Karnataka Times
Trending Stories, Viral News, Gossips & Everything in Kannada

Gruha Lakshmi: ಬ್ಯಾಂಕ್ ಗೆ ಹೋಗದೆ ಗೃಹಲಕ್ಷ್ಮಿ ಹಣ ಬಂದಿದೆಯಾ ಎಂದು ತಿಳಿಯುವ ಸುಲಭ ವಿಧಾನ ಹೀಗಿದೆ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಬಹು ಮುಖ್ಯವಾದ ಯೋಜನೆ ಗೃಹಲಕ್ಷ್ಮಿ (Gruha Lakshmi)  ಕೂಡ ಒಂದಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಮನೆಯ ಯಜಮಾನಿ ಮಹಿಳೆಗೆ ಎರಡು ಸಾವಿರ ರೂಪಾಯಿ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಮಾಡುವ ಈ ಯೋಜನೆ ಹೆಚ್ಚಿನ ಮಹಿಳೆಯರಿಗೆ ಲಭ್ಯವಾಗುತ್ತಿದೆ.

ಈ ಕ್ರಮ ಜಾರಿ

ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ನೋಂದಣಿ ಮಾಡಿ ಹಣ ಬಾರದೇ ಇದ್ದಲ್ಲಿ ಸಮಸ್ಯೆ ನಿವಾರಣೆ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಶಿಬಿರ ಆಯೋಜನೆ ಮಾಡಿದ್ದು, ಇಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಬಗ್ಗೆ ಮತ್ತು ಆಧಾರ್ ಜೋಡಣೆ ವಿವರ, ಇ-ಕೆವೈಸಿ ಅಪ್ಡೆಟ್, ಇತ್ಯಾದಿ ಪರಿಶೀಲನೆ ಮಾಡಿ ಪರಿಹಾರ ನೀಡಲಾಗುತ್ತಿದೆ.

Image Source: defindia

Gruha Lakshmi ಏಳನೇ ಕಂತಿನ ಹಣ ಜಮೆ?

advertisement

ಅಂತ್ಯೋದಯ, ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಕಾರ್ಡ್ ಗಳಲ್ಲಿ ಕುಟುಂಬದ ಯಜಮಾನಿ ಎಂದು ಅರ್ಹರಾಗಿರುವ ಮಹಿಳೆಗೆ ಮಾತ್ರ ಈ ಹಣ ಜಮೆ ಮಾಡಲಾಗುತ್ತದೆ. ಈಗಾಗಲೇ ಆರು‌ ಕಂತಿನ ವರೆಗೆ ಗೃಹಲಕ್ಷ್ಮಿ (Gruha Lakshmi) ಹಣ ಬಿಡುಗಡೆಯಾಗಿದ್ದು ಏಳನೇ ಕಂತಿನ ಹಣ ಕೆಲವು ಮಹಿಳೆಯರಿಗೆ ಬಿಡುಗಡೆ ಗೊಂಡಿದೆ. ಈ ಬಗ್ಗೆ ಪರಿಶೀಲನೆ ಮಾಡಬೇಕಾದ್ರೆ ಸುಲಭ ವಿಧಾನ ಇಲ್ಲಿದೆ.

ಹೀಗೆ ಚೆಕ್ ಮಾಡಿ

ಹಣ ಬಂದಿದೆಯಾ ಇಲ್ಲವೋ ಎಂದು ಚೆಕ್ ಮಾಡಲು ಮೊದಲಿಗೆ ನೀವು Mahiti Kanaja Gruhalakshmi Status Check ಇಲ್ಲಿಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಇಲ್ಲಿ ಸರ್ಚ್ Department ಎನ್ನುವ ಆಯ್ಕೆ ಇರಲಿದ್ದು, ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಟೇಟಸ್ ಎಂಬ ಆಶ್ಚನ್ ಮೇಲೆ ಕ್ಲಿಕ್‌ ಮಾಡಿ. ತದನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Submit ಬಟನ್‌ ಮೇಲೆ ಕ್ಲಿಕ್‌ ಮಾಡಿ. ಇದರಲ್ಲಿ ನಿಮ್ಮ ಅರ್ಜಿ ಪ್ರಕ್ರಿಯೆ ಏನಾಗಿದೆ? ಎಷ್ಟು ‌ಕಂತಿನ ಹಣ ಜಮೆಯಾಗಿದೆ ಎಂಬ ಮಾಹಿತಿ ನಿಮಗೆ ಲಭ್ಯವಾಗಲಿದೆ.

Image Source: bharatagritech

ಬಾಕಿ ಇದ್ದವರಿಗೂ Gruha Lakshmi ಹಣ ಜಮೆ

ಈಗಾಗಲೇ ನೋಂದಣಿ ಮಾಡಿದ್ದರೂ ಕೆಲವು ಮಹಿಳೆಯರಿಗೆ ಹಣ ಜಮೆಯಾಗಿಲ್ಲ.‌ ಒಂದು ವೇಳೆ ನಿಮ್ಮ‌ ಅರ್ಜಿ ಯಲ್ಲಿ ಸಮಸ್ಯೆ ಏನು ಎಂಬುದನ್ನು ಅರಿತು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಕೆ ಮಾಡಿದ್ರೆ ಬಾಕಿ ಹಣವೂ ನಿಮಗೆ ಪಾವತಿ ಯಾಗುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

advertisement

Leave A Reply

Your email address will not be published.