Karnataka Times
Trending Stories, Viral News, Gossips & Everything in Kannada

Vishnuvardhan-Bharathi: ವಿಷ್ಣುವರ್ಧನ್‌-ಭಾರತಿ ಮಕ್ಕಳು ಯಾರು? ಇವರನ್ನು ದತ್ತು ತೆಗೆದುಕೊಳ್ಳಲು ಕಾರಣವೇನು?

advertisement

ನಾಗರಹಾವು ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಸಾಹಸ ಸಿಂಹನಾಗಿ ಮರೆದವರು ವಿಷ್ಣುವರ್ಧನ್. ಇವರ ಸಿನಿಮಾಗಳು ಇಂದಿಗೂ ಜೀವಂತ, ಎಲ್ಲ ವರ್ಗದವರು ಮೆಚ್ಚುಗೆ ಗಳಿಸುವಂತಹ ಸಿನಿಮಾಗಳನ್ನು ನೀಡಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು. ಅದೇ ರೀತಿ ವೈಯಕ್ತಿಕ ಜೀವನದಲ್ಲಿಯು ಬಹಳಷ್ಟು ಪ್ರೀತಿಯನ್ನು ಗಿಟ್ಟಿಸಿಕೊಂಡವರು ಇವರಾಗಿದ್ದಾರೆ.

ಇಬ್ಬರು ದತ್ತು ಮಕ್ಕಳು:

ಡಾ ವಿಷ್ಣುವರ್ಧನ್ (Dr Vishnuvardhan) ಅವರು ಕೀರ್ತಿ ಹಾಗೂ ಚಂದ್ರು ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಅದೇ ರೀತಿ ತಾವು ದತ್ತು ತೆಗೆದುಕೊಂಡಿರುವ ಇಬ್ಬರೂ ಪುತ್ರಿಯರನ್ನು ಚೆನ್ನಾಗಿ ಸಾಕಿ, ಸಲಹಿ ಅವರಿಗೆ ಒಳ್ಳೆಯ ಶಿಕ್ಷಣವನ್ನೂ ಸಹ ಕೊಟ್ಟು ಅವರ ಮದುವೆ ಕೂಡ ಮಾಡಿಸುತ್ತಾರೆ. ಈ ಬಗ್ಗೆಯು ಮಾತನಾಡಿರುವ ಮೇರು ನಟ ವಿಷ್ಣುವರ್ಧನ್, ಮಕ್ಕಳಾಗದ ಸಾಮರ್ಥ್ಯದ ಬಗ್ಗೆ ಐ ಡೋಂಟ್ ಕೇರ್ ಎನ್ನದೇ, ಹೆಣ್ಣುಮಕ್ಕಳ ಉತ್ತೇಜನಕ್ಕೆ ಹೆಚ್ಚಿನ ಪ್ರಶ್ಯಾಸ್ತ ನೀಡುತ್ತಿದ್ದರು. ಹೆಣ್ಣು ಮಕ್ಕಳ ಶೋಷಣೆ ಆಗದಂತೆ ಹೆಚ್ಚಿನ ಬೆಂಬಲ ನೀಡಿ ಹೆಣ್ಣು ಮಕ್ಕಳನ್ನೆ ದತ್ತು ಪಡೆಯುತ್ತಾರೆ.

ಪ್ರೇಮ ವಿವಾಹವಾಗಿತ್ತು:

advertisement

ಡಾ.ವಿಷ್ಣುವರ್ಧನ್ ನಟಿ ಭಾರತಿ ಯವರ ಪ್ರೇಮ ವಿವಾಹ, ಹಿರಿಯರ ಸಮ್ಮತಿ ಪಡೆದ ವಿಷ್ಣುವರ್ಧನ್ ಹಾಗೂ ಭಾರತಿ (VishnuvardhanBharathi) ಫೆಬ್ರವರಿ 27, 1975 ರಂದು ಸಪ್ತಪದಿ ತುಳಿಯುತ್ತಾರೆ‌‌‌.ನಟಿ ಭಾರತಿ ಅವರು ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿಯಾಗಿರುವಾಗಲೇ ವಿಷ್ಣುವರ್ಧನ್ ರವರ ಕೈಹಿಡಿದರು.ಮನೆ ಬೆಳಗಿದ ಸೊಸೆ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಒಟ್ಟಿಗೆ ಅಭಿನಯ ಕೂಡ ಮಾಡಿದ್ದಾರೆ‌.

ಇಬ್ಬರು ದತ್ತು ಮಕ್ಕಳು ಎಲ್ಲಿದ್ದಾರೆ?

 

 

ದತ್ತು ಮಕ್ಕಳಲ್ಲಿ ಒಬ್ಬರಾದ ಕೀರ್ತಿ ವಿಷ್ಣುವರ್ಧನ್ (Keerthi Vishnuvardhan) ಅವರನ್ನು ನಟ ಅನಿರುದ್ಧ್ ಜತ್ಕರ್ (Anirudh Jatkar) ಮದುವೆಯಾಗಿದ್ದಾರೆ. ಚಂದನಾ ಅವರು ಹೊರಗಡೆ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ, ಇವರು ಟಿವಿ ಮುಂದೆಯು ಕಾಣಿಸಿಕೊಂಡಿದ್ದು ಕಡಿಮೆ. ನಟ ವಿಷ್ಣುವರ್ಧನ್ ರೀತಿಯೇ ಇಬ್ಬರು ದತ್ತು ಮಕ್ಕಳು ಸಹ ಸರಳ ರೀತಿಯಲ್ಲೆ ಇರುತ್ತಾರೆ.

advertisement

Leave A Reply

Your email address will not be published.