Karnataka Times
Trending Stories, Viral News, Gossips & Everything in Kannada

Online Payment: ಅನ್ ಲೈನ್ ಪೇಮೆಂಟ್ ಗೆ ಹೆಚ್ಚು ಹಣವಿರುವ ಖಾತೆ ಬಳಸಬೇಡಿ, ಇದರಿಂದ ಎಚ್ಚರವಿರಿ!

advertisement

ಇಂದು ಬ್ಯಾಂಕ್ ಗೆ ತೆರಳಿ ಹಣ ಪಡೆಯುವ ಕಾಲ ಈಗ ಇಲ್ಲ‌‌. ಈಗ ಏನ್ನೀದ್ದರೂ ಡಿಜಿಟಲ್ ಯುಗ. ಇಂದು ಡಿಜಿಟಲ್ ವ್ಯವಹಾರ ಜನಪ್ರಿಯವಾಗಿದೆ. ಹಣ ಬೇಕು , ಹಣ ಕಳುಹಿಸಬೇಕು ಎಂದಾಗ ತಕ್ಷಣಕ್ಕೆ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಬಳಸುತ್ತಾರೆ. ಸಣ್ಣ ವ್ಯಾಪರದಿಂದ ಹಿಡಿದು ಎಲ್ಲ ಅಂಗಡಿ ಸಂಸ್ಥೆ ಗಳಲ್ಲಿ ಇದನ್ನು ಬಳಕೆ ಮಾಡುತ್ತಾರೆ. ಆದರೆ ಇಂದು ಆನ್ ಲೈನ್ ವಂಚನೆಯ ಪ್ರಕರಣಗಳು ಕೂಡ‌ಹೆಚ್ಚಾಗಿದ್ದು ಈ ಬಗ್ಗೆ ಜಾಗೃತಿ ವಹಿಸಬೇಕಾಗುತ್ತದೆ.

ಈ ಖಾತೆ ಬಳಸಬೇಡಿ:

 

 

ಅನ್ ಲೈನ್ ಪೆಮೇಂಟ್ (Online Payment) ಗೇ ನೀವು ನಿಮ್ಮ ಹೆಚ್ಚು ಹಣವಿರುವ ಮುಖ್ಯ ಬ್ಯಾಂಕ್ ಖಾತೆಯನ್ನು ಬಳಸಬೇಡಿ. ಸಣ್ಣ ಮೊತ್ತದ ಹಣವಿರುವ ಬ್ಯಾಂಕ್ ಖಾತೆಯನ್ನು ಆನ್ ಲೈನ್ ಪಾವತಿ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಬಳಕೆಗೆ ಬಳಸುವುದು ಸೇಫ್ ಆಗಿರುತ್ತದೆ.

ಹ್ಯಾಕರ್ ಗಳ ಸಂಖ್ಯೆ ಹೆಚ್ಚಳ:

advertisement

ಹ್ಯಾಕರ್ ಗಳ ಸಂಖ್ಯೆ ಹೆಚ್ಚಾಗಿದ್ದು ನಿಮ್ಮ ವೈಯಕ್ತಿಕ ಸಣ್ಣ ಮಾಹಿತಿ ಸಿಕ್ಕರೂ ಹಣವನ್ನು ಎಗರಿಸಲು ಕ್ಷಣ ಮಾತ್ರ ಸಾಕು. ಹಾಗಾಗಿ ಹೆಚ್ಚು ಇರುವ ಖಾತೆಯನ್ನು ಆನ್ ಲೈನ್ ಬಳಕೆಗೆ ಬಳಸಬೇಡಿ.ಅದರಲ್ಲೂ ಇಂದು ಸೈಬರ್ ಕಳ್ಳರು ದಿನಕ್ಕೊಂದು ಹೊಸ ಹೊಸ ಮಾರ್ಗವನ್ನು ಸೃಷ್ಟಿಸಿದ್ದಾರೆ. ಸೈಬರ್ ಅಪರಾಧಿಗಳು ಬಳಕೆದಾರರ ಮೊಬೈಲ್ ಸಂಖ್ಯೆಯ ಮಾಹಿತಿಯನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಸಂಗ್ರಹಿಸುತ್ತಿದ್ದಾರೆ

ವಂಚನೆ ಕರೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ:

ಇಂದು ಬ್ಯಾಂಕ್ ಸಿಬ್ಬಂದಿಗಳು ಎಂದು ಹೇಳಿ ಕರೆ ಮಾಡುವ ವಂಚಕರು ಬಹಳಷ್ಟು ಮಂದಿ ಇದ್ದಾರೆ. ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಹೆಸರಿನಲ್ಲಿ ನಿಮಗೆ ಕರೆ ಮಾಡಿ ಕೆವೈಸಿ ಮಾಹಿತಿಗಳನ್ನು ಕೇಳಿದ ಉದಾಹರಣೆಗಳು ನಡೆದಿದೆ. ಆದರೆ, ಇಂಥ ಕರೆಗಳಿಗೆ ಯಾವುದೇ ಕಾರಣಕ್ಕೂ ಉತ್ತರಿಸದೇ ನಿಮ್ಮ ವ್ಯಯಕ್ತಿಕ ಮಾಹಿತಿಯನ್ನು ನೀಡದಿರಿ.

ಉದ್ಯೋಗ ಹೆಸರಿನಲ್ಲಿ ವಂಚನೆ:

ಇಂದು ವಾಟ್ಸ್​ಆ್ಯಪ್ (WhatsApp) ಮತ್ತು ಟೆಲಿಗ್ರಾಮ್‌ (Telegram) ನಲ್ಲಿ ಕಂಡುಬರುವ ನಕಲಿ ಉದ್ಯೋಗದ ಮಾಹಿತಿಯಿಂದ ಜನರು ತಮ್ಮ ಹಣವನ್ನು ಕಳೆದು ಕೊಳ್ಳುತ್ತಿದ್ದಾರೆ.ಪ್ರತಿದಿನ ಸೈಬರ್ ಕ್ರೈಂಗೆ ವಂಚನೆಗೊಳಗಾಗಿರುವ ದೂರುಗಳಿಂದ ಸೈಬರ್​ ಕ್ರೈಂ ಪೊಲಿಸರು ಈಗಾಗಲೇ ಬಹಳಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಅದೇ ರೀತಿ ನೀವು ಬಳಕೆ ಮಾಡುವ ಅನ್ ಲೈನ್ ಪೇಮೆಂಟ್ ಬಗ್ಗೆಯು ಜಾಗೃತರಾಗಿರಿ.

advertisement

Leave A Reply

Your email address will not be published.