Karnataka Times
Trending Stories, Viral News, Gossips & Everything in Kannada

Traffic Rule: ಇನ್ಮೇಲೆ ಇಂತಹ ವಾಹನ ಸವಾರರ್ ಮನೆಗೆ ಭೇಟಿ ಕೊಡಲಿದ್ದಾರೆ ಪೊಲೀಸರು! ಹೊಸ ರೂಲ್ಸ್ ಜಾರಿಗೆ

advertisement

ಇಂದು ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ರಸ್ತೆಯಲ್ಲಿ ವಾಹನಗಳು ಬೇಕಾಬಿಟ್ಟಿಯಾಗಿ ಡ್ರೈವ್ ಮಾಡಿ ಅದೆಷ್ಟೋ ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಹೆಚ್ಚುತ್ತಿರುವ ವಾಹನ ಸಂಖ್ಯೆಯಿಂದ ಪರಿಸರವು ಮಾಲಿನ್ಯವಾಗುತ್ತಿದ್ದು ಸಂಚಾರ ಮಾಡಲು ಸಹ ಕಷ್ಟವೆನಿಸಿದೆ. ಇತ್ತೀಚೆಗೆ ಅಷ್ಟೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ವಾಹನಗಳನ್ನು ಹರಿಸಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ಹೆಚ್ಚು ನಡೆಯುತ್ತಿದೆ.‌ ಇದಕ್ಕಾಗಿ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಸಂಚಾರ ನಿಯಮ (Traffic Rule) ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು (Traffic Police) ಇದೀಗ ಕಟ್ಟುನಿಟ್ಟಾದ ಕ್ರಮವನ್ನು‌ ಕೈಗೊಂಡಿದ್ದಾರೆ

Traffic Rule ಹೊಸ ಅಪ್ಡೇಟ್:

ಇನ್ನು ಮುಂದೆ ನೀವು ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುವಂತಿಲ್ಲ. ನೀವು ನಿಯಮ ಮೀರಿದ್ದರೂ ದಂಡ ಸಂಗ್ರಹ ಮಾಡಲು ಸಂಚಾರಿ ಪೊಲೀಸರು ದಂಡ ಕಟ್ಟದಿದ್ದವರ ಮನೆಗೇ ಎಂಟ್ರಿ ನೀಡಲಿದ್ದಾರೆ.

ಇಂತಹ ವಾಹನ ಸವಾರರ ಮನೆಗೆ ಎಂಟ್ರಿ:

50 ಸಾವಿರಕ್ಕೂ ಹೆಚ್ಚು ದಂಡ ಪಾವತಿ ಮಾಡದವರ ಮನೆ ಬಾಗಿಲಿಗೆ ಸಂಚಾರಿ ಪೊಲೀಸರು ಬಂದು ದಂಡ ಮೊತ್ತವನ್ನು ಕಲೆಕ್ಟ್ ಮಾಡಲಿದ್ದಾರೆ. ಇಲ್ಲಿಯತನಕ 2681 ಸವಾರರು 50 ಸಾವಿರಕ್ಕೂ ಅಧಿಕ ದಂಡ ಪಾವತಿ ಮಾಡಲು ಬಾಕಿ ಇದ್ದಾರೆ. ಇದನ್ನೆಲ್ಲ ಸೂಕ್ಷ್ಮ ವಾಗಿ ಗಮನ ಹರಿಸಿದ ಟ್ರಾಫಿಕ್ ಪೊಲೀಸರು ವಾಹನ ಸವಾರರ ಮೇಲೆ ಕಣ್ಣಿಟ್ಟಿದ್ದಾರೆ.

advertisement

Image Source: Cartoq

ಟ್ರಾಫಿಕ್ ನಿಯಮ (Traffic Rule) ಪಾಲನೇ ಅತೀ ಅಗತ್ಯ:

ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯವಾಗಿದ್ದು ಈ ಬಗ್ಗೆ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕಾಗಿದೆ. ರಾಂಗ್ ಸೈಡ್ ಡ್ರೈವ್, ಅತೀ ವೇಗ, ಸೇರಿದಂತೆ , ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲಾ ಕಡೆ ಸಿಸಿಟಿವಿಗಳನ್ನು ಅಳವಡಿಸಿದ್ದು ಪರಿಶೀಲನೆ ಕೂಡ ಮಾಡುತ್ತಿದ್ದಾರೆ.

ಕ್ಯೂ ಆರ್​ ಕೋಡ್​ ಅಳವಡಿಕೆ:

ಇಂದು ಟ್ರಾಫಿಕ್ ನಿಯಮ (Traffic Rule) ಮೀರಿದವರನ್ನು ಪತ್ತೆ ಹಚ್ಚಲು ಪೊಲೀಸರು ಹೈಟೆಕ್​ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಹೌದು ಇನ್ಮುಂದೆ ನಿಯಮ ಮೀರಿದ್ರೆ ಕ್ಯೂ ಆರ್​ ಕೋಡ್​ ಸಹಿತ ನೋಟಿಸ್​ ಮನೆಗೆ ಬಾಗಿಲಿಗೆ ಕೂಡ ಬರಲಿದೆ. QR ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು ‌ ಉಲ್ಲಂಘನೆ ಬಗ್ಗೆ ಸಂಪೂರ್ಣ ಮಾಹಿತಿ, ವಿವರ ಫೋಟೋ ಸಹಿತ ಲಭ್ಯವಾಗಲಿದೆ. ಹಾಗಾಗಿ ವಾಹನ ಸವಾರರು ಬಗ್ಗೆ ಜಾಗೃತ ವಹಿಸಬೇಕಿದೆ.

advertisement

Leave A Reply

Your email address will not be published.