Karnataka Times
Trending Stories, Viral News, Gossips & Everything in Kannada

Bajaj CNG Bike: ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಬಜಾಜ್ ಕಂಪನಿಯ‌ CNG ಬೈಕ್‌! ಬೆಲೆ ಕೇಳಿದ್ರೆ ಖುಷಿಯಾಗ್ತೀರಾ

advertisement

ಇಂದು ಬೈಕ್, ಸ್ಕೂಟಿ ಖರೀದಿ ಮಾಡುವ ಬಗ್ಗೆ ಯುವಕರಿಗೆ‌ ಕ್ರೇಜ್ ಹೆಚ್ಚು. ಅದರಲ್ಲಿಯು ದಿನ ನಿತ್ಯದ ಸಂಚಾರಕ್ಕೆ ಕಾರುಗಿಂತ ಬೈಕ್ ಬೆಸ್ಟ್ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಮಾರುಕಟ್ಟೆ ಗೆ ಹೊಸ ಮಾಡೆಲ್ ನ ಬೈಕ್ ಬಂತು, ಪೀಚರ್ಸ್ ಉತ್ತಮವಾಗಿದೆ‌ ಅಂದಾಗ ಯುವಕರು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ. ಇಂದು‌  ಸಿಎನ್‌ಜಿ ವಾಹನಗಳಿಗೂ ಬೇಡಿಕೆ ಬಹಳಷ್ಟು ಹೆಚ್ಚು ಇದೆ. ಇಂದು ಹೆಚ್ಚಿನ ವಾಹನ ಪ್ರಿಯರು ಸಿಎನ್ ಜಿ ಕಾರುಗಳನ್ನೇ ಖರೀದಿ ಮಾಡುತ್ತಾರೆ. ಇದರಿಂದ ಪೆಟ್ರೋಲ್, ಡಿಸೇಲ್ ಬೆಲೆಯು ಉಳಿಕೆಯಾಗುತ್ತೆ ಎಂದು ಸಿ ಎನ್ ಜಿ ವಾಹನಗಳ ಆಯ್ಕೆ ಯತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಇದರ ಬಳಕೆ ವಿರಳ ಎನ್ನಬಹುದು.

ಬಜಾಜ್ ಕಂಪನಿಯಿಂದ ಸಿಎನ್ ಜಿ ಬೈಕ್ ಆಯ್ಕೆ:

 

Image Source: PUNE NEWS

 

ಇಂದು ಕಾರುಗಳಲ್ಲಿ ಎಲೆಕ್ಟ್ರಿಕ್ ಪವರ್‌ ಟ್ರೇನ್ ಆಯ್ಕೆಗಳು ಬಹಳಷ್ಟು ಇದೆ. ಆದರೆ, ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದಾಗ ಬೈಕ್ ನ CNG ಆಯ್ಕೆ ಕಡಿಮೆ. ಇದೀಗ ಬಜಾಜ್ ಕಂಪನಿಯು ಶೀಘ್ರದಲ್ಲೇ ಮೊದಲ CNG ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ Bajaj CNG Bike ಗುಣಮಟ್ಟದ ಬಗ್ಗೆ ಸದ್ಯಕ್ಕೆ ಪರೀಕ್ಷೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

advertisement

ಹೇಗಿದೆ ಪೀಚರ್ಸ್:

  • ಈ ಬೈಕ್ ನೂತನ ವಿನ್ಯಾಸ ದೊಂದಿಗೆ ರೈಡ್ ಮಾಡಲು ಉತ್ತಮ ಅನುಭವ ನೀಡಲಿದೆ.
  • ಬಜಾಜ್‌ನ ಈ ಸಿಎನ್‌ಜಿ ಬೈಕ್‌ ಹೈಬ್ರಿಡ್ ಆಗಿರಲಿದ್ದು ಅವು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಚಲಿಸಬಹುದು ಎನ್ನಲಾಗಿದೆ. ಹೌದು ಬಜಾಜ್ ಬಿಡುಗಡೆ ಮಾಡುವ ಸಿಎನ್ ಜಿ ಬೈಕ್ ದ್ವಿ-ಇಂಧನ ಸೆಟಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ.
  • ಈ CNG ಬೈಕ್‌ನಲ್ಲಿ 1.2 ಕೆಜಿ CNG ಸಿಲಿಂಡರ್ ಅನ್ನು ಬಳಕೆ ಮಾಡಬಹುದಾಗಿದ್ದು, ಈ ಬೈಕ್ 120 ಕಿಮೀ ಮೈಲೇಜ್ ನೀಡುವ ನಿರೀಕ್ಷೆಯು ಇದೆ ಎನ್ನಲಾಗಿದೆ.
  • ಈ ಬೈಕ್ ನಲ್ಲಿ ಸಾಕಷ್ಟು ನವೀಕರಣಗಳು ಇರಲಿದೆ ಎನ್ನುವ ವಿಚಾರ ವೈರಲ್ ಆಗುತ್ತಿದೆ.
  • ಅದೇ ರೀತಿ ಈ ಬೈಕ್ ದುಬಾರಿ ಪೆಟ್ರೋಲ್‌ಗೆ ಅಗ್ಗದ ಪರ್ಯಾಯವಾಗಿದ್ದು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ವಿಚಾರದಲ್ಲೂ ಹೆಗ್ಗಳಿಕೆ ಯನ್ನು‌ಪಡೆಯಲಿದೆ.
  • ಇದರಲ್ಲಿ ಸಿಎನ್‌ಜಿ ಮೋಟಾರ್‌ ಬೈಕ್ ಫ್ಯುಯೆಲ್ ಟ್ಯಾಂಕ್ ವಿನ್ಯಾಸ ವಿಭಿನ್ನ ಇರಲಿದ್ದು ಹೆಚ್ಚಿನ ಮೈಲೇಜ್ ಕೂಡ ನೀಡಲಿದೆ.

ಬೆಲೆ ಎಷ್ಟು?

ಈ ಬೈಕ್ ವಿಭಿನ್ನ ನವೀಕರಣ ಗಳೊಂದಿಗೆ ಮಾರುಕಟ್ಟೆ ಗೆ ಬರಲಿದ್ದು ಬೆಲೆಯು ಕೂಡ ಕಡಿಮೆ ಇರಲಿದೆ ಎನ್ನಲಾಗಿದೆ.ಈ ಬಜಾಜ್ CNG ಬೈಕ್ ಅನ್ನು ಸುಮಾರು 80,000 ರಿಂದ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆ ಯಲ್ಲಿ ಮಾರಾಟ ಮಾಡಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಈ ಬೈಕ್ ಬಗ್ಗೆ ಯುವಕರಲ್ಲಂತೂ ಕ್ರೇಜ್ ಹೆಚ್ಚಾಗಿದೆ ಎನ್ನಬಹುದು.

advertisement

Leave A Reply

Your email address will not be published.