Karnataka Times
Trending Stories, Viral News, Gossips & Everything in Kannada

Budget Car: ಬಡವರ ಬಜೆಟ್ ನ ಈ ಕಾರು ಗುದ್ದಿದ್ದಕ್ಕೆ ಪಲ್ಟಿಯಾದ 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಾರು

advertisement

ಒಂದು ವೇಳೆ ನೀವು ರಾತ್ರಿಯ ಸಂದರ್ಭದಲ್ಲಿ ನಿಮ್ಮ ಕಾರಿನಲ್ಲಿ ಹೊರಗಡೆ ತಿರುಗುವುದಕ್ಕೆ ಹೋಗುತ್ತಿದ್ದೀರಾ ಅಂದ್ರೆ ಸ್ವಲ್ಪ ಜಾಗೃತೆ ಆಗಿರುವುದು ಒಳ್ಳೆಯದು. ದೇಶದ ಬೇರೆ ಬೇರೆ ಭಾಗಗಳಿಂದ ಈ ಸಂದರ್ಭದಲ್ಲಿ ಅಪ-ಘಾತ ಆಗಿರುವಂತಹ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ. ಅದೇ ರೀತಿಯಲ್ಲಿ ಇತ್ತೀಚಿಗಷ್ಟೇ ವೈರಲ್ ಆಗಿರುವ ವಿಡಿಯೋದಲ್ಲಿ Hyundai Grand i10 ಕಾರು Jeep Meridian ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬನ್ನಿ ಇಲ್ಲಿ ಏನಾಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ನಿಖಿಲ್ ರಾಣ (Nikhil Rana) ಎನ್ನುವವರ ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ಈ ಘಟನೆ ಕೇರಳದಲ್ಲಿ ನಡೆದಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಸಂದರ್ಭದಲ್ಲಿ ರೋಡಿನ ಹೊರಭಾಗದಲ್ಲಿ ಅಟ್ಯಾಚ್ ಮಾಡಿದ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿರುವ ದೃಶ್ಯಗಳ ಪ್ರಕಾರ ಎರಡು ಕಾರುಗಳು ಕೂಡ ಒಂದಕ್ಕೊಂದು ಪರಸ್ಪರ ವಿರುದ್ಧ ದಿಕ್ಕಿನಿಂದ ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿಯೇ ಬರುತ್ತಿದ್ವು, ಇನ್ನು ಈ ಸಂದರ್ಭದಲ್ಲಿ ಅಲ್ಲಿ ಒಂದು ರಂದ್ರ ಕೂಡ ಇತ್ತು ಎಂಬುದಾಗಿ ತಿಳಿದು ಬಂದಿದೆ. Meridian ಕಾರಿನ ಡ್ರೈವರ್ ಕೊನೆಯ ಸಂದರ್ಭದಲ್ಲಿ ರಸ್ತೆಯಲ್ಲಿ ಇರುವಂತಹ ರಂದ್ರವನ್ನು ನೋಡಿ ಅದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾರನ್ನು ಸ್ವಲ್ಪ ಸೈಡಿಗೆ ಮೂವ್ ಮಾಡುತ್ತಾನೆ. ಈ ಸಂದರ್ಭದಲ್ಲಿ ಆತನ ವೇಗವನ್ನು ಕೂಡ ಸ್ವಲ್ಪ ಮಟ್ಟಿಗೆ ತಗ್ಗಿಸಿದ್ದ ಆದರೆ ಅದಾಗಲೇ ಲೇಟ್ ಆಗಿತ್ತು.

Hyundai ಕಾರಿಗೆ ಡಿಕ್ಕಿ ಹೊಡೆದ ಈ ಕಾರು ಆಮೆಯ ರೀತಿಯಲ್ಲಿ ಉಲ್ಟಾ ಪಲ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ತಲೆ ಕೆಳಗೆ ಮಾಡಿಕೊಂಡು ಈ ಕಾರು ರಸ್ತೆಯ ಮಧ್ಯದಲ್ಲಿ ಮಲಗಿರುವಂತಹ ಫೋಟೋಗಳು ಎಲ್ಲಾ ಕಡೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವಂತಹ ಫೋಟೋದಲ್ಲಿ ಹುಂಡೈ ಕಾರು ಎಲ್ಲೂ ಕೂಡ ಕಂಡು ಬಂದಿಲ್ಲ ಇದರಿಂದಾಗಿ ಆ ಕಾರು ಹೆಚ್ಚಾಗಿ ಡ್ಯಾಮೇಜ್ ಆಗಿರುವುದು ಅನುಮಾನವೇ ಸರಿ ಎಂಬುದಾಗಿ ಹೇಳಬಹುದಾಗಿದೆ.

advertisement

ಇನ್ನು Meridian ಕಾರು ಹೆಚ್ಚಿನ ಡ್ಯಾಮೇಜ್ ಆಗಿಲ್ಲ ಅನ್ನುವುದಾಗಿ ತಿಳಿದುಬಂದಿದ್ದು ಒಳಗೆ ಇದ್ದವರು ಕೂಡ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಇದೆ. ವಿಡಿಯೋದಲ್ಲಿ ಕಾರಿನ ಒಳಗೆ ಇದ್ದವರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಭಾರತದಲ್ಲಿ ರಾತ್ರಿಯ ಸಂದರ್ಭದಲ್ಲಿ ಪ್ರಯಾಣಿಸುವಾಗ ಆದಷ್ಟು ಕಡಿಮೆ ಸಮಯದಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬೇಕು ಎನ್ನುವ ನಿಟ್ಟಿನಲ್ಲಿ ಅಗ್ರೆಸ್ಸಿವ್ ಆಗಿ ಡ್ರೈವಿಂಗ್ ಮಾಡ್ತಾರೆ ಆದರೆ ಆ ಸಂದರ್ಭದಲ್ಲಿ ಇಂತಹ ಅವಘಡಗಳಿಗೆ ಒಳಗಾಗುತ್ತಾರೆ.

ಕೆಲವೊಮ್ಮೆ ರಾತ್ರಿಯ ಸಂದರ್ಭದಲ್ಲಿ ದನ ಅಡ್ಡ ಬಂದರೆ ಇನ್ನು ಕೆಲವೊಮ್ಮೆ ನಾಯಿಗಳು ಅಡ್ಡ ಬರುವಂತಹ ಸಾಧ್ಯತೆ ಇರುತ್ತದೆ. ವೇಗವಾಗಿ ಬರುವ ಸಂದರ್ಭದಲ್ಲಿ ಈ ರೀತಿಯ ವಸ್ತುಗಳು ಅಡ್ಡ ಸಿಕ್ಕಾಗ ಹಾರ್ಡ್ ಬ್ರೇಕಿಂಗ್ ಹಾಕಿದಾಗ ಗಾಡಿಗಳು ಹೆಚ್ಚಾಗಿ ಕ್ರ್ಯಾಶ್ ಆಗೋದೇ ಜಾಸ್ತಿ. ಈ ಅಪ-ಘಾತದಲ್ಲಿ ಕೂಡ ಎರಡು ಕಾರಿನಲ್ಲಿ ಒಂದು ಕಾರಾದರೂ ತಮ್ಮ ವೇಗವನ್ನು ತಗ್ಗಿಸಿದ್ರೆ ಈ ಅ-ಪಘಾತದಿಂದ ತಪ್ಪಿಸಿಕೊಳ್ಳಬಹುದಾಗಿತ್ತು.

 

advertisement

Leave A Reply

Your email address will not be published.