Karnataka Times
Trending Stories, Viral News, Gossips & Everything in Kannada

Vamshavali Certificate: ವಂಶಾವಳಿ ಪ್ರಮಾಣ ಪತ್ರ ಯಾವೆಲ್ಲ ಕೆಲಸಕ್ಕೆ ಬಳಕೆ ಯಾಗುತ್ತೆ ಗೊತ್ತಾ?

advertisement

ವಂಶಾವಳಿ ಪ್ರಮಾಣ ಪತ್ರ (Vamshavali Certificate) ಆಸ್ತಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯ ಅಥವಾ ಇತರ ತಕರಾರಿದ್ದರೂ ಈ ಒಂದು ಪ್ರಮಾಣ ಪತ್ರ ಕಡ್ಡಾಯವಾಗಿದೆ. ಇದರ ಉಪಯೋಗ, ಯಾಕಾಗಿ ಇದು ಬೇಕಾಗುತ್ತದೆ ಎಂದು ಅನೇಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ ಹಾಗಾಗಿ ಇಂದಿನ ಈ ಒಂದು ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಇದು ನಿಮಗೆ ಆಸ್ತಿ ವ್ಯಾಜ್ಯ ಇತರ ಸಂದರ್ಭದಲ್ಲಿ ಬಹಳ ಉಪಯೋಗಕರವಾಗಲಿದೆ.

What is Vamshavali Certificate?

ವಂಶಾವಳಿ ಪ್ರಮಾಣ ಪತ್ರ (Vamshavali Certificate) ಎಂದರೆ ಕುಟುಂಬದ ವಿವರವನ್ನು ತಿಳಿಸುವ ದಾಖಲಾತಿ ಪತ್ರ ಎನ್ನಬಹುದು. ಅಂದರೆ ಅಪ್ಪ, ಅಮ್ಮ, ತಾತಾ, ಅಜ್ಜಿ, ಚಿಕ್ಕಪ್ಪ- ಚಿಕ್ಕಮ್ಮ ಹೀಗೆ ರಕ್ತ ಹಂಚಿಕೊಂಡಿರುವ ಎಲ್ಲರಿಗೆ ಈ ಪ್ರಮಾಣ ಪತ್ರ ಸೇರಿರುತ್ತದೆ. ಕರ್ನಾಟಕದಲ್ಲಿ ಇದನ್ನು ಕಂದಾಯ ಇಲಾಖೆಯ ಮೂಲಕ ನೀಡಲಾಗುವುದು. ಇದನ್ನು ಆಯಾ ಗ್ರಾಮ ಪಂಚಾಯತ್ ನ ಗ್ರಾಮ ಲೆಕ್ಕಿಗರು ನೀಡುತ್ತಾರೆ. ಇದನ್ನು ನೀವು ಪಡೆಯಲು ನಾಡ ಕಚೇರಿಗೆ ಹೋಗಿ ಅರ್ಜಿ ಹಾಕಬೇಕು ಇಲ್ಲವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯಾಕೆ ಇದು ಮುಖ್ಯ:

 

 

advertisement

ಮನೆ, ಜಮೀನು ಇತರ ಆಸ್ತಿ, ಪಾಸ್ತಿಯನ್ನು ಪಾಲು ಮಾಡಿಕೊಳ್ಳುವಾಗ ವಂಶಾವಳಿ ಪ್ರಮಾಣ ಪತ್ರ ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿ ಕುಟುಂಬದ ಆಸ್ತಿ ವ್ಯಾಜ್ಯ ಇದ್ದರೆ ಆಗ ಕೂಡ ವಂಶಾವಳಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ. ಕುಟುಂಬದ ಗುರುತಿಗಾಗಿ ಸರಕಾರದ ಸೌಲಭ್ಯ ಪಡೆಯಲು ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ವಂಶಾವಳಿ ಪಡೆಯಯವಾಗ ಆಧಾರ್ ಕಾರ್ಡ್ ಅನ್ನು ನೀಡಬೇಕು ಇಲ್ಲವಾದರೆ ಆಗ ಮತದಾರರ ಗುರುತು ಚೀಟಿ ನೀಡಿ ಕೂಡ ನೀವು ವಂಶಾವಳಿ ಪ್ರಮಾಣ ಪತ್ರ ಪಡೆಯಬಹುದು. ಎಲ್ಲ ದಾಖಲಾತಿ ಸರಿ ಇದ್ದರೆ 7 ದಿನದೊಳಗೆ ವಂಶಾವಳಿ ಪ್ರಮಾಣ ಪತ್ರ ದೊರೆಯಲಿದೆ. ಸರಕಾರದ ಸೌಲಭ್ಯ , ಬ್ಯಾಂಕಿನ ಸಾಲ, ಅನುಕಂಪದ ಆಧಾರದ ಮೇಲೆ ನೀಡಲಾಗುವ ಕೆಲಸ ಎಲ್ಲದಕ್ಕೂ ವಂಶಾವಳಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಈ ಬಗ್ಗೆ ಗೊಂದಲ ಬೇಡ:

ವಂಶಾವಳಿ ಬಗ್ಗೆ ಅನೇಕ ಗೊಂದಲಗಳು ಇರುತ್ತದೆ. ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಅವರ ಹೆಸರು ಬೇಕಾ ಹೀಗೆ ಅನೇಕ ಗೊಂದಲ ಇರುತ್ತದೆ‌. ಆದರೆ ವಂಶಾವಳಿಯಲ್ಲಿ ಕುಟುಂಬದ ಸದಸ್ಯರೇ ಇರುವ ಕಾರಣ ಮಗಳು, ಸೊಸೆ, ಮೊಮ್ಮಗಳು ಎಲ್ಲರ ಹೆಸರು ಮಾಹಿತಿ ಇರಬೇಕು. ಅದೆ ರೀತಿ ಆಸ್ತಿ ಹಂಚಿಕೆ ಮಾಡುವಾಗ ವಂಶಾವಳಿಯಲ್ಲಿ ಇರುವವರಿಗೆ ಎಲ್ಲರಿಗೂ ಆಸ್ತಿ ನೀಡಬೇಕು ಎಂಬ ನಿಯಮ ಇಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಬೇಕು ಆದರೆ ಸ್ಚಯಾರ್ಜಿತ ಆಸ್ತಿಯಲ್ಲಿ ಭಾಗ ನೀಡುವ ಅಗತ್ಯ ಇರಲಾರದು.

ಎಷ್ಟು ವರ್ಷ ಇರುವುದು?

ಒಮ್ಮೆ ನೀವು ವಂಶಾವಳಿ ಪ್ರಮಾಣ ಪತ್ರ ಪಡೆದರೆ ಅದನ್ನು ಎಷ್ಟು ವರ್ಷ ಬಳಸಬಹುದು ಎಂಬ ಗೊಂದಲ ಕೂಡ ಸಾಮಾನ್ಯವಾಗಿ ಇರುತ್ತದೆ. 2 ವರ್ಷದ ವರೆಗೆ ಇರಲಿದೆ. ಮಗು ಜನಿಸಿದೆ ಇಲ್ಲವೇ ಯಾರಾದರೂ ಮರಣ ಹೊಂದಿದರೆ ಪ್ರಮಾಣ ಪತ್ರ ಮತ್ತೊಮ್ಮೆ ಮಾಡಿಸಬೇಕು. ನೀವು ಇದರಲ್ಲಿ ಯಾವುದೇ ತಿದ್ದು ಪಡಿ ಮಾಡಲು ಬಯಸಿದರೆ ಹೊಸದಾಗಿ ಅರ್ಜಿ ಹಾಕಿ ತಿದ್ದುಪಡಿ ಮಾಡಿಕೊಳ್ಳಬಹುದು. ಕುಟುಂಬದಲ್ಲಿ ದಾಖಲಾತಿ ಪ್ರಮಾಣ ಪತ್ರ ನೀಡಲು ಒಪ್ಪದಿದ್ದರೂ ನೀವು ವಂಶಾವಳಿ ಪ್ರಮಾಣ ಪತ್ರ ಮಾಡಿಸಬಹುದು ಅವರ ಹೆಸರು ಉಲ್ಲೇಖ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿಕೊಂಡರೆ ವಂಶಾವಳಿ ಪ್ರಮಾಣ ಪತ್ರ ನಿಮಗೆ ಸಿಗಲಿದೆ.

advertisement

Leave A Reply

Your email address will not be published.