Karnataka Times
Trending Stories, Viral News, Gossips & Everything in Kannada

Civil Code: ಹಳೆ ಕೇಸ್ ವಿಚಾರವಾಗಿ ಕೋರ್ಟು ಕಚೇರಿ ಅಲೆಯುತ್ತಿದ್ದವರಿಗೆ ಗುಡ್ ನ್ಯೂಸ್! ಹೊಸ ಆದೇಶ ಜಾರಿಗೆ

advertisement

ಬಹುತೇಕ ಅಪರಾಧಗಳು, ಕೋರ್ಟ್ ಕಚೇರಿ ಎಂದು ಅಲೆಯುವವರು ಯಾರೆಂಬ ಗೊಂದಲದಿಂದಲೇ ಅಪರಾಧದ ಪ್ರಕ್ರಿಯೆ ಕೋರ್ಟ್ (Court) ವರೆಗೆ ಹೋಗದೆ ಅಲ್ಲಲ್ಲಿ ಮರೆಮಾಚಲಾಗುತ್ತಿದೆ. ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಿ ಜನರಿಗೆ ಕಾನೂನು ವ್ಯವಸ್ಥೆ ಮನದಟ್ಟು ಮಾಡಬೇಕೆಂದು ಅನೇಕ ನ್ಯಾಯಾಂಗೀಯ ವ್ಯವಸ್ಥೆಯಲ್ಲಿ ಕಾಲಕ್ಕೆ ತಕ್ಕಂತೆ ಅಗತ್ಯ ಮಾರ್ಪಾಡು ಮಾಡಲಾಗುತ್ತಿದ್ದು ಇದೀಗ ಕರ್ನಾಟಕ ರಾಜ್ಯದಲ್ಲಿ ತ್ವರಿತ ನ್ಯಾಯಲಯದ ಭರವಸೆ ನೀಡುವ ಹೊಸ ಸಿವಿಲ್ ಪ್ರೊಸಿಜರ್ ಕೋಡ್ (Civil Code) ಅನ್ನು ಸೂಚಿಸಿದ್ದು ಅದನ್ನು ಅಂಗೀಕಾರ ಕೂಡ ಮಾಡಲಾಗಿದೆ. ಸದ್ಯ ಈ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ.

ಹಾಗೆಂದರೇನು?

ಸಣ್ಣ ವರ್ಗದ ರೈತರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರ್ಗದವರಿಗೆ ಅನುಕೂಲವಾಗಲೆಂದು ಕರ್ನಾಟಕದಲ್ಲಿ ಈ ಒಂದು ಶೀಘ್ರ ನ್ಯಾಯಾಲಯದ ವ್ಯವಸ್ಥೆ ಜಾರಿಗೆ ತರಲು ಮುಂದಾಗಲಾಗಿದೆ. ನ್ಯಾಯಾಲಯದ ಪ್ರಕ್ರಿಯೆಯನ್ನು ಶೀಘ್ರ ಗೊಳಿಸುವುದು ಈ ನ್ಯಾಯಾಂಗೀಯ ವ್ಯವಸ್ಥೆಯ ಮೂಲ ಉದ್ದೇಶವಾಗಿದೆ. ಹಾಗಾಗಿ ಸಿವಿಲ್ ಪ್ರಕ್ರಿಯೆ ತಿದ್ದುಪಡಿಗೆ ಅಧಿಸೂಚನೆ ಹೊರಡಿಸಿದೆ. ಜುಲೈನಲ್ಲಿ ಈ ಹೊಸ ಸಿವಿಲ್ ಕೋಡ್ (Civil Code) ಬಗ್ಗೆ ಸೂಚಿಸಿದ್ದು ಫೆಬ್ರವರಿ 18ರಂದು ರಾಷ್ಟ್ರ ಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದ ಒಪ್ಪಿಗೆ ಸಹ ದೊರೆತಿದೆ. ಹಾಗಾಗಿ ಇನ್ನು ಮುಂದೆ ಈ ಹೊಸ ಸಿವಿಲ್ ಕೋಡ್ ಅನ್ವಯ ಕಾನೂನು ಪ್ರಕ್ರಿಯೆ ವಾಗಲಿದೆ.

Image Source:: Ahmedebad Mirror

New Civil Code ಉದ್ದೇಶವೇನು?

advertisement

ವಾರ್ಷಿಕವಾಗಿ ಮೂರು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಸಣ್ಣ ಕೃಷಿ ಆದಾಯ ಮೂಲ ಹೊಂದಿರುವ ರೈತರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ಪ್ರಕರಣವು ಬಹುತೇಕ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳೇ ಆಗಿರಲಿವೆ. ವ್ಯಕ್ತಿ ದುರ್ಬಲ ವರ್ಗದವನಾಗಿದ್ದು ಕೇಸ್ 5ವರ್ಷಕ್ಕಿಂತಲೂ ಹಳೆಯದ್ದಾಗಿದ್ದರೆ ಮತ್ತು ಆತನ ಪೂರ್ತಿ ಆದಾಯ ಮೂರು ಲಕ್ಷಕ್ಕಿಂತ ಕಡಿಮೆ ಇದ್ದರೆ ಅಂತಹ ಸಂದರ್ಭದಲ್ಲಿ ಆ ವ್ಯಕ್ತಿ ಅಫಿದಾವತ್ (Affidavit) ಸಲ್ಲಿಸಬೇಕು ಆಗ 6 ತಿಂಗಳ ಒಳಗೆ ಪ್ರಕರಣ ಇತ್ಯರ್ಥ ಆಗಲಿದೆ.

ಸಚಿವರಿಂದಲೂ ಬೆಂಬಲ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರದ ಎಚ್. ಕೆ. ಪಾಟೀಲ್ (H K Patil) ಅವರು ಈ ಬಗ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಈ ನಿಯಮ ಜಾರಿಗೆ ಬರಲಿದೆ. ಕಳೆದ ವರ್ಷ ಜುಲೈನಲ್ಲಿ ಇದರ ಮಸೂದೆಯನ್ನು ಅಂಗೀಕರಿಸಲಾಗಿದ್ದು ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆ ಸಹ ದೊರೆತಿದೆ. ಇದರ ತಿದ್ದುಪಡಿಯ ಪ್ರಕಾರವಾದಿ ಅಥವಾ ಪ್ರತಿವಾದಿಯೇ ಇರಲಿ ಸಣ್ಣ ಅಥವಾ ದುರ್ಬಲ ವರ್ಗದ ರೈತರಿಗೆ ಮತ್ತು ಬಡವರ್ಗದ ಜನತೆಗೆ ಆರು ತಿಂಗಳ ಒಳಗಾಗಿ ಪ್ರಕರಣ ವಿಚಾರಣೆ ಮಾಡಿ ವಿಲೇವಾರಿ ಮಾಡುವಂತೆ ತಿಳಿಸಲಿದೆ ಎಂದು ಸಚಿವರು ಹೇಳಿದ್ದಾರೆ.

Image Source: Business Guardian

ಅನೇಕ ಚಿಂತನೆ

ಈ ಒಂದು ತಿದ್ದುಪಡಿಗೆ ಸಾಕಷ್ಟು ಚಿಂತನೆ ನಡೆಸಿರುವುದು ಕಾಣಬಹುದು.ಸಕಾಲದಲ್ಲಿ ನ್ಯಾಯ ಒದಗಿಸಬೇಕು ಎಂಬ ನೆಲೆಯಲ್ಲಿ ಅನೇಕ ಚಿಂತನೆಯನ್ನು ಈ ಒಂದು ತಿದ್ದುಪಡಿ ಒಳಗೊಂಡಿದೆ. ಈ ಒಂದು ತಿದ್ದುಪಡಿ ಜಾರಿಗೆ ತರುವ ಮುನ್ನ ತಜ್ಞರ ಜೊತೆ ವ್ಯಾಪಕವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವ HK ಪಾಟೀಲ್ ಅವರು ಹೇಳಿದ್ದಾರೆ.

advertisement

Leave A Reply

Your email address will not be published.