Karnataka Times
Trending Stories, Viral News, Gossips & Everything in Kannada

Bharat Rice: ಕೇಂದ್ರ ಸರ್ಕಾರದಿಂದ ಜನತೆಗೆ ಭರ್ಜರಿ ಗಿಫ್ಟ್, ಒಂದು ಕೆಜಿ ಅಕ್ಕಿಗೆ ಕೇವಲ 29 ರೂಪಾಯಿ!

advertisement

ಇತ್ತಿಚೆಗೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನು ಅಕ್ಕಿಯ ಬೆಲೆ (Rice Price) ಅಂತು ಕೇಳೋದಕ್ಕೆ ಆಗೋದಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದೆ. ಹೌದು, ಇತ್ತಿಚೆಗೆ ಆಹಾರ ಪದಾರ್ಥಗಳ ರೇಟ್ ಹೆಚ್ಚಾಗಿದೆ. ಮಧ್ಯಮ ವರ್ಗ ಹಾಗೂ ಬಡವರು ನೂರಾರು ರೂಪಾಯಿ ಕೊಟ್ಟು ಅಕ್ಕಿ ಬೇಳೆ ಕೊಂಡುಕೊಳ್ಳೋ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ‌ಯಲ್ಲಿ ಕೇಂದ್ರ ಸರ್ಕಾರ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದ್ದು, ಮಂಗಳವಾರ ಬೆಂಗಳೂರಿನನ ನಾಫೆಡ್ಸ್ ಬಳಿ ಚಾಲನೆ ನೀಡಲಾಗಿದೆ.

ಎಲ್ಲೆಲ್ಲಿ ಸಿಗಲಿದೆ ಈ ಅಕ್ಕಿ:

ಮೊದಲ‌ ಹಂತದಲ್ಲಿ 120 ಕ್ವಿಂಟಾಲ್ ಅಕ್ಕಿ ಬೆಂಗಳೂರಿಗೆ ಬಂದಿದೆ. ರೈತರು ಬೆಳೆಯುವ ಅಕ್ಕಿಯನ್ನ ಖರೀದಿಸಿ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗ್ತಿದೆ. ಇದಕ್ಕಾಗಿ ಒಟ್ಟು 25 ವಾಹನಗಳನ್ನ ನೇಮಿಸಲಾಗಿದೆ. ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವಾಹನಗಳು ಇರಲಿದ್ದು, ಜನರು ಅಕ್ಕಿ ಖರೀದಿ ಮಾಡಬಹುದು. ಜೊತೆಗೆ ಬೇರೆ ಜಿಲ್ಲೆಗಳಲ್ಲೂ ಕೂಡಾ ಅಕ್ಕಿ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು ಮೊಬೈಲ್ ವಾಹನಗಳು ಸಂಚಾರ ಮಾಡಲಿವೆ.

5-10 ಕೆಜಿ ಬ್ಯಾಗ್ ಗಳಲ್ಲಿ ಮಾರಾಟ:

advertisement

ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳು ಮತ್ತು ಇ-ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ ಭಾರತ್ ರೈಸ್ (Bharat Rice) ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೆಜಿ ಹಾಗೂ 10 ಕೆಜಿ ಪ್ಯಾಕೆಟ್ ನಲ್ಲಿ Bharat Rice ಅನ್ನು ಮಾರಾಟ ಮಾಡಲಾಗುತ್ತಿದೆ.

ಭಾರತ್​ ಅಕ್ಕಿ ವಿತರಣೆಗೆ ಯಡಿಯೂರಪ್ಪ ಚಾಲನೆ:

 

 

ಕೇವಲ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಡ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲೂ Bharat Rice 29 ರೂಪಾಯಿಗೆ ಸಿಗಲಿದೆ.‌ ಅಕ್ಕಿ ಖರೀದಿಸುವವರು ತಮ್ಮ ಮೊಬೈಲ್‌ ನಂಬರ್‌ ರಿಜಿಸ್ಟರ್ ಮಾಡಿಸಿ ಅಕ್ಕಿಯನ್ನ ಪಡೆಯಬಹುದು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನ ನೀಡಲಾಗುವುದು. ಕಡಿಮೆ ದರದಲ್ಲಿ ಅಕ್ಕಿ ಸಿಗ್ತಿರೋದು ಉಪಯುಕ್ತ ಎನ್ನುತ್ತಿದ್ದಾರೆ ಜನ.ಈ ಭಾರತ್ ರೈಸ್ ಅನ್ನು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ, ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್, ಕೇಂದ್ರೀಯ ಭಂಡಾರ್ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ತಿಳಿಸಿದೆ.

advertisement

Leave A Reply

Your email address will not be published.