Karnataka Times
Trending Stories, Viral News, Gossips & Everything in Kannada

FASTag Cashback: ಫಾಸ್ಟ್ ಟ್ಯಾಗ್ ಬಳಸುವವರಿಗೆ ಸಿಗುತ್ತೆ ಕ್ಯಾಶ್ಬ್ಯಾಕ್, ಎಷ್ಟು ಗೊತ್ತಾ?

advertisement

ನಿಮ್ಮ ಬಳಿ ಕಾರು ಅಥವಾ ಇತರ ಯಾವುದೇ ನಾಲ್ಕು ಚಕ್ರದ ವಾಹನ ಇದ್ದರೆ, ನೀವು ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಅನ್ನು ನಿಮ್ಮ ಗಾಡಿಯ ಮುಂಭಾಗದಲ್ಲಿ ಅಂಟಿಸುವುದು ಕಡ್ಡಾಯ. ಫಾಸ್ಟ್ ಟ್ಯಾಗ್ (FASTag) ಇಲ್ಲದೆ ನೀವು ಟೋಲ್ ಪ್ಲಾಜಾ ಮೂಲಕ ಹಾದುಹೋಗಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಫಾಸ್ಟ್ ಟ್ಯಾಗ್ ಇಲ್ಲದೆ ಪ್ರಯಾಣ ಮಾಡುವುದಾದರೆ ದುಪ್ಪಟ್ಟು ದಂಡವನ್ನು ಕೂಡ ಪಾವತಿಸಬೇಕು. ಉದಾಹರಣೆಗೆ ಟೋಲ್ ಪ್ಲಾಜಾ ಟೋಲ್ ತೆರಿಗೆ 200 ರೂಪಾಯಿ ಆಗಿದ್ದರೆ ಫಾಸ್ಟ್ ಟ್ಯಾಗ್ ಇಲ್ಲದೆ ಇದ್ದರೆ 400 ಗಳನ್ನು ಪಾವತಿಸಬೇಕಾಗುತ್ತದೆ.

ಇನ್ನು ನೀವು ನಿಮ್ಮ ಗಾಡಿಯಲ್ಲಿ ಫಾಸ್ಟ್ ಟ್ಯಾಗ್ (FASTag) ಬಳಕೆ ಮಾಡುತ್ತಿದ್ದರೆ ಅದಕ್ಕೂ ಕೂಡ ಸಾಕಷ್ಟು ನಿಯಮಗಳು ಇದೆ. ನಮ್ಮ ದೇಶದಲ್ಲಿ ಸುಮಾರು 32 ಬ್ಯಾಂಕ್ಗಳಲ್ಲಿ ಫಾಸ್ಟ್ ಟ್ಯಾಗ್ ಕಾರ್ಡ್ ಮಾಡಿಸುವ ಸೌಲಭ್ಯ ಇದೆ. ಅಲ್ಲಿಗೆ ಫಾಸ್ಟ್ ಟ್ಯಾಗ್ ಮಾಡಿಸುವ ವಿಚಾರದಲ್ಲಿಯೂ ಕೂಡ ಪೈಪೋಟಿ ಇದೆ ಎಂದು ಅರ್ಥ! ಹಾಗಾಗಿ ಬೇರೆ ಬೇರೆ ಬ್ಯಾಂಕ್ ಗಳು ಕೆಲವು ಆಫರ್ ಗಳನ್ನು ನೀಡುತ್ತವೆ. ಅವುಗಳಲ್ಲಿ ಕ್ಯಾಶ್ಬ್ಯಾಕ್ ಪಡೆದುಕೊಳ್ಳುವುದು ಕೂಡ ಒಂದು.

ಯಾರಿಗೆ ಸಿಗುತ್ತೆ ಕ್ಯಾಶ್ಬ್ಯಾಕ್?

 

 

advertisement

ಫಾಸ್ಟ್ ಟ್ಯಾಕ(FASTag)  ಸ್ಟಿಕ್ಕರ್ ಅನ್ನು ತಯಾರಿಸುವುದಕ್ಕೆ ಸುಮಾರು 400 ರಿಂದ 500 ರೂಪಾಯಿಗಳ ವೆಚ್ಚ ತಗುಲುತ್ತದೆ. ಇದರಲ್ಲಿ ನಿಮಗೆ 200 ರೂ. ಹಿಂಪಡೆಯಲು ಸಾಧ್ಯವಿದೆ. ಫಾಸ್ಟ್ ಟ್ಯಾಗ್ ಮಾಡಿಸಿಕೊಂಡ ನಂತರ ಅದನ್ನು ರೀಚಾರ್ಜ್ ಮಾಡಬೇಕು. ಬ್ಯಾಲೆನ್ಸ್ ಇಲ್ಲದೆ ಇದ್ರೆ ಟೋಲ್ ಪ್ಲಾಜಾದಲ್ಲಿ ಸಮಸ್ಯೆ ಉಂಟಾಗುತ್ತದೆ.

NHAI ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಟೂಲ್ ಪ್ಲಾಜಾ (Toll Plaza) ದ ಹತ್ತಿರ 10 ಕಿ.ಮೀ ವ್ಯಾಪ್ತಿಯಲ್ಲಿ ವ್ಯಕ್ತಿಯ ಮನೆ ಇದ್ದರೆ ಆತನಿಗೆ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುವುದು ಎಂದು ಹೇಳಿದೆ.

NHAI FASTag ಆರಂಭಿಸಿದಾಗ 2.5% ನಷ್ಟು ಗ್ರಾಹಕರಿಗೆ ನೀಡುತ್ತಿತ್ತು. ಯುಪಿಐ ಅಪ್ಲಿಕೇಶನ್ ಮೂಲಕವೇ ಇಂದು ಹೆಚ್ಚಾಗಿ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿಕೊಳ್ಳುತ್ತೇವೆ. ಹಾಗಾಗಿ ಯುಪಿಐ ಅಪ್ಲಿಕೇಶನ್ ಗಳು ಕ್ಯಾಶ್ಬ್ಯಾಕ್ ಅನ್ನು ಮೊದಲಿಗಿಂತ ಹೆಚ್ಚಾಗಿ ನೀಡುತ್ತವೆ.

ಇನ್ನು ಫಾಸ್ಟ್ ಟ್ಯಾಗ್ ನಿಯಮದ ಪ್ರಕಾರ ಒಂದಕ್ಕಿಂತ ಹೆಚ್ಚು ಫಾಸ್ಟ್ ಟ್ಯಾಗ್ ಅನ್ನು ಒಬ್ಬ ವ್ಯಕ್ತಿ ಹೊಂದಿರಲು ಪರ್ಮಿಷನ್ ಇಲ್ಲ. ಒಂದು ವೇಳೆ ಎರಡು ಫಾಸ್ಟ್ ಟ್ಯಾಗ್ ಹೊಂದಿದ್ದರೆ ಒಂದು ಫಾಸ್ಟ್ ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದನ್ನು ಪತ್ತೆಹಚ್ಚುವ ಸಲುವಾಗಿಯೇ ನಿಮ್ಮ ಫಾಸ್ಟ್ ಟ್ಯಾಗ್ ಗೆ ಕೆ ವೈ ಸಿ ಮಾಡಿಸಿಕೊಳ್ಳುವುದು ಕೂಡ ಕಡ್ಡಾಯ ಎಂದು ಸರ್ಕಾರ ನಿಯಮ ಮಾಡಿದೆ. ಸ್ಯಾಟಲೈಟ್ ಟೋಲ್ ವ್ಯವಸ್ಥೆಯನ್ನು ಕೂಡ ಸದ್ಯದಲ್ಲಿಯೇ ಸರ್ಕಾರ ಜಾರಿಗೆ ತರಲು ಮುಂದಾಗಿದ್ದು, ನೀವು ಟೋಲ್ ಪ್ಲಾಜಾ ವನ್ನು ಸುಲಭವಾಗಿ ಹಾದು ಹೋಗಬಹುದು ಹಾಗೂ ಹೀಗೆ ಹೋದಾಗ ಸ್ವಯಂ ಚಾಲಿತವಾಗಿ ಹಣ ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ.

advertisement

Leave A Reply

Your email address will not be published.