Karnataka Times
Trending Stories, Viral News, Gossips & Everything in Kannada

Property Purchase: ಕರ್ನಾಟಕದ ಯಾವಾ ಮೂಲೆಯಲ್ಲೂ ಪ್ರಾಪರ್ಟಿ ಖರೀದಿ ಮಾಡುವ ಮೊದಲು ಈ ದಾಖಲೆಗಳನ್ನು ಚೆಕ್ ಮಾಡಿ

advertisement

ಇಂದು ಪ್ರತಿಯೊಬ್ಬರು ಕೂಡ ಆಸ್ತಿ ಅಂತಸ್ತುಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ.ಅದರಲ್ಲೂ ಜಮೀನು ಖರೀದಿ ಇಂದು ಸಾಮಾನ್ಯವಾಗಿ ಬಿಟ್ಟಿದೆ. ಇಂದು ನಗರ ಪ್ರದೇಶದಲ್ಲಿ ಮನೆ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದ್ದು ಆಸ್ತಿ ಖರೀದಿ ಮಾಡಲು ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಆದ್ರೆ ಆಸ್ತಿ ಖರೀದಿ (Property Purchase) ಮಾಡುವ ಮುನ್ನ ಕೆಲವೊಂದು ಮುನ್ನಚ್ಚರಿಕೆ ಕ್ರಮಗಳನ್ನು ಕೂಡ ವಹಿಸ ಬೇಕಾಗುತ್ತದೆ. ಆಸ್ತಿ ಪತ್ರದ ದಾಖಲೆ ಗಳನ್ನು ಸೂಕ್ಷ್ಮ ವಾಗಿ ಗಮನಿಸುವ ಮೂಲಕ ಆಸ್ತಿ ಖರೀದಿ ಮಾಡಿ.

ಆಸ್ತಿ ವಂಚನೆ ಹೆಚ್ಚಳ:

 

Image Source: RERA Registration

 

ಇಂದು ನಗರ ಪ್ರದೇಶದಲ್ಲಂತೂ ಆಸ್ತಿ ಖರೀದಿ (Property Purchase) ವಂಚನೆ ಹೆಚ್ಚಾಗಿದ್ದು ಒಂದೊಂದು ಜಾಗವನನ್ನು ನಾಲ್ಕೈದು ಜನಕ್ಕೆ ವಂಚನೆ ಮಾಡುವವರು ಕೂಡ ಇದ್ದಾರೆ. ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವ ಮೂಲಕ ಮೋಸ ಗೊಳಿಸುವವರು ಇದ್ದಾರೆ. ಹೀಗಾಗಿ ಯಾವುದೇ ಜಾಗ ಖರೀದಿ (Property Purchase) ಮಾಡುವ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ಖರೀದಿ ಮಾಡಿ.

advertisement

ಈ ಬಗ್ಗೆ ಗಮನ ವಹಿಸಿ:

 

Image Source: Goodreturns

 

  • ನಾವು ಯಾವುದೇ ಆಸ್ತಿ ಖರೀದಿ (Property Purchase) ಮಾಡುವ ಮುನ್ನ ಆಸ್ತಿಯ ಮಾಲೀಕರು ಯಾರು, ಯಾರ ಹೆಸರಿನಲ್ಲಿದೆ ಈ ಆಸ್ತಿ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇನ್ನು ಈ ಆಸ್ತಿಯನ್ನು ಹೇಗೆ ಪಡೆದರು,ಯಾರಿಂದ ಪಡೆದರು ಎಂಬುದನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯ. ಅದೇ ರೀತಿ ಅವರ ಬಳಿ ಮಾರಾಟ ಪತ್ರವಿದೆಯೇ ಎಂದು ಪರಿಶೀಲನೆ ಮಾಡಬೇಕು.
  • ಇನ್ನು ಆಸ್ತಿಯನ್ನು ಉಡುಗೊರೆಯಾಗಿ ಸ್ವೀಕಾರ ಮಾಡಿದ್ದರೆ ಉಡುಗೊರೆಯನ್ನು ನೀಡಿದ ವ್ಯಕ್ತಿಯೊಂದಿಗೆ ಆಸ್ತಿ ಹೊಂದಿರುವ ವ್ಯಕ್ತಿ ಹೇಗೆ ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯುದು ಸಹ ಮುಖ್ಯ.
  • ಇನ್ನು ಆಸ್ತಿಯನ್ನು ಖರೀದಿ ಮಾಡುವ ಬಯಸುವ ವ್ಯಕ್ತಿಯು ಲಿಂಕ್ ಮಾಡಿದ ದಾಖಲೆಗಳನ್ನು ಕೂಡ ಪರಿಶೀಲನೆ ಮಾಡಬೇಕಾಗುತ್ತದೆ
  • ಇನ್ನು ಆಸ್ತಿ ತೆರಿಗೆ ರಸೀದಿಗಳನ್ನು ಸಹ ತೆಗೆದುಕೊಳ್ಳಬೇಕು. ಸರಿಯಾಗಿ ತೆರಿಗೆ ಪಾವತಿ ಮಾಡಿದ್ದರೋ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.
  • ಇನ್ನು ಮ್ಯುಟೇಶನ್ ಪ್ರಮಾಣಪತ್ರವು ನಿಮ್ಮ ಆಸ್ತಿ ನೋಂದಣಿ ಪೇಪರ್‌ಗಳೊಂದಿಗೆ ಇರಬೇಕು.
  • ನೀವು ಪ್ಲಾಟ್ ಖರೀದಿಸಲು ಬಯಸಿದರೆ, ಈ ಪರಿವರ್ತನೆ ಪ್ರಮಾಣಪತ್ರ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ.
  • ಇನ್ನು ನೀವು ಆಸ್ತಿಯ ಲೇಔಟ್ ಪೇಪರ್ ಅನ್ನು ಕೂಡ ಪರಿಶೀಲನೆ ಮಾಡಬೇಕು.
  • *ಆಸ್ತಿಯ ಮೇಲೆ ಯಾವುದಾದ್ರೂ ಆಕ್ಷೇಪಣೆ ಇದೆಯೇ ಎಂಬುದನ್ನು ನೀವು ಪರಿಶೀಲನೆ ಮಾಡಬೇಕಾಗುತ್ತದೆ.

ಒಟ್ಟಿನಲ್ಲಿ ನೀವು ಯಾವುದೇ ನಗರದಲ್ಲಿ ಆಸ್ತಿ ಖರೀದಿ ‌ಮಾಡುದಾದ್ರೆ ಅದರ ಮೂಲ‌ದಾಖಲೆಗಳನ್ನು ಪರಿಶೀಲನೆ ಮಾಡಿ ಎಲ್ಲ ದಾಖಲೆಗಳನ್ನು ಕಲೆಕ್ಟ್ ಮಾಡಿ ಆಸ್ತಿ ಖರೀದಿ ಮಾಡಿ‌.

advertisement

Leave A Reply

Your email address will not be published.