Karnataka Times
Trending Stories, Viral News, Gossips & Everything in Kannada

CNG Bike: ಕೊನೆಗೂ ಮಾರುಕಟ್ಟೆಗೆ ಬರುತ್ತಿದೆ CNG ಬೈಕ್! 1 KG CNG ಗೆ ಬರೋಬ್ಬರಿ 120 KM ಮೈಲೇಜ್! ಬೆಲೆ ಕೇವಲ ಇಷ್ಟು ಮಾತ್ರ

advertisement

ಸ್ನೇಹಿತರೆ ಹಲವಾರು ಮೋಟಾರ್ ಸೈಕಲ್ ತಯಾರಿಕಾ ಕಂಪನಿಗಳು CNG Bike ಗಳನ್ನು ಮಾರುಕಟ್ಟೆಗೆ ತರುವಂತಹ ನಾನಾ ರೀತಿಯ ಪ್ರಯತ್ನವನ್ನು ಮಾಡಿ ವಿಫಲರಾಗಿದ್ದರು. ಆದರೆ ಈಗ ಬಜಾಜ್ ಆಟೋ (Bajaj Auto), ದೇಶದಾದ್ಯಂತ ಪ್ರಪ್ರಥಮ ಸಿಎನ್‌ಜಿ ಮೋಟಾರ್ಸೈಕಲ್ (CNG Bike) ತಯಾರಿಕಾ ಕಂಪನಿಯಾಗಿದೆ.

ಬಜಾಜ್ ಕಂಪನಿಯ ಎಂ ಡಿ ರಾಜೀವ್ ಬಜಾಜ್ (Bajaj MD Rajiv Bajaj) ಅವರು ಜೂನ್ ತಿಂಗಳಿನಲ್ಲಿ ಬೈಕನ್ನು ಮಾರುಕಟ್ಟೆಗೆ ತರುವ ಅಧಿಕೃತ ಮಾಹಿತಿಯನ್ನು ಹೊರಡಿಸಿದ್ದು ಬೈಕ್ ಖರೀದಿ ಮಾಡಲು ಗ್ರಾಹಕರು ಬಹಳ ಕಾತುರರಾಗಿದ್ದಾರೆ ಅಷ್ಟಕ್ಕೂ ಈ ಸಿಎನ್‌ಜಿ ಮೋಟರ್ ಸೈಕಲ್(CNG Motorcycle) ಗಳ ವಿಶೇಷತೆ ಏನು? ಬೆಲೆ ಎಷ್ಟು? ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಯಿರಿ.

ಪೆಟ್ರೋಲ್ ಗಿಂತ CNG ಬೈಕ್ಗಳು ದಿ ಬೆಸ್ಟ್ ಆಯ್ಕೆ:

ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಇಂಧನದ ಆಯ್ಕೆಯಲ್ಲಿ ತಯಾರಾಗುತ್ತಿರುವಂತಹ ಮೋಟರ್ ಸೈಕಲ್ ಗಳು ಪೆಟ್ರೋಲ್ ಬೈಕ್ಗಳಿಗಿಂತ ಬೆಸ್ಟ್ ಆಯ್ಕೆ ಎಂದರೆ ತಪ್ಪಾಗಲಾರದು. CNG ಗ್ಯಾಸ್ ಪೆಟ್ರೋಲ್ಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ಜೊತೆಗೆ ಇದ್ರಲ್ಲಿ‌‌ UPS ಅಳವಡಿಕೆಯಿರುವ ಕಾರಣದಿಂದ ಪೆಟ್ರೋಲ್ ಇಂಧನಕ್ಕೆ (Petrol Fuel) ಹೋಲಿಸಿದರೆ ಅದ್ಭುತ ಮೈಲೇಜ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸಿಎನ್‌ಜಿ ಮೋಟರ್ ಸೈಕಲ್ನ ವೈಶಿಷ್ಟ್ಯತೆಗಳು:

 

Image Source: Autocar India

 

advertisement

ಪ್ರತಿ ಲೀಟರ್ ಪೆಟ್ರೋಲ್ ಗೆ 80 ಕಿಲೋಮೀಟರ್ ಮೈಲೇಜ್ ನೀಡುವಂತಹ ಅದ್ಭುತ ಬಜಾಜ್ ಪ್ಲಾಟಿನ ಹಾಗೂ CT ಬೈಕ್ (Bajaj Platina and CT Bike) ಗಳನ್ನು ಮಾರುಕಟ್ಟೆಗೆ ತಂದಿರುವಂತಹ ಬಜಾಜ್ ಆಟೋ ಕಂಪನಿ ಇದೀಗ ಅದಕ್ಕಿಂತ ಹೆಚ್ಚು ಮೈಲೇಜ್ ನೀಡುವ CNG ಮೋಟಾರ್ ಸೈಕಲನ್ನು (CNG Bike) ಜೂನ್ ತಿಂಗಳಿನಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಈಗಾಗಲೇ ಬೈಕಿನ ತಯಾರಿ ಕೆಲಸಗಳೆಲ್ಲ ಬಹುತೇಕ ಮುಗಿದು ಟೆಸ್ಟ್ ಡ್ರೈವಿಂಗ್ ಕಾರ್ಯವನ್ನು ನಡೆಸುತ್ತಿರುವ ಅಧಿಕೃತ ಸುದ್ದಿಯನ್ನು ಬಜಾಜ್ ಹೊರ ಹಾಕಿದೆ.

ಬಜಾಜ್ ಆಟೋ ಕಂಪನಿಯು, ಹೆಚ್ಚಾದ ಪರಿಸರ ಮಾಲಿನ್ಯದ ಕುರಿತು ಕಾಳಜಿ ವಹಿಸಿ ಜೈವಿಕ ಇಂಧನವನ್ನು ಉಪಯೋಗಿ ಸಿ ಎನ್ ಜಿ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರೊಂದಿಗೆ ಬೈಕ್ನಲ್ಲಿ CNG ಅಥವಾ ಪೆಟ್ರೋಲ್ ಡಿ ಆಕ್ಟಿವೇಟ್ ಸ್ವಿಚ್ (Deactivate Switch) ಕೂಡ ಇದ್ದು, ಇದರಿಂದಾಗಿ CNG ಇಂಧನ ನಿಮಗೆ ದೊರಕದೇ ಹೋದರೆ ಪೆಟ್ರೋಲ್ ಇಂಧನವನ್ನು ಉಪಯೋಗಿಸಬಹುದಾದ ಸೌಲಭ್ಯವು ಇದೆ. ಸೀಟಿನ ಕೆಳಗೆ CNG ಟ್ಯಾಂಕ್ ಹಾಗೂ ಪೆಟ್ರೋಲ್ ಟ್ಯಾಂಕ್ ಅನ್ನು ತನ್ನ ಸಾಮಾನ್ಯದ ಸ್ಥಳದಲ್ಲೇ ಅಳವಡಿಸಲಾಗಿದೆ.

ಕಡಿಮೆ ಬೆಲೆಗೆ ಅದ್ಭುತ ಮೈಲೇಜ್:

 

Image Source: Samayam Tamil

ಶಕ್ತಿಯುತ ಮೈಲೇಜ್ ಸಾಮರ್ಥ್ಯದಡಿಯಲ್ಲಿ ತಯಾರಾಗುತ್ತಿರುವಂತಹ Bajaj CNG Bike ಪ್ರತಿ ಕೆಜಿ‌ CNGಗೆ ಬರೋಬ್ಬರಿ 100 ರಿಂದ 120 kmನಷ್ಟು ಕೆಪಾಸಿಟಿಯನ್ನು ಹೊಂದಿದ್ದು, ಇದರ ಅದ್ಭುತ ಮೈಲೇಜ್ ಸಾಮರ್ಥ್ಯಕ್ಕೆ ಗ್ರಾಹಕರು ಮನಸ್ಸೋತು ಹೋಗಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ, ಕೇವಲ 80,000 ಶೋರೂಮ್ ಬೆಲೆಯಲ್ಲಿ‌ ಈ ಸಿಎನ್‌ಜಿ ಮೋಟರ್ ಸೈಕಲನ್ನು ಖರೀದಿಸಬಹುದು.

1 ಲಕ್ಷಕ್ಕೂ ಹೆಚ್ಚಿನ ಬೈಕ್ ಉತ್ಪಾದನೆ:

ಅತ್ಯಾಕಾಶಕ ಕೊಡುಗೆ ಹಾಗೂ ವಿನ್ಯಾಸದಲ್ಲಿ ಬಜಾಜ್ ಕಂಪನಿ ಬೈಕನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಇದ್ದು, ಈವರೆಗೆ ಬರೋಬ್ಬರಿ ಒಂದು ಪಾಯಿಂಟ್ 20 ಲಕ್ಷ ಬೈಕ್ ಗಳನ್ನು ಒಂದು ವರ್ಷದಲ್ಲಿ ತಯಾರು ಮಾಡಲಾಗಿದೆ. ಇದರ ಬೇಡಿಕೆ ಮತ್ತಷ್ಟು ಹೆಚ್ಚಾದರೆ ಎರಡು ಲಕ್ಷಕ್ಕೂ ಅಧಿಕ ಬೈಕ್ ಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುವುದು‌. ಸಿಎನ್‌ಜಿ ಮೋಟಾರ್ ಸೈಕಲ್ನ ತಯಾರಿಕೆಯೂ ಅನುರಾಗಬಾದ್ನಲ್ಲಿ ಇರುವಂತಹ ಪ್ಲಾಂಟ್ನಲ್ಲಿ ಮಾಡಲಾಗುತ್ತಿದ್ದು ಈ ಬೈಕ್ ಯಶಸ್ವಿಯಾಗಿ ಗ್ರಾಹಕರನ್ನು ಸೆಳೆದರೆ ಇತರೆ ಬೈಕ್ ಮೋಟರ್ ಸೈಕಲ್ ತಯಾರಿಕಾ ಕಂಪನಿಗಳು ಕೂಡ CNG ಬೈಕ್ಗಳ ಮೊರೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.