Karnataka Times
Trending Stories, Viral News, Gossips & Everything in Kannada

High Court: ಮನೆಯ ಸೊಸೆ ವಿಚಾರವಾಗಿ ಕೋರ್ಟ್ ಐತಿಹಾಸಿಕ ತೀರ್ಪು! ಅತ್ತೆ ಮಾವಂದಿರಿಗೆ ಹೊಸ ರೂಲ್ಸ್

advertisement

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಯಸ್ಸು ದೀರ್ಘಾವಧಿಯ ಕಾಲ ಇಲ್ಲ ಎಂದು ಹೇಳಬಹುದು. ಸಾವು ಯಾರಿಗೆ ಯಾವ ಸಂದರ್ಭದಲ್ಲಿ ಕೂಡ ಬರಬಹುದಾಗಿದ್ದು ಸಾವು ಸಂಭವಿಸಿದ ಬಳಿಕ ವ್ಯಕ್ತಿಯನ್ನು ಕಳೆದುಕೊಂಡ ನೋವು ಆ ಕುಟುಂಬಕ್ಕೆ ಬಾಧಿಸುತ್ತದೆ ಅದೇ ರೀತಿ ವ್ಯಕ್ತಿ ನಿಭಾಯಿಸಬೇಕಿದ್ದ ಕರ್ತವ್ಯಗಳು ಮುಂದಿನ ಹೊಣೆ ಯಾರು ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ ಎನ್ನಬಹುದು. ಈ ನಿಟ್ಟಿನಲ್ಲಿ ಹೈಕೋರ್ಟ್ (High Court) ನ ತೀರ್ಪೋಂದು ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಗೆ ಕಾನೂನು ಪ್ರಕಾರವೇ ಶಾಸ್ತ್ರ ಬದ್ಧವಾಗಿ ವಿವಾಹವಾದ ಬಳಿಕ ಆಕೆಯ ಹೊಣೆಗಾರಿಕೆ ಎಲ್ಲವೂ ಪತಿಗೆ ಸಂಬಂಧ ಪಟ್ಟದ್ದಾಗಿದೆ. ವಿವಾಹದ ಬಳಿಕ ಮಹಿಳೆ ಎಲ್ಲ ಆಗು ಹೋಗುಗಳ ಹೊಣೆ ಪತಿಯದ್ದಾಗಿದ್ದು ಆಕೆಯ ಇಷ್ಟಾರ್ಥ ಈಡೇರಿಸುವುದು ಪತಿಯ ಜವಾಬ್ದಾರಿ ಎಂದು ಹೇಳಲಾಗುತ್ತದೆ. ಹೀಗಾಗಿ ಪತ್ನಿಗೆ ಆಧಾರ ಸ್ಥಂಭವೆ ಪತಿ ಆಗಿರಬೇಕಾದರ ಆ ಆಧಾರ ಇಲ್ಲದಿದ್ದಾಗ ದಿಕ್ಕೆಂಟ್ಟಂತಾಗುತ್ತದೆ. ಹೀಗಾಗಿ ಪತಿಯ ಮರಣದ ಬಳಿಕ ಜೀವನಾಂಶ (Alimony) ನಿರ್ವಹಣೆಗೆ ಅತ್ತೆ ಮಾವನ ಮೊರೆ ಹೋಗಬಹುದೇ ಎಂದು ಪ್ರಶ್ನೆ ಕಾಡುತ್ತಿದ್ದು ಈ ಬಗ್ಗೆ ಹೈಕೋರ್ಟ್ ತೀರ್ಪನ್ನು ನೀಡಿದೆ.

Court Oder
Image Source: Bangalore Mirror

ಪ್ರಕರಣದಲ್ಲಿ ತೀರ್ಪು

ಬಳ್ಳಾರಿ (Bellary) ಯ ಮಹಿಳೆಯ ಪತಿಯು ಇತ್ತೀಚೆಗಷ್ಟೇ ನಿಧನ ಹೊಂದಿದ್ದು ಮಹಿಳೆ ಮಕ್ಕಳು ಹಾಗೂ ಅತ್ತೆ ಮಾವನ ಜೊತೆ ವಾಸ್ತವ್ಯವಿದ್ದರು. ಪತಿಯ ನಿಧನದ ಬಳಿಕ ಆದಾಯ ಮೂಲ ಇಲ್ಲದ ಕಾರಣ ತನಗೂ ಹಾಗೂ ಮಕ್ಕಳಿಗೂ ಜೀವನಾಂಶ ನೀಡುವಂತೆ ಪತಿಯ ತಂದೆ ಹಾಗೂ ತಾಯಿಯ ಬಳಿ ಕೇಳಿದ್ದಾರೆ. ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ಸೊಸೆಗೆ ಜೀವನಾಂಶ ನೀಡಲು ತಮ್ಮಿಂದ ಸಾಧ್ಯ ಇಲ್ಲ ಎಂದು ಅವರು ಆಕೆಯ ಅತ್ತೆ ಮಾವ ಅಸಹಾಯಕತೆ ತೋಡಿಕೊಂಡಿದ್ದು ಈ ಮೂಲಕ ಬಳ್ಳಾರಿ ಜಿಲ್ಲಾ ಕೋರ್ಟ್ (Bellary Dustrict Court)ಗೆ ಮೊರೆ ಹೊಗಲಾಯಿತು

advertisement

High Court Rules For in Laws Family India
Image Source: Asiana.tv

ಜಿಲ್ಲಾ ಕೋರ್ಟ್ ತೀರ್ಪಿನಲ್ಲಿ ಏನಿದೆ?

ಜಿಲ್ಲಾ ಕೋರ್ಟಿನ ತೀರ್ಪಿನಲ್ಲಿ ಆಕೆಯ ಜೀವನ ನಿರ್ವಹಣೆಗೆ 20 ಸಾವಿರ ಹಾಗೂ ಮಕ್ಕಳಿಗೆ 5000 ದಂತೆ ಬೇಡಿಕೆ ಇಟ್ಟು ಕೌಟುಂಬಿಕ ನ್ಯಾಯಾಲದ ಮೊರೆ ಹೊಕ್ಕ ಸೊಸೆ (Daughter In Law)ಯು ತನ್ನ ಅಳಲು ತೋಡಿಕೊಂಡಿದ್ದಾರೆ. ಕೌಟುಂಬಿಕ ನ್ಯಾಯಾಲಯವು ಪ್ರಕರಣ ಪರಿಶೀಲನೆ ಮಾಡಿ ಮಹಿಳೆಗೆ ಹಣ ನೀಡುವುದು ಅವಶ್ಯಕ ಎಂದು ತೀರ್ಪು ನೀಡಿದೆ. ಹೀಗಾಗಿ ಆಕೆಯ ಅತ್ತೆ (Mother In Law), ಮಾವ (Father In Law) ಮರು ಪರಿಶೀಲನೆ ಮಾಡುವಂತೆ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ.

ಹೈಕೋರ್ಟ್ (High Court) ನಿಂದ ಸ್ಪಷ್ಟ ತೀರ್ಪು

ಹೈಕೋರ್ಟ್ (High Court) ನಿಂದ ಈ ಒಂದು ಪ್ರಕರಣ ಸಂಬಂಧಿಸಿದಂತೆ ಮರು ಪರಿಶೀಲನೆ ಮಾಡಲಾಗಿದೆ. ಪತಿಯ ಮರಣದ ನಂತರ ಆಕೆಯ ಗಂಡನ ತಂದೆ ತಾಯಿ ವಿರುದ್ಧ ಜೀವನಾಂಶ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂಬ ತೀರ್ಪನ್ನು ನೀಡಿದೆ. ಹೀಗಾಗಿ ಸೊಸೆ ಜೀವನಾಂಶ ನಿರ್ವಹಣೆಗೆ ಹಣ ನೀಡುವಂತೆ ಮಾಡಿಕೊಂಡ ಬೇಡಿಕೆಯನ್ನು ಅಂಗೀಕರಿಸಿದ್ದ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಲಾಗಿದೆ.

advertisement

Leave A Reply

Your email address will not be published.