Karnataka Times
Trending Stories, Viral News, Gossips & Everything in Kannada

Illegal Relationship: ಅಕ್ರಮ ಸಂಬಂಧದ ಬಗ್ಗೆ ಊಹಿಸದ ತೀರ್ಪು ಕೊಟ್ಟ ಕೋರ್ಟ್! ಎಲ್ಲಾ ರಾಜ್ಯಕ್ಕೂ ಅನ್ವಯ

advertisement

ವಿವಾಹ ಎನ್ನುವುದು ಎರಡು ಜೀವಗಳನ್ನು ಬೆಸೆಯುವ ಬಂಧವಾಗಿದ್ದು ಅನೇಕ ವರ್ಷ ಕಷ್ಟ ಸುಖಗಳ ನಡುವೆ ಸತಿ ಪತಿಗಳಿಬ್ಬರು ಬೆರೆಯಬೇಕಾಗುತ್ತದೆ‌. ಆದರೆ ಹಿಂದಿನ ಕಾಲಕ್ಕೆ ಹೋಲಿಸಿದರೆ ಈ ಕಾಲದಲ್ಲಿ ವಿವಾಹದ ಮೇಲಿನ ನಂಬಿಕೆ ಅಂಶಗಳು ಸಂಪೂರ್ಣವಾಗಿ ಬದಲಾಗುತ್ತಿದೆ. ಮದುವೆ ಬಾಂಧವ್ಯ ಎಂಬುದಕ್ಕಿಂತ ಸಂಕೋಲೆ ಅಂದುಕೊಂಡು ವಿಚ್ಛೇದನ (Divorce) ಪಡೆದು ದೂರಾದವರೆ ಅಧಿಕ ಇದ್ದಾರೆ ಎನ್ನಬಹುದು.

ಒಮ್ಮೆ ಮದುವೆ ಆದ ಮೇಲೆ ಅನೇಕ ವರ್ಷಗಳು ಆ ಎರಡು ಜೀವಗಳು ಒಟ್ಟಿಗೆ ಬದುಕಬೇಕಾಗುವುದು. ವಿವಾಹಕ್ಕೆ ಸಂಬಂಧಪಟ್ಟಂತೆ ಕಾನೂನಿನಲ್ಲಿ ಅನೇಕ ನಿಯಮ ಇದ್ದು ಎಲ್ಲವನ್ನು ಸಂದರ್ಭಾನುಸಾರ ಬಳಕೆ ಮಾಡಲಾಗುವುದು. ವಿಚ್ಛೇದನ (Divorce) ಪಡೆಯುವ ಸಂದರ್ಭದಲ್ಲಿ‌ ವಿವಾಹ ಸಂಬಂಧಿತ ನಿಯಮಗಳನ್ನು ಪರಿಶೀಲಿಸಲಾಗುವುದು ಅದೇ ರೀತಿ ವಿವಾಹವಾದ ಬಳಿಕ ಪರ ಪುರುಷರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಅನೈತಿಕ (Illegal Relationship) ಎಂಬುದು ತಿಳಿದಿದ್ದರು ಈ ಅಪರಾಧಕ್ಕೂ ಈಗ ಮನ್ನಣೆ ಸಿಗುತ್ತಿದೆ.

ಯಾವುದು ಆ ಪ್ರಕರಣ?

ರಾಜಸ್ಥಾನದ ಹೈಕೋರ್ಟ್ (High Court) ನಲ್ಲಿ ಪ್ರಕರಣ ಒಂದು ಬಂದಿದೆ. ಪತಿಯು ತನ್ನ ಪತ್ನಿ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟು ಕೊಂಡಿರುವುದಾಗಿ ದೂರು ನೀಡಿದ್ದಾರೆ. ಬಳಿಕ ತನ್ನ ಪತ್ನಿಯನ್ನು ಅಪಹರಿಸಿದ್ದಾರೆ ಎಂದು ಕೂಡ ದೂರಿನಲ್ಲಿ ತಿಳಿಸಿದ್ದು ಇದೇ ಸಂದರ್ಭದಲ್ಲಿ ಹೈಕೋರ್ಟ್ ಈ ಬಗ್ಗೆ ವಿಶೇಷ ಆದೇಶ ಒಂದನ್ನು ಹೊರಡಿಸಿದ್ದಾರೆ.

 

advertisement

Image Source: IndiaFilings

ಪತ್ನಿ ಹೇಳಿದ್ದೇನು?

ಪತ್ನಿ ಅನೈತಿಕ ಸಂಬಂಧ ಹಾಗೂ ಅಪಹರಿಸಿದ್ದಾರೆ ಎಂಬ ವಿಚಾರವಾಗಿ ಪತ್ನಿ ನೇರವಾಗಿ ರಾಜಸ್ಥಾನದ ಹೈ ಕೋರ್ಟ್ ಗೆ ಬಂದು ಸ್ಟೇಟ್ಮೆಂಟ್ ನೀಡಿದ್ದು ಎಲ್ಲರಿಗೂ ಅಚ್ಚರಿ ತರಿಸಿತ್ತು. ಬಳಿಕ ತಾನು ಯಾರಿಂದಲೂ ಅಪಹರಿಸಲ್ಪಟ್ಟಿಲ್ಲ ತನ್ನ ಸ್ವ ಇಚ್ಛೆ ಯಿಂದಲೇ ಲೀವ್ ಇನ್ ರಿಲೇಶನ್ ಶಿಪ್ (Live in Relationship) ನಲ್ಲಿ ಇದ್ದಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಇಲ್ಲಿ ಅಪಹರಣ ಸಾಬೀತಾಗಿಲ್ಲ ಹಾಗೂ ಆಕೆ ಮರುವಿವಾಹ ಕೂಡ ಆಗಿಲ್ಲ ಎಂಬುದು ತಿಳಿದು ಬಂದಿದೆ. IPC ಸೆಕ್ಷನ್ 366ರ ಅಡಿಯಲ್ಲಿ ಈ ಒಂದು ಪ್ರಕರಣವನ್ನು ಅಪರಾಧ ಎಂದು ಪರಿಗಣಿಸಲಾಗಲಿಲ್ಲ. ಹಾಗಾಗಿ FIR ಸಹ ರದ್ದುಗೊಳಿಸಲಾಗಿದೆ.

ತೀರ್ಪು ನೀಡಿದ್ದರಲ್ಲಿ ಏನಿದೆ?

ಈ ಪ್ರಕರಣವನ್ನು ರಾಜಸ್ಥಾನದ ಹೈಕೋರ್ಟ್ (High Court) ನ್ಯಾಯ ಮೂರ್ತಿಗಳಾದ ಬೀರೇಂದ್ರ ಕುಮಾರ್ ಅವರು ಈ ಸಂಬಂಧಿತ ತೀರ್ಪನ್ನು ನೀಡಿದ್ದಾರೆ. ಇಬ್ಬರ ನಡುವೆ ವಿವಾಹವಾಗಿದ್ದು ಪತ್ನಿಗೆ ಬೇರೊಬ್ಬರ ಜೊತೆ ಸಂಬಂಧ ಇದೆ ಎಂದು ಪತಿ ದೂರಿದ್ದರೂ ಆಕೆ ಎರಡನೇ ವಿವಾಹ ವಾಗಲಿಲ್ಲ ಎಂಬುದು ತಿಳಿದು ಬಂದಿದೆ. ಬೇರೊಬ್ಬರ ಜೊತೆ ವಿವಾಹ ಸಾಬೀತಾಗದೆ IPC ಸೆಕ್ಷನ್ 494 ರ ಅಡಿಯಲ್ಲಿ ಈ ಪ್ರಕರಣಗಳ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

advertisement

Leave A Reply

Your email address will not be published.