Karnataka Times
Trending Stories, Viral News, Gossips & Everything in Kannada

Gold Rate: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌! ಮತ್ತೆ ಇಳಿಕೆಯಾದ ಚಿನ್ನದ ಬೆಲೆ! 

advertisement

ಚಿನ್ನ ಯಾರಿಗಿಷ್ಟ ಇಲ್ಲ ಹೇಳಿ.. ಪ್ರತಿಯೊಬ್ಬರೂ ಅಲ್ಲದಿದ್ದರೂ ಭಾರತದಂತಹ ದೇಶದಲ್ಲಿ ಬಹುತೇಕರು ಮೈತುಂಬಾ ಚಿನ್ನ ಧರಿಸಿ ಓಡಾಡಬೇಕು ಎಂದು ಇಷ್ಟಪಡುತ್ತಾರೆ. ಇಂದಿನ ಕಾಲದಲ್ಲಿ ಚಿನ್ನ ಬರೀ ಆಭರಣವಾಗಿರದೇ, ಅದೊಂದು ಪರೋಕ್ಷವಾಗಿ ಇನ್ವೆಸ್ಟ್‌ಮೆಂಟೂ ಹೌದು.. ಹೀಗಾಗಿ ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನದ ದರ (Gold Rate) ನಾವು ನಿಮಗೆ ತಿಳಿಸಿ ಕೊಡುತ್ತೇವೆ.

ಅನೇಕ ಮಂದಿ ವಿಶೇಷವಾಗಿ ಮಹಿಳೆಯರು ಸಮಯ ಸಿಕ್ಕಾಗಲೆಲ್ಲ ಚಿನ್ನ ಖರೀದಿಸಲು (Gold Purchase) ಇಚ್ಛಿಸುತ್ತಾರೆ. ಹೀಗಾಗಿ ಚಿನ್ನ ಬೆಳ್ಳಿಯ ದರ ಕಡಿಮೆಯಾಗುವುದನ್ನೇ ನಿರೀಕ್ಷೆ ಮಾಡುತ್ತಿರುತ್ತಾರೆ. ಇಂದು ಕೆಲವು ನಗರಗಳಲ್ಲಿ ಚಿನ್ನದ ಬೆಲೆ (Gold Rate) ಇಳಿಕೆಯಾಗಿದ್ದು, ಆಭರಣ ಪ್ರಿಯರಿಗಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಇಂದಿನ ಚಿನ್ನದ ದರ ವಿವರ ಇಲ್ಲಿ ಕೊಡಲಾಗಿದೆ.

ಬೇರೆ ಬೇರೆ ನಗರಗಳಲ್ಲಿ ಇಂದಿನ ಚಿನ್ನದ ದರ:

 

advertisement

 

  • ಮುಂಬೈನಲ್ಲಿ (Mumbai Gold Rate Today) 22 ಕ್ಯಾರೆಟ್ ಚಿನ್ನದ ಬೆಲೆ ₹ 57,700 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ₹ 62,950 ತಲುಪಿದೆ. ಪುಣೆಯಲ್ಲೂ ಇದೇ ದರ ಅನ್ವಯಿಸುತ್ತದೆ.
  • ದೆಹಲಿಯಲ್ಲಿ (Delhi Gold Rate Today), 22 ಕ್ಯಾರೆಟ್ ಚಿನ್ನಾಭರಣಗಳ ಬೆಲೆ ₹ 57,850 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ₹ 63,100 ಆಗಿದೆ. ಜೈಪುರ ಮತ್ತು ಲಕ್ನೋದಲ್ಲಿ ಅದೇ ದರ ಅನ್ವಯಿಸುತ್ತದೆ.
  • ಹೈದರಾಬಾದ್‌ನ (Hyderabad Gold Rate Today)ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹ 57,700 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ₹ 62,950 ರೂಪಾಯಿ ದಾಖಲಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ₹47,210ಕ್ಕೆ ಏರಿಕೆಯಾಗಿದೆ.
  • ಚೆನ್ನೈನಲ್ಲಿ (Chennai Gold Rate Today) ಇಂದು 22 ಕ್ಯಾರೆಟ್ ಚಿನ್ನದ ಬೆಲೆ ₹ 58,300 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ₹ 63,600ಗೆ ತಲುಪಿದೆ. ಕೊಯಮತ್ತೂರಿನಲ್ಲಿಯೂ ಅದೇ ದರ ಅನ್ವಯಿಸುತ್ತದೆ.
  • ಕೋಲ್ಕತ್ತಾ (Kolkata Gold Rate Today) 22 ಕ್ಯಾರೆಟ್ ಚಿನ್ನದ ಬೆಲೆ ₹ 57,900 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹ 63,160 ಆಗಿದೆ. ನಾಗ್ಪುರದಲ್ಲೂ ಅದೇ ದರ ಅನ್ವಯಿಸುತ್ತದೆ.
  • ಬೆಂಗಳೂರಿನಲ್ಲಿ (Bengaluru Gold Rate Today) 22 ಕ್ಯಾರೆಟ್ ಚಿನ್ನದ ಬೆಲೆ ₹ 57,900 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹ 63,160 ಆಗಿದೆ. ಮೈಸೂರಿನಲ್ಲೂ ಇದೇ ದರ ಜಾರಿಯಲ್ಲಿದೆ.
  • ಇನ್ನು ಕಡಲನಗರಿ ಮಂಗಳೂರಿನಲ್ಲಿ (Mangalore Gold Rate Today) 22 ಕ್ಯಾರೆಟ್ ಚಿನ್ನದ ಬೆಲೆ ₹ 57,900 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹ 63,160 ಆಗಿದೆ.

ಬೆಲೆ ಏಕೆ ಬದಲಾಗುತ್ತದೆ?

ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಸೇರಿದಂತೆ ಅಲಂಕಾರಿಕ ಲೋಹಗಳ ಬೆಲೆಗಳು ಪ್ರತಿದಿನ ಏರಿಳಿತಗೊಳ್ಳುತ್ತವೆ. ಈ ಬದಲಾವಣೆಗಳು ಪ್ರಪಂಚದಾದ್ಯಂತದ ಅನೇಕ ಬೆಳವಣಿಗೆಗಳನ್ನು ಅವಲಂಬಿಸಿರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಿಂದಾಗಿ ನಮ್ಮ ದೇಶದಲ್ಲಿ ಬೆಲೆಗಳು ಬದಲಾಗುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಅಲಂಕಾರಿಕ ಲೋಹಗಳ ದರಗಳನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಹಲವು ಅಂಶಗಳು ಕೆಲಸ ಮಾಡುತ್ತವೆ. ಹಣದುಬ್ಬರ, ಜಾಗತಿಕ ಕೇಂದ್ರ ಬ್ಯಾಂಕ್‌ಗಳಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿನ ಹೆಚ್ಚಳ ಅಥವಾ ಇಳಿಕೆ, ವಿವಿಧ ಆಭರಣ ಮಾರುಕಟ್ಟೆಗಳಲ್ಲಿನ ಬೇಡಿಕೆಯ ಏರಿಳಿತಗಳು ಅಲಂಕಾರಿಕ ಲೋಹಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ.

advertisement

Leave A Reply

Your email address will not be published.