Karnataka Times
Trending Stories, Viral News, Gossips & Everything in Kannada

Jio Scooter: ಬಡವರಿಗಾಗಿ ಬರುತ್ತಿದೆಯಾ ಅಂಬಾನಿಯ ಎಲೆಕ್ಟ್ರಿಕ್ ಸ್ಕೂಟರ್? ಕೊನೆಗೂ ಸಿಗ್ತು ಸ್ಪಷ್ಟನೆ

advertisement

Jio Electric Scooter:  ಲಾಂಚ್ ಆಗುವ ಬಗ್ಗೆ ಮೊದಲಿಗೆ ಸುದ್ದಿ ಹೊರಬಂದಿದ್ದು ಒಂದು ಯೂಟ್ಯೂಬ್ ಚಾನೆಲ್ ಮೂಲಕ. ಆ ಯುಟ್ಯೂಬ್ ಚಾನೆಲ್ನಲ್ಲಿ ಹೇಳಿರುವ ಪ್ರಕಾರ ಅತಿ ಶೀಘ್ರದಲ್ಲಿಯೇ ಜಿಯೋ ಸಂಸ್ಥೆಯಿಂದ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ ಎಂಬುದಾಗಿ ಹೇಳಲಾಗಿತ್ತು ಹಾಗೂ ಈ ವಿಡಿಯೋ ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿತ್ತು.

Jio Electric Scooter ನಲ್ಲಿ ಈ ಸುದ್ದಿಯ ಪ್ರಕಾರ ಪವರ್ಫುಲ್ ಬ್ಯಾಟರಿ ಹಾಗೂ ಇನ್ನಿತರ ಅಡ್ವಾನ್ಸ್ ಫೀಚರ್ಗಳನ್ನು ಕೂಡ ಅಳವಡಿಸಲಾಗುತ್ತದೆ ಎಂಬುದಾಗಿ ಹೇಳಲಾಗಿತ್ತು. ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ 420 km ಗಳ ಸಿಂಗಲ್ ಚಾರ್ಜ್ ರೇಂಜ್ ಅನ್ನು ಕೂಡ ಇದು ನೀಡುತ್ತದೆ ಹಾಗೂ ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿ ಎಂದು ಹೇಳಲಾಗಿತ್ತು.

What is the price of Jio electric scooter
Image Source: India TV

Jio Electric Scooter ನ ವಿಶೇಷತೆಗಳು ಹಾಗೂ ಬೆಲೆ

advertisement

ಜಿಯೋ ಸಂಸ್ಥೆಯಿಂದ Jio Electric Scooter ಬಗ್ಗೆ ಯಾವುದೇ ರೀತಿಯ ಮಾಹಿತಿಗಳನ್ನು ಅಧಿಕೃತವಾಗಿ ನೀಡಲಾಗಿಲ್ಲ ಆದರೆ ಈ ಯುಟ್ಯೂಬ್ ಚಾನೆಲ್ ಮೂಲಕ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ಲಾಂಗ್ ರೇಂಜ್ ನೀಡುವುದು ಮಾತ್ರವಲ್ಲದೆ 90 ಕಿಲೋಮೀಟರ್ಗಳ ಸ್ಪೀಡ್ ಅನ್ನು ಕೂಡ ನೀಡುತ್ತೆ ಅನ್ನೋದಾಗಿ ಹೇಳಲಾಗಿದೆ. ಸಾಕಷ್ಟು ಉತ್ತಮ ಪರ್ಫಾರ್ಮೆನ್ಸ್ ಅನ್ನು ಕೂಡ ಇದು ನೀಡಲಿದೆ ಎಂಬುದಾಗಿ ಹೇಳಲಾಗಿದೆ.

ವಿಶೇಷ ಎನ್ನುವ ರೀತಿಯಲ್ಲಿ ಈ Youtube ಚಾನೆಲ್ ನ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಇದರ ಭಾರತೀಯ ಮಾರುಕಟ್ಟೆಯ ಮೌಲ್ಯ ಕೂಡ ಅತ್ಯಂತ ಕಡಿಮೆ ಇರಲಿದೆ. ಹೌದು ಅವರು ಹೇಳಿರುವ ಪ್ರಕಾರ ಇದು 35,000 ರೂಪಾಯಿಗಳ ಆಸು ಪಾಸಿನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆಯಂತೆ.

What is the price of Jio electric scooter
Image Source: India TV

ನಿಜ ಏನಿರಬಹುದು?

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ಗಳು ವೀವ್ಸ್ ಪಡೆದುಕೊಳ್ಳುವುದಕ್ಕಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೇ ಕಾರಣಕ್ಕಾಗಿ ಒಂದರ್ಥದಲ್ಲಿ ಇದು ಸುಳ್ಳು ಸುದ್ದಿ ಎಂದು ಹೇಳಬಹುದಾಗಿದೆ ಯಾಕೆಂದರೆ ಯಾವ ಎಲೆಕ್ಟ್ರಿಕ್ ಸ್ಕೂಟರ್ ಕೂಡ 35,000ಗಳ ಕಡಿಮೆ ಬೆಲೆಯಲ್ಲಿ ಸಿಗೋದು ಅನುಮಾನವೇ ಸರಿ ಎಂದು ಹೇಳಬಹುದು. ಹೀಗಾಗಿ ಇದು ಸತ್ಯಕ್ಕೆ ದೂರವಾದ ಸುದ್ದಿ ಅಂದ್ರು ಕೂಡ ತಪ್ಪಾಗಲ್ಲ.

advertisement

Leave A Reply

Your email address will not be published.