Karnataka Times
Trending Stories, Viral News, Gossips & Everything in Kannada

Karnataka: ಎಷ್ಟೇ ಸಣ್ಣ ಜಮೀನಿದ್ದವರೂ ಕೂಡ ಈ ಕೆಲಸ ಮಾಡಲೇಬೇಕು! ಸರ್ಕಾರದ ನೇರ ಆದೇಶ

advertisement

Land records to be linked with Aadhaar: ಇಂದು ಎಲ್ಲ ಕೆಲಸಗಳಿಗೂ ಆಧಾರ್ ಕಾರ್ಡ್ ಎನ್ನುವುದು ಕಡ್ಡಾಯವಾಗಿದ್ದು ಸರಕಾರದ ಯಾವುದೇ ಸೌಲಭ್ಯ ಪಡೆಯುದಾದ್ರೂ ಈ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು. ಅದೇ ರೀತಿ ಇಂದು ರೇಷನ್ ಕಾರ್ಡ್(Ration Card) , ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಇತ್ಯಾದಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಬೇಕು‌. ಈ ಒಂದು ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇತ್ಯಾದಿ ಎಲ್ಲವು ಅಗತ್ಯ ವಾಗಿ ಇರಲಿದ್ದು ಎಲ್ಲ ಸೌಲಭ್ಯ ಪಡೆಯಲು ಮುಖ್ಯ ವೆನಿಸಿದೆ.

ಜಮೀನಿಗೂ ಆಧಾರ್ ಲಿಂಕ್ ಬೇಕು
ಇದೀಗ ರಾಜ್ಯ ಸರ್ಕಾರವು ಜಮೀನು ಹೊಂದಿರುವವರು ಜಮೀನಿನ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.ಇಂದು ಆಸ್ತಿ ವಿಚಾರವಾಗಿ ಮೋಸದ ವಹಿವಾಟು ಹೆಚ್ಚಾಗಿದ್ದು ಹಾಗಾಗಿ‌ ಈ ನಿಯಮವನ್ನು ಕಡ್ಡಾಯ ಮಾಡಲಾಗಿದೆ.ಒಂದು ವೇಳೆ ನೀವು ಜಮೀನು ದಾಖಲೆಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲ ಎಂದಾದರೆ ನಿಮಗೆ ಸರಕಾರದ ಸೌಲಭ್ಯ ಗಳು ಸಿಗದೇ ಇರಬಹುದು.

How do I link my land with Aadhar card?How can I link my Aadhar card with Patta?
How can I link my Aadhar card with land records in AP?
Can we get property details from Aadhaar number?
Image Source: Moneycontrol

ಇದಕ್ಕಾಗಿ ಈ ನಿಯಮ
ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಕಾನೂನುಗಳಿದ್ದು ಆ ಕಾನೂನುಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ ಅದನ್ನ ತಪ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಜಮೀನಿನ ಪಹಣಿಗೆ(RTC)  ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸುವುದರಿಂದ ಭೂ ವಂಚನೆಗಳಿಂದ ತಪ್ಪಿಸಬಹುದು. ಅಲ್ಲದೆ ಎಲ್ಲ ರೀತಿಯ ಅಕ್ರಮಗಳಿಗೂ ಕಡಿವಾಣ ಹಾಕಬಹುದಾಗಿದೆ.

advertisement

ಈ ದಾಖಲೆಗಳು ಬೇಕು
ಪಹಣಿಗೆ ಆಧಾರ್ ಲಿಂಕ್ ಮಾಡಿಸಲು‌ ಕೆಲವೊಂದು ದಾಖಲೆಗಳು ಕಡ್ಡಾಯ ವಾಗಿದ್ದು ನಿಮ್ಮ ಜಮೀನಿನ ಪಹಣಿ ಪತ್ರ,ನಿಮ್ಮ ಆಧಾರ್ ಕಾರ್ಡ್,ನಿಮ್ಮ ಫೋನ್ ನಂಬರ್, ಪಾಸ್ ಪೋರ್ಟ್ ಸೈಜ್ ಪೋಟೋ ಇತ್ಯಾದಿ ದಾಖಲೆಗಳು ಅಗತ್ಯವಾಗಿ ಬೇಕು.

ಹೀಗೆ ಲಿಂಕ್ ಮಾಡಿ
ಮೊದಲಿಗೆ ನೀವು ಆಧಾರ್ ಲಿಂಕ್ ಮಾಡಲು https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ಸಿಟಿಜನ್ ರಿಜಿಸ್ಟ್ರೇಷನ್(Citizen Registration)ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ತದ ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನೊಂದಣಿ ಮಾಡುವ ಮೂಲಕ ನಿಮ್ಮ‌ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸಿ.

How do I link my land with Aadhar card?How can I link my Aadhar card with Patta?
How can I link my Aadhar card with land records in AP?
Can we get property details from Aadhaar number?
Image Source: Moneycontrol

ಬಳಿಕ ನಿಮ್ಮ‌ ಮೊಬೈಲ್ ಸಂಖ್ಯೆ ಗೆ OTP ಬರಲಿದ್ದು ಒಟಿಪಿ ಯನ್ನು ನಮೂದಿಸಿ ಲಾಗಿನ್ ಆದರೆ ನಿಮ್ಮ ‌ ಪಹಣಿ ಆಧಾರ್ ಗೆ ಲಿಂಕ್ ಆಗಿದೆ ಎಂದು ಅರ್ಥ.ಅದೇ ರೀತಿ ರೈತರು ತಮ್ಮ ಪಹಣಿ ಹಾಗೂ ಆಧಾರ್ ದಾಖಲೆಯನ್ನು ಲಿಂಕ್ ಮಾಡಲು ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕ ಮಾಡುವ ಮೂಲಕ ಲಿಂಕ್ ಮಾಡಬಹುದಾಗಿದೆ.

advertisement

Leave A Reply

Your email address will not be published.