Karnataka Times
Trending Stories, Viral News, Gossips & Everything in Kannada

Credit Card: ಈ 4 ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸುದ್ದಿ ಓದಲೇ ಬೇಕು, ನಿಯಮಗಳಲ್ಲಿ ಬದಲಾವಣೆ!

advertisement

ನಗರ ವಾಸಿಗಳು ಅತೀ ಹೆಚ್ಚಾಗಿ ಸಣ್ಣ ಪುಟ್ಟ ಖರೀದಿ ಮಾಡಲು ಕೂಡ ಕ್ರೆಡಿಟ್ ಕಾರ್ಡ್ ಅನ್ನು ಅವಲಂಬಿಸುತ್ತಿದ್ದಾರೆ. ಅದೇ ರೀತಿ ಇಂತಹ ಕ್ರೆಡಿಟ್ ಕಾರ್ಡ್ ಗಳು ಬ್ಯಾಂಕಿನಿಂದ ಬ್ಯಾಂಕಿಗೆ ನಿಯಮಗಳು ಬದಲಾಗುತ್ತಿದೆ‌. HDFC, SBI, ICICI ಮತ್ತು ಆ್ಯಕ್ಸಸ್ ಬ್ಯಾಂಕ್ (Axis Bank) ನ ಕ್ರೆಡಿಟ್ ಕಾರ್ಡ್ (Credit Card) ನಿಯಮ ಬದಲಾಗಿದ್ದು ಈ ಬಗ್ಗೆ ಉಪಯುಕ್ತ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ. ನೀವು ಕೂಡ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಪಡೆದವರಾಗಿದ್ದರೆ ಇಂದಿನ ಈ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ಓದಿ.

 

 

SBI ಬ್ಯಾಂಕ್ ನಲ್ಲಿ ನಿಯಮ ಏನಿದೆ:

 

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ನೀವು ಗ್ರಾಹಕರಾಗಿದ್ದು ಕ್ರೆಡಿಟ್ ಕಾರ್ಡ್ (Credit Card) ಮೂಲಕ ಬಾಡಿಗೆ ಪಾವತಿ ಮಾಡುವ ವ್ಯವಸ್ಥೆ ಮಾಡಿದರೆ ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯುವ ವ್ಯವಸ್ಥೆ ಚಾಲ್ತಿಯಲ್ಲಿ ಇತ್ತು ಆದರೆ ಆ ವ್ಯವಸ್ಥೆ ಈಗ ಸ್ಥಗಿತಗೊಂಡಿದೆ. ಅದೇ ರೀತಿ ನೀವು ಈಸಿ ಡಿನ್ನರ್ ಆನ್ಲೈನ್ ನಲ್ಲಿ ಖರೀದಿ ಮಾಡಿದ್ದಕ್ಕೆ ಕ್ರೆಡಿಟ್ ಕಾರ್ಡ್ ಬಳಸಿದ್ದರೆ ಬಳಸಿದ್ದಕ್ಕೆ ಸಿಗುತ್ತಿದ್ದ ರಿವಾರ್ಡ್ ಪಾಂಯ್ಟ್ ಅನ್ನು 10x ನಿಂದ 5x ಗೆ ಇಳಿಸಲಾಗಿದೆ. ಅದೇ ರೀತಿ Book My Show, Apollo, Domino’s, Myntra ದಲ್ಲಿ ಆನ್ಲೈನ್ ಶಾಪಿಂಗ್ ಮಾಡಿದರೆ 10 ಕ್ರೆಡಿಟ್ ಪಾಂಯ್ಟ್ ಯಥಾ ಸ್ಥಿತಿ ಸಿಗಲಿದೆ.

HDFC Bank Rule:

 

 

advertisement

HDFC ನಲ್ಲಿ ಕ್ರೆಡಿಟ್ ಕಾರ್ಡ್ ಸಂಬಂಧಿಸಿದಂತೆ ಎರಡು ವಿಧ ಇದೆ. ರೆಗಾಲಿಯಾ Credit Card ಬಳಕೆದಾರರಿಗೆ ಲೌಂಜ್ ಪ್ರವೇಶ ಎಂಬ ಆಯ್ಕೆ ಸಿಗಲಿದೆ. ತ್ರೈಮಾಸಿಕ ಅವಧಿಗೆ ನೀವು 1 ಲಕ್ಷ ರೂಪಾಯಿ ಪಡೆದರೆ ಬಳಿಕ ಅದನ್ನು ಲೌಂಜ್ ಪ್ರವೇಶದ ಓಚರ್ ಅನ್ನು ಪಡೆಯಬೇಕಿದೆ. ತ್ರೈ ಮಾಸಿಕ ಅವಧಿಗೆ 2 ಉಚಿತ ಲೌಂಜ್ ಓಚರ್ ನಿಮಗೆ ದೊರೆಯಲಿದೆ. ಅದೇ ರೀತಿ ಮಿಲೇನಿಯಾ ಕ್ರೆಡಿಟ್ ಕಾರ್ಡ್ ನಲ್ಲಿ ಕೂಡ ಲಾಂಜ್ ಪ್ರಕ್ರಿಯೆ ಇರಲಿದೆ. ಆದರೆ ಇದರಲ್ಲಿ 1 ಉಚಿತ ಲೌಂಜ್ ಓಚರ್ ನಿಮಗೆ ತ್ರೈಮಾಸಿಕ ಅವಧಿಗೆ ಲಭ್ಯವಾಗಲಿದೆ.

ICICI Bank Rule:

 

 

ICICI ನಲ್ಲಿ ಏರ್ ಪೋರ್ಟ್ ಲೌಂಜ್ ಆಪ್ಶನ್ ಅನ್ನು ಬದಲಾಯಿಸಲಾಗಿದೆ‌. ತ್ರೈಮಾಸಿಕ ಅವಧಿಯಲ್ಲಿ ಕನಿಷ್ಠ 35ಸಾವಿರ ರೂಪಾಯಿ ಆದರೂ ಖರ್ಚು ಮಾಡಲೇ ಬೇಕು ಎಂಬ ನಿಯಮ ಇದೆ. ಈ ಒಂದು ನಿಯಮವು ICICI ಬ್ಯಾಂಕ್ ನಿಯಮ ಒಳಪಡುವ ಕೋರಲ್ Credit Card, Xpressions Credit Card, Super Saver Visa Credit Card, Parakram Select Credit Card, Coral Contactless Credit Card ಇತರ ಕ್ರೆಡಿಟ್ ಕಾರ್ಡ್ ಗೆ ಕೆಲವು ನಿರ್ದಿಷ್ಟ ನಿಯಮ ಅನ್ವಯವಾಗಲಿದೆ.

Axis Bank Rule:

 

 

Axis Bank ನಲ್ಲಿ ಕ್ರೆಡಿಟ್ ಕಾರ್ಡ್ ಪ್ರಯೋಜನ ಮತ್ತು ವಾರ್ಷಿಕ ಶುಲ್ಕಗಳು ಹಾಗೂ ಕ್ರೆಡಿಟ್ ಕಾರ್ಡ್ ನಿಂದ ದೊರೆಯುವ ಕೆಲವು ವಿಶೇಷ ಪ್ರಯೋಜನಕ್ಕೆ ಸಿಗುವ ಓಚರ್ ಗೆ ಕೆಲ ಬದಲಾವಣೆ ಜಾರಿ ಮಾಡಲಾಗಿದೆ. ಅದೇ ರೀತಿ ಕೆಲ ನಿಯಮ ಮತ್ತು ಷರತ್ತುಗಳನ್ನು ಕೂಡ ಬದಲಾಯಿಸಲಾಗಿದೆ.

advertisement

Leave A Reply

Your email address will not be published.