Karnataka Times
Trending Stories, Viral News, Gossips & Everything in Kannada

Bharat Brand: ಭಾರತ್ ಬ್ರಾಂಡ್ ನಿಂದ ಜನಸಾಮಾನ್ಯರಿಗೆ ರಿಲೀಫ್ ! ಅರ್ಧ ಬೆಲೆಗೆ ಖರೀದಿಸಿ ಬೇಳೆಕಾಳು!

advertisement

ಭಾರತ್ ಬ್ರಾಂಡ್ ನೊಂದಿಗೆ ಸರ್ಕಾರವು ಏರುತ್ತಿರುವ ಬೆಲೆಗೆ ಕಡಿವಾಣ ಹಾಕಲು ಹೊರಟಿದೆ. ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ದಾಲ್ ಅನ್ನು ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರ ಹೊರೆಯನ್ನು ಇದೀಗ ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಬೆಲೆ ಏರಿಕೆಯನ್ನೇ ದಾಳವನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿರುವ ಪ್ರತಿಪಕ್ಷಗಳಿಗೆ ಸರ್ಕಾರ ಈ ಮೂಲಕ ಉತ್ತರ ನೀಡಿದೆ.

ಭಾರತ್ ಬ್ರಾಂಡ್ (Bharat Brand) ‘ನೊಂದಿಗೆ ಸರ್ಕಾರವು ಏರುತ್ತಿರುವ ಬೆಲೆಗೆ ಕಡಿವಾಣ ಹಾಕಲು ಹೊರಟಿದೆ. ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ದಾಲ್ ಅನ್ನು ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಭಾರತ್ ಅಟ್ಟ ಮತ್ತು ಭಾರತ್ ದಾಲ್ ನಂತರ ಈಗ ಸರ್ಕಾರವು ಭಾರತ್ ರೈಸ್ ಅನ್ನು ಕೆಜಿಗೆ 29 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ. ಕೆಜಿಗೆ 40 ರಿಂದ 50 ರೂ.ಕೊಟ್ಟು ಖರೀದಿಸುವ ಅಕ್ಕಿ ಇದೀಗ ಕೇವಲ 29 ರೂಪಾಯಿಗೆ ಸಿಗುತ್ತಿದೆ. ಭಾರತ್ ಪ್ಯಾಕ್ ಅನ್ನು 5 ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಖರೀದಿಸಬಹುದು.

ಖರೀದಿಸುವುದು ಎಲ್ಲಿಂದ ?

 

 

advertisement

ಭಾರತ ಸರ್ಕಾರ ಭಾರತ್ ಬ್ರಾಂಡ್‌ (Bharat Brand) ಅಡಿಯಲ್ಲಿ ಮೊದಲು ಬೇಳೆಕಾಳುಗಳು, ನಂತರ ಹಿಟ್ಟು ಮತ್ತು ಈಗ ಅಕ್ಕಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಭಾರತ್ ಅಕ್ಕಿ ಕೆಜಿಗೆ 29 ರೂ.ಗೆ ಎರಡು ಹಂತಗಳಲ್ಲಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಐದು ಲಕ್ಷ ಟನ್ ಅಕ್ಕಿ ನೀಡಲಾಗುತ್ತಿದೆ. ನೀವು ಅದನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI), ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NACMF) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ ಆಫ್ ಇಂಡಿಯಾ (NCCF) ನಿಂದ ಖರೀದಿಸಬಹುದು. ಇದಲ್ಲದೆ,  ಇದನ್ನು ಸೆಂಟ್ರಲ್ ಸ್ಟೋರ್‌ಗಳಲ್ಲಿಯೂ ಖರೀದಿಸಬಹುದು.

ಮೊಬೈಲ್ ವ್ಯಾನ್ ಮೂಲಕವೂ ಲಭ್ಯ:

ಇನ್ನು ಸರ್ಕಾರ ಮೊಬೈಲ್ ವ್ಯಾನ್ ಮೂಲಕವೂ ಈ ಅಕ್ಕಿಯನ್ನು ಮಾರಾಟ ಮಾಡುತ್ತಿದೆ. ಸಹಕಾರಿ ಸಂಸ್ಥೆಗಳಲ್ಲದೆ, ಭಾರತ್ ಗೋಧಿಹಿಟ್ಟು,  2000 ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ.ಅದರ ಹೊರತಾಗಿ ಮದರ್ ಡೈರಿ, ಸಫಲ್ ಮುಂತಾದ ಮಳಿಗೆಗಳಿಂದಲೂ ಖರೀದಿಸಬಹುದು.

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದೇ?

ಪ್ರಸ್ತುತ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ  ಸೌಲಭ್ಯ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಈ ವಿಧಾನವನ್ನು ಅಳವಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾರತ್ ಬ್ರಾಂಡ್ (Bharat Brand) ಅಕ್ಕಿಯನ್ನು ಸರ್ಕಾರ ಶೀಘ್ರದಲ್ಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲಿದೆ. ಭಾರತ್ ರೈಸ್ (Bharat Rice)ಹೊರತುಪಡಿಸಿ,  ಭಾರತ್ ಹಿಟ್ಟನ್ನು ಕೆಜಿಗೆ 27.50 ರೂ.ಗೆ ಖರೀದಿಸಬಹುದು. ಭಾರತ್ ದಾಲ್‌ನಿಂದ ಬೇಳೆ ಕಾಳುಗಳನ್ನು ಕೆಜಿಗೆ 60 ರೂ.ಯಂತೆ ಖರೀದಿಸಬಹುದು.

advertisement

Leave A Reply

Your email address will not be published.