ ಇವಿ (Comet EV)ಹೊಸ ಬೆಲೆ, ಎಕ್ಸ್ ಶೋರೂಮ್ ಪ್ರಕಾರ 6.99 ಲಕ್ಷ ರೂಪಾಯಿ. ಈ ಹಿಂದೆ ಇದರ ಬೆಲೆ 7.98 ಲಕ್ಷ ರೂಪಾಯಿಗಳಾಗಿತ್ತು. ಅಂದರೆ ಈಗ ಬರೋಬ್ಬರಿ ಒಂದು ಲಕ್ಷ ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.

advertisement

ಇನ್ನು ಎಂಜಿ Zs EV (MG ZS EV) ಬೆಲೆಯನ್ನು ಕೂಡ ಪರಿಷ್ಕರಿಸಲಾಗಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 18.98 ಲಕ್ಷ ರೂಪಾಯಿಗಳು. ಈ ಕಾರಿನಲ್ಲಿ 1.20 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸೆಲ್ ಗಳ ಬೆಲೆ ಇಳಿಕೆಯಿಂದ ಸಿಕ್ಕಿರುವ ಲಾಭವನ್ನು ಕಂಪನಿ ಗ್ರಾಹಕರಿಗೆ ರಿಯಾಯಿತಿ ನೀಡುವುದರ ಮೂಲಕ ಲಾಭ ಒದಗಿಸುತ್ತಿದೆ ಎನ್ನಬಹುದು.

ಇನ್ನು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಕೂಡ ನೆಕ್ಸನ್ ಇವಿ ಮೇಲೆ ರಿಯಾಯಿತಿ ನೀಡುತ್ತಿದೆ. 20 ಸಾವಿರದಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಈಗಿನ ಬೆಲೆ 14.5 ಲಕ್ಷ ರೂ. ಅದೇ ರೀತಿ ಎಲೆಕ್ಟ್ರಿಕ್ ಟೀಯಾಗೋ ಕಾರಿನ ಮೇಲೆ ಎಪ್ಪತ್ತು ಸಾವಿರದಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ವಾರ್ಷಿಕ ಕ್ಲಿಯರೆನ್ಸ್ ಸೇಲ್ ಕೂಡ ಆರಂಭವಾಗಿದ್ದು ಬಹುತೇಕ ಎಲ್ಲಾ ಮೋಟಾರ್ ಕಂಪನಿಗಳು ಕೂಡ ಒಂದಲ್ಲ ಒಂದು ರೀತಿಯ ಆಫರ್ ಗಳನ್ನು ನೀಡುತ್ತಿವೆ. ಹಾಗಾಗಿ ನೀವು ಹೊಸ ಕಾರು ಖರೀದಿ ಮಾಡಲು ಬಯಸಿದರೆ ಇದು ಸೂಕ್ತ ಸಮಯ ಎನ್ನಬಹುದು.

advertisement

Leave A Reply

Your email address will not be published.