Karnataka Times
Trending Stories, Viral News, Gossips & Everything in Kannada

Inherited Property: ಪಿತ್ರಾರ್ಜಿತ ಆಸ್ತಿಯನ್ನು ಖರೀದಿ ಮಾಡುವಾಗ ಈ ದಾಖಲೆ ಚೆಕ್ ಮಾಡಲೇಬೇಕು! ಹೊಸ ರೂಲ್ಸ್

advertisement

ಇಂದು ಆಸ್ತಿ ಅನ್ನೋದು ಬಹಳ ಪ್ರಮುಖ ಅಂಶ ವಾಗಿದ್ದು ಆಸ್ತಿಯ ಹೂಡಿಕೆ ಅನ್ನೋದು ಇಂದು ಹೆಚ್ಚು ಪ್ರಚಲಿತದಲ್ಲಿದೆ.‌ ಹಾಗಾಗಿ ಆಸ್ತಿ ಖರೀದಿ,ಮಾರಾಟ ಇಂದು‌ ಹೆಚ್ಚಳ ವಾಗಿದೆ. ಇಂದು ಹೆಚ್ಚಿನ ಕಡೆ ಕಟ್ಟಡ ,ಮನೆ ನಿರ್ಮಾಣ ವಾಗಿರುವುದರಿಂದ ಆಸ್ತಿಗೆ ಬೇಡಿಕೆ ಹೆಚ್ಚು. ಬೇಡಿಕೆ ಹೆಚ್ಚಾದಂತೆ ಮೋಸದ ವಹಿವಾಟು ಕೂಡ ಹೆಚ್ಚಳ ವಾಗಿದ್ದು ಆಸ್ತಿ ಖರೀದಿ (Property Purchase) ಬಗ್ಗೆ ಎಷ್ಟು ಎಚ್ಚರ ತೆಗೆದುಕೊಂಡರೂ ಸಾಲದು.ಹಾಗಾಗಿ ಆದರ ಮುಂಜಾಗ್ರತೆ ಬಗ್ಗೆ ನೀವು ತಿಳಿದಿರಬೇಕು.

ಈ ಬಗ್ಗೆ ಗಮನಿಸಿ:

ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಆ ಆಸ್ತಿ (Property) ಹೇಗೆ ಬಂದಿದೆ ಅನ್ನೋದು ಮುಖ್ಯವಾಗಿ ಗಮನಿಸ ಬೇಕಾದ ಅಂಶ ವಾಗಿದೆ. ಅಂದರೆ ಆ ಆಸ್ತಿ ಸ್ವಯಾರ್ಜಿತವಾ ಅಥವಾ ಪಿತ್ರಾರ್ಜಿತವಾ? ಪಿತ್ರಾರ್ಜಿತ ಆದರೆ ಮನೆಯ ಹಿರಿಯರಿಂದ ಮುಂದಿನ ತಲೆಮಾರಿಗೆ ವರ್ಗಾವಣೆಗೆ ಆಗಿದೆಯೇ ಇತ್ಯಾದಿ ತಿಳಿದಿರಬೇಕು.

ಪಿತ್ರಾರ್ಜಿತ ಆಸ್ತಿ:

advertisement

ಕಾನೂನಿನ ಪ್ರಕಾರ ಈ ಆಸ್ತಿ (Property) ‌ಅನ್ನೋದು ಒಂದು ಪೂರ್ವಿಕ ಆಸ್ತಿ ಯಾಗಿದ್ದು ಆಸ್ತಿಯು ಪುರುಷ ವಂಶಾವಳಿಯ ಮೂಲಕ ನಾಲ್ಕು ತಲೆಮಾರುಗಳವರೆಗೆ ಪಡೆಯುವಂತಹ ಆಸ್ತಿ.‌ ಪೂರ್ವಜರ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೂ ಹಕ್ಕು ಇರಲಿದ್ದು ಹಿಂದಿನ ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ (Inherited Property) ಎನ್ನುತ್ತಾರೆ.

ಈ ದಾಖಲೆ ಪರಿಶೀಲನೆ ಮಾಡಿ:

 

Image Source: Deccan Chronicle

 

ಆ ಆಸ್ತಿ ಪಿತ್ರಾಜಿರ್ತ ವಾದರೆ ಮಾರಾಟ ಮಾಡಲು ಹಕ್ಕಿದೆಯಾ ಎಂಬುದನ್ನು ಆ ಜಾಗ ಪಡೆದು ಕೊಳ್ಳುವವರು ತಿಳಿಯಬೇಕು.‌ ಅದೇ ರೀತಿ ಈ ಆಸ್ತಿಗೆ ಇತರ ಯಾವ ಉತ್ತರಾಧಿಕಾರಿಯೂ ಇಲ್ಲ ಎಂಬುದನ್ನು ಈ ಮೊದಲೇ ಸ್ಪಷ್ಟನೆ ಪಡಿಸಬೇಕು. ಆ ಆಸ್ತಿ ವಿಲ್ ಮೂಲಕ ಬಂದಿದ್ದಲ್ಲಿ ಅದು ನಕಲಿಯೋ, ನಿಜವೋ ಎನ್ನುವ ಪರಿಶೀಲನೆ ಕೂಡ ಮಾಡಬೇಕು.

  • ಒಂದು ವೇಳೆ ಆಸ್ತಿ ಖರೀದಿ ಮಾಡಿ ಮುಂದಿನ‌ ದಿನದಲ್ಲಿ ವ್ಯಾಜ್ಯ ಬಂದಲ್ಲಿ ಅದನ್ನು ಖರೀದಿದಾರರಿಗೆ ಮಾರಾಟಗಾರರು ಬಗೆಹರಿಸಿಕೊಡುವುದು ಸಹ ಮುಖ್ಯ.
  • ವಂಶವೃಕ್ಷ ಹಾಗೂ ಆಸ್ತಿ ಖರೀದಿಸುವ ವೇಳೆಗೆ ಅದರ ಮೇಲೆ ಹಕ್ಕು ಯಾರಿಗೆ ಇದೆ. ಯಾರ್ಯಾರು ಬದುಕಿದ್ದಾರೆ ಎಂಬ ಬಗ್ಗೆ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.
  • ಆಸ್ತಿಯ ಮೂಲ ಮಾಲೀಕ ಅದರ ಮೇಲೆ ಸಾಲ ಪಡೆದು, ಅದನ್ನು ಹಿಂತಿರುಗಿಸಲಾಗದೆ ಮೃತಪಟ್ಟಿದ್ದರೆ ಸಾಲ ಕ್ಲಿಯರ್ ಆಗಿದೆಯೇ ತಿಳಿದುಕೊಳ್ಳಿ
  • ಜಮೀನಿನ ಹಕ್ಕುಪತ್ರ ಟೈಟಲ್ ಡೀಡ್ ಆ ಜಮೀನು ಮಾರಾಟಗಾರನ ಹೆಸರಲ್ಲಿ ನೋಂದಣಿಯಾಗಿದೆಯಾ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಿ.

advertisement

Leave A Reply

Your email address will not be published.