Jeep Cars: ಜೀಪ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ! BMW ರೀತಿಯ ಫೀಚರ್ ಕಡಿಮೆ ಬೆಲೆಗೆ
ಜೀಪ್ ವಾಹನಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ರಸ್ತೆಯ ಮೇಲೆ ಬೇರೆ ಬ್ರಾಂಡ್ ಗಳಿಗೆ ಹೋಲಿಕೆ ಮಾಡಿದಲ್ಲಿ ಅಷ್ಟೊಂದು ಜೀಪ್ ವಾಹನಗಳು ಕಾಣದೆ ಇದ್ದರೂ ಕೂಡ ಇದನ್ನು ಇಷ್ಟಪಡುವ ಒಂದು ಜನರ ಸಮೂಹ ಇದೆ. ಇವರ ಪಾಲಿಗೆ ಪರ್ಫಾರ್ಮೆನ್ಸ್ ಗೆ ಇನ್ನೊಂದು ಹೆಸರಾಗಿದೆ ಜೀಪ್. ನಿರೀಕ್ಷೆ ಮಾಡಿದಂತೆ ಜೀಪ್ ನ ಕಾರುಗಳು (Jeep Cars) ಪರ್ಫಾರ್ಮೆನ್ಸ್ ಕೂಡ ನೀಡುತ್ತವೆ.
ಆದರೆ ಈಗ ಜೀಪ್ ಹಲವಾರು ಡಿಸ್ಕೌಂಟ್ ಗಳನ್ನು ನಿಮ್ಮ ಮುಂದೆ ನೀಡುತ್ತಿದೆ. ಜೊತೆಗೆ ಮೇಂಟೆನೆನ್ಸ್ ಆಫರ್ಸ್ ಹಾಗೂ ಅಡಿಷನಲ್ ವಾರಂಟಿ ಕೂಡ ನಿಮ್ಮದಾಗಲಿದೆ. ಎಲ್ಲಾ ಆಫರ್ ಗಳ ಮೂಲಕ ಜೀಪ್ ತನ್ನ ಗ್ರಾಹಕರ ಬೇಸ್ ಅನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾದರೆ ಜೀಪ್ ನ ಯಾವ ಕಾರುಗಳಲ್ಲಿ ಯಾವ ತರಹದ ಆಫರ್ ಗಳು ನಿಮಗೆ ಸಿಗಲಿವೇ, ನಿಮ್ಮ ಮುಂದಿನ ಕಾರು ಜೀಪ್ ನದ್ದಾಗಲಿದೆಯೇ ನೀವೇ ಮುಂದೆ ಓದಿ ನಿರ್ಧರಿಸಿ.
ಜೀಪ್ ಕಂಪಾಸ್ (Jeep Compass) ಕಾರಿನ ಮೇಲಿನ ಡಿಸ್ಕೌಂಟ್
ಜೀಪ್ ಕಂಪಾಸ್ (Jeep Compass) ನ ಬಗ್ಗೆ ಮಾತನಾಡುವುದಾದರೆ ಜೀಪ್ ಕಂಪಾಸ್ ನ ಎಕ್ಸ್ ಶೋರೂಮ್ ಬೆಲೆಗಳು ಈಗ 20.69 ಲಕ್ಷ ಗಳಿಂದ ಆರಂಭವಾಗುತ್ತದೆ. ಈಗ ಈ ಬೆಲೆಗಳ ಮೇಲೆ ಜೀಪ್ 1.15 ಲಕ್ಷಗಳ ರೂಪಾಯಿಗಳ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಇದಲ್ಲದೆ ಕಾರ್ಪೊರೇಟ್ ಡಿಸ್ಕೌಂಟ್ ಆಗಿ 15,000 ಡಿಸ್ಕೌಂಟ್ ಕೂಡ ನಿಮ್ಮದಾಗಿಸಿಕೊಳ್ಳಬಹುದು. ಈ ಎಲ್ಲಾ ಡಿಸ್ಕೌಂಟ್ಗಳನ್ನು ಪರಿಗಣಿಸಿದರೆ ಜೀಪ್ ಕಂಪಾಸ್ ಉತ್ತಮ ಬೆಲೆಗೆ ನಿಮ್ಮದಾಗಬಹುದು.
ಜೀಪ್ ಮೆರಿಡಿಯನ್ (Jeep Meridian) ಕಾರಿನ ಮೇಲಿನ ಡಿಸ್ಕೌಂಟ್
ಜೀಪ್ ಮೆರಿಡಿಯನ್ (Jeep Meridian)ನ ಬಗ್ಗೆ ಹೇಳುವುದಾದರೆ, ಈ ಕಾರಿನ ಮೇಲು ಕಂಪನಿ ಡಿಸ್ಕೌಂಟ್ ನೀಡುತ್ತಿದೆ. ಪ್ರಸ್ತುತ ಈ ಕಾರಿನ ಎಕ್ಸ್ ಶೋರೂಮ್ ಬೆಲೆ 33,60,000 ದಿಂದ ಆರಂಭ ಆಗುತ್ತಿದೆ. ಈ ಕಾರಿನ ಮೇಲೆ ಜೀಪ್ ನ ಅತ್ಯಧಿಕ ಎಂದರೆ 2.8 ಲಕ್ಷಗಳ ಡಿಸ್ಕೌಂಟ್ ಸಿಗಲಿದೆ. ಇದರ ಮೇಲೆ 20,000 ಕಾರ್ಪೊರೇಟ್ ಡಿಸ್ಕೌಂಟ್ ಕೂಡ ಗ್ರಾಹಕರಿಗೆ ಸಿಗಲಿದೆ.
ಲಾಂಚ್ ಆಗಲಿವೆ ಹೊಸ ಕಂಪಾಸ್ ಮತ್ತು ಮೆರಿಡಿಯನ್
ಜೀಪ್ ಕಂಪಾಸ್ ಹಾಗೂ ಜೀಪ್ ಮೆರಿಡಿಯನ್ ಕಾರುಗಳ ಹೊಸ ಮಾಡೆಲ್ ಗಳು ಅಡಾಸ್ (ADAS) ಸಿಸ್ಟಮ್ ನೊಂದಿಗೆ ಲಾಂಚ್ ಆಗುವ ಸಿದ್ಧತೆಗಳು ಕೂಡ ನಡೆಯುತ್ತಿರುವುದರಿಂದ ಈಗ ಇರುವ ಮಾಡೆಲ್ ಗಳ ಮೇಲೆ ಈ ಡಿಸ್ಕೌಂಟ್ ನೀಡಲಾಗುತ್ತಿದೆ. ಎರಡೂ ಕಾರುಗಳು ಎರಡು ಲೀಟರ್ ನ ಟರ್ಬೋ ಚಾರ್ಜ್ ಡೀಸಲ್ ಇಂಜಿನ್ ನ ಆಯ್ಕೆಯೊಂದಿಗೆ ಗ್ರಾಹಕರಿಗೆ ಸಿಗುತ್ತಿವೆ. ಕಾರು 168 ಬಿಎಚ್ಪಿ (BHP) ಪವರ್ ಹಾಗೂ 350 ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಡ್ರೈವ್ ಟ್ರೈನ್ ಬಗ್ಗೆ ಮಾತನಾಡುವುದಾದರೆ ಈ ಕಾರಿನಲ್ಲಿ 6 ಸ್ಪೀಡ್ ಮಾನ್ಯುಯಲ್ ಅಥವಾ 9 ಸ್ಪೀಡ್ ಆಟೋಮೆಟಿಕ್ ಆಯ್ಕೆಗಳು ಗ್ರಾಹಕರ ಮುಂದೆ ಇದೆ.
ಜೀಪ್ ಕಾರ್ ಗಳ ಲುಕ್ ಹಾಗೂ ರೋಡ್ ಪ್ರಸೆನ್ಸ್ ಬಹುತೇಕ ಮಂದಿಯ ಅಚ್ಚುಮೆಚ್ಚಿನ ವಿಷಯವಾಗಿದೆ. ಅದೇ ರೀತಿ ಈ ಕಾರುಗಳು ಅತ್ಯುತ್ತಮವಾದ ಪರ್ಫಾರ್ಮೆನ್ಸ್ ಕೂಡ ನೀಡುತ್ತವೆ. ನಿಮಗೂ ಕೂಡ ಜೀಪ್ ಕಾರ್ ಗಳ ಖರೀದಿ ಮಾಡಬೇಕು ಎಂಬ ಯೋಚನೆ ಇದ್ದಲ್ಲಿ ಈಗ ಇರುವ ಡಿಸ್ಕೌಂಟ್ ಗಳನ್ನು ಬಳಸಿ ಉತ್ತಮ ಬೆಲೆಗೆ ಜೀಪ್ ಕಾರುಗಳನ್ನು ಖರೀದಿಸಬಹುದು.