Karnataka Times
Trending Stories, Viral News, Gossips & Everything in Kannada

Loan: ನೀವು ಸಾಲವನ್ನ ಮರುಪಾವತಿ ಮಾಡದೇ ಇದ್ದಾಗ ರಿಕವರಿ ಏಜೆಂಟ್ ಗಳು ನಿಮಗೆ ತೊಂದರೆ ಕೊಡುವಂತಿಲ್ಲ; ಆರ್‌ಬಿಐನ ಹೊಸ ಸೂಚನೆ!

advertisement

ನಾವು ನಮ್ಮ ಯಾವುದೋ ಪ್ರಮುಖ ಕೆಲಸಕ್ಕಾಗಿ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಮಾಡುವ ಅನಿವಾರ್ಯತೆ ಒದಗಿ ಬರುತ್ತದೆ. ಹೀಗೆ ಸಾಲ ಮಾಡಿದ ಮೇಲೆ ಪ್ರತಿ ತಿಂಗಳು ಅದರ ಕಂತನ್ನು ಪಾವತಿ ಮಾಡಲೇಬೇಕು. ಯಾವುದೇ ಕಾರಣಕ್ಕೂ ಮಿಸ್ ಮಾಡುವಂತಿಲ್ಲ ಹಾಗೆನಾದ್ರೂ ಸಾಲ ಮರುಪಾವತಿ ಮಾಡುವುದನ್ನು ನೀವು ಮಿಸ್ ಮಾಡಿದ್ರೆ ರಿಕವರಿ ಏಜೆಂಟ್ ಗಳು ಅಥವಾ ಬ್ಯಾಂಕ್ ಉದ್ಯೋಗಿಗಳು ನಿಮಗೆ ತೊಂದರೆ ಕೊಡಲು ಆರಂಭಿಸುತ್ತಾರೆ.

ಹೌದು, ಬ್ಯಾಂಕ್ ಗಳು ಸಾಲ (Loan) ವಸೂಲಾತಿಗಾಗಿಯೇ ರಿಕವರಿ ಏಜೆಂಟ್ ಗಳನ್ನು ನೇಮಿಸಿ ಕೊಳ್ಳುತ್ತಾರೆ. ಈ ಬಾರಿ ಏಜೆಂಟ್ ಗಳು ನಿಮಗೆ ಮತ್ತೆ  ಮತ್ತೆ ಕರೆ ಮಾಡಿ ತೊಂದರೆ ಕೊಡಬಹುದು ಅಥವಾ ಮನೆ ಬಾಗಿಲಿಗೆ ಬಂದು ಸಾಲ ಮರುಪಾವತಿ ಮಾಡುವಂತೆ ಕೇಳಬಹುದು. ನಿಜಕ್ಕೂ ಬ್ಯಾಂಕ್ ಈ ರೀತಿ ಏಜೆಂಟ್ಗಳ ಅಥವಾ ತನ್ನ ಉದ್ಯೋಗಿಗಳ ಸಹಾಯದಿಂದ ತನ್ನ ಗ್ರಾಹಕರಿಗೆ ಕಿರುಕುಳ ಕೊಡಬಹುದೇ?

ಆರ್ ಬಿ ಐ ಎಚ್ಚರಿಕೆ!

ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಮಾಹಿತಿಯ ಪ್ರಕಾರ ಬ್ಯಾಂಕ್ ಉದ್ಯೋಗಿಗಳಾಗಿರಲಿ ಅಥವಾ ರಿಕವರಿ ಏಜೆಂಟ್ ಗಳಾಗಿರಲಿ ಗ್ರಾಹಕರು ಸಾಲ ಮರುಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಅವರ ಜೊತೆಗೆ ನಿಷ್ಕಾರುಣ್ಯವಾಗಿ ನಡೆದುಕೊಳ್ಳುವಂತಿಲ್ಲ. ಬೆದರಿಕೆ ಒಡ್ಡುವುದು ಅಥವಾ ಯಾವುದೇ ರೀತಿಯ ಕಿರುಕುಳ ನೀಡುವುದು, ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆ ನೀಡುವುದು ಮಾಡುವಂತಿಲ್ಲ.

ಬ್ಯಾಂಕ್ ಸಾಲ ವಸೂಲಾತಿಗಾಗಿ ಏಜೆಂಟ್ ಗಳ ಮೂಲಕ ಪದೇ ಪದೇ ನಿಮಗೆ ಕಿರುಕುಳ ಕೊಡುತ್ತಿದ್ದರೆ ಅಥವಾ ಬೆದರಿಕೆ ಒಡ್ಡಿದರೆ ನೀವು ಆರ್‌ಬಿಐಗೆ ದೂರು ಸಲ್ಲಿಸಬಹುದು. ಆರ್ ಬಿ ಐ (RBI) ನಿಯಮದ ಪ್ರಕಾರ ಬ್ಯಾಂಕಿನಿಂದ ಸಾಕಷ್ಟು ತೊಂದರೆ ಆಗುತ್ತಿದ್ದರೆ ಗ್ರಾಹಕರು ಆ ಬ್ಯಾಂಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದು ಹಾಗೂ ದಂಡವನ್ನು ಕೂಡ ಕೇಳಬಹುದು.

advertisement

ಈ ನಿಯಮ ನಿಮಗೆ ಗೊತ್ತಿರಲಿ!

ಮೊದಲ ಸಾಲದ ಇಎಂಐ ಪಾವತಿ ಮಾಡದೇ ಇದ್ದರೆ ಬ್ಯಾಂಕ್ ನಿಮಗೆ ಜ್ಞಾಪನ ಪತ್ರವನ್ನು ಕಳುಹಿಸಬೇಕು. ನೀವು ಗೃಹ ಸಾಲ ಪಡೆದುಕೊಂಡು ಮೂರು ತಿಂಗಳಾದರೂ ಪಾವತಿ ಮಾಡದೆ ಇದ್ದರೆ ಬ್ಯಾಂಕ್ನಿಂದ ಕಾನೂನು ನೋಟಿಸ್ ಕಳುಹಿಸಲಾಗುತ್ತದೆ. ಈ ರೀತಿ ಎಚ್ಚರಿಕೆಯ ನಂತರವೂ ನೀವು ಸಾಲ ಮರುಪಾವತಿ ಮಾಡದೆ ಇದ್ದಲ್ಲಿ ನಿಮ್ಮನ್ನು ಡೀಫಾಲ್ಟರ್ ಎಂದು ಘೋಷಿಸಲಾಗುತ್ತದೆ. ಹಾಗೂ ಈ ಅವಧಿಯ ನಂತರ ಬ್ಯಾಂಕ್ ನಿಮಗೆ ಕರೆ ಮಾಡಿ ಅಥವಾ ನಿಮ್ಮನ್ನು ಭೇಟಿ ಮಾಡಿ ಸಾಲ ಮರುಪಾವತಿ ಮಾಡುವಂತೆ ಕೇಳಬಹುದು.

ಆರ್ ಬಿ ಐ ಪ್ರಕಾರ ಗ್ರಾಹಕರು ಕಾನೂನು ಹಕ್ಕುಗಳು ಮತ್ತು ಬಾಧ್ಯತೆಯನ್ನು ಗೌರವಿಸಬೇಕು. ಯಾವಾಗ ಬ್ಯಾಂಕ್ನಿಂದ ನಿಮಗೆ ನೋಟೀಸ್ ಬರುತ್ತದೆಯೋ ಆಗ ಅದಕ್ಕೆ ಕಾನೂನಾತ್ಮಕವಾಗಿ ಉತ್ತರ ನೀಡಬೇಕು. ಒಂದು ವೇಳೆ ನೀವು ಉತ್ತರ ನೀಡದೆ ಇದ್ದಲ್ಲಿ ಆಗ ಬ್ಯಾಂಕ್ ಮತ್ತೆ ಕಾನೂನು ಮೂಲಕವೇ ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ. ಇನ್ನು ಬ್ಯಾಂಕ್ ಏಜೆಂಟ್ ಗಳು ನಿಮಗೆ ಕರೆ ಮಾಡುವುದಿದ್ದರೆ ಅದಕ್ಕೂ ಸಮಯ ನಿಗದಿಪಡಿಸಲಾಗಿದೆ ಬೆಳಿಗ್ಗೆ 7:00 ಯಿಂದ ಸಂಜೆ 7:00 ವರೆಗೆ ಮಾತ್ರ ಡಿಫಾಲ್ಟರ್ ಗೆ ಕರೆ ಮಾಡುವ ಅಧಿಕಾರ ಇರುತ್ತದೆ. ಅದಕ್ಕಿಂತ ಬೇರೆ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಕರೆ ಮಾಡುವುದು ಅಥವಾ ಅವರ ಮನೆ ಬಾಗಿಲಿಗೆ ಹೋಗಿ ತೊಂದರೆ ಕೊಡುವಂತಿಲ್ಲ.

ರಿಕವರಿ ಏಜೆಂಟ್ ಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ಮರುಪಾವತಿಗಾಗಿ ಕೇಳುವುದಾದರೆ ಅವರ ಬಳಿ ಅಧಿಕಾರದ ಪತ್ರ ಹಾಗೂ ಬ್ಯಾಂಕ್ ಸೂಚನೆಯ ಪ್ರತಿ ಇರಲೇಬೇಕು. ಜೊತೆಗೆ ರಿಕವರಿ ಏಜೆಂಟ್ ಗಳು ತಮ್ಮ ಐಡಿ ಕಾರ್ಡ್ ತೋರಿಸಬೇಕು. ಒಂದು ವೇಳೆ ಸಾಲ ಮರುಪಾವತಿಗಾಗಿ ರಿಕವರಿ ಏಜೆಂಟ್ (Loan Recovery Agent) ಗಳಿಂದ ತುಂಬಾ ತೊಂದರೆ ಅನುಭವಿಸಿ ಗ್ರಾಹಕ ಬ್ಯಾಂಕ್ ವಿರುದ್ಧ ಕಂಪ್ಲೇಂಟ್ ಮಾಡಿದ್ದರೆ ಈ ಸಮಸ್ಯೆ ಪರಿಹಾರ ಆಗುವವರೆಗೂ ರಿಕವರಿ ಏಜೆಂಟ್ ಗಳು ಮತ್ತೆ ಗ್ರಾಹಕರ ಮನೆ ಬಾಗಿಲಿಗೆ ಹೋಗುವಂತಿಲ್ಲ.

ಆದರೆ ಈ ಎಲ್ಲಾ ಸಮಸ್ಯೆಗಳನ್ನು ತಂದುಕೊಳ್ಳದೆ ಇರುವುದಕ್ಕೆ ಮೊಟ್ಟ ಮೊದಲನೆಯದಾಗಿ ಸಾಲ ತೆಗೆದುಕೊಂಡ ನಂತರ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಇದರಿಂದ ಮುಂದಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳುವುದಕ್ಕೂ ಕೂಡ ಯಾವುದೇ ಸಮಸ್ಯೆ ಆಗುವುದಿಲ್ಲ. ಹಾಗೂ ಬ್ಯಾಂಕಿನ ವಿಶ್ವಾಸ ಕೂಡ ಗಳಿಸಿಕೊಳ್ಳುತ್ತೀರಿ.

advertisement

Leave A Reply

Your email address will not be published.