Karnataka Times
Trending Stories, Viral News, Gossips & Everything in Kannada

Chicken Meat Price: ಚಿಕನ್ ಪ್ರಿಯರಿಗೆ ಕಹಿ ಸುದ್ದಿ, ಹೆಚ್ಚಿದ ಕೋಳಿ ಮಾಂಸ ದರ

advertisement

ಇಂದು ವೆಜ್ ಗಿಂತ ನಾನ್ ವೆಜ್ (Non Veg) ಪ್ರಿಯರು ಹೆಚ್ಚು ಇದ್ದಾರೆ.‌ ಅದರಲ್ಲೂ ಮಾಂಸ ಪ್ರೀಯರಿಗೆ ನಾನ್ ವೆಜ್ ಇಲ್ಲದೆ ಊಟವೇ ಸೇರೋದಿಲ್ಲ, ಹಾಗಾಗಿ ಬೇಸಿಗೆಯಲ್ಲಿ ಧಗೆ ಹೆಚ್ಚಿದ್ದರೂ, ಆರೋಗ್ಯಕ್ಕೆ ಮಾಂಸ ಹಾರ ಒಳ್ಳೆಯದಲ್ಲ ಎಂದು ಇದ್ದರೂ ನಾನ್ ವೆಜ್ ಮಾತ್ರ ಬಿಡಲ್ಲ ಅನ್ನೋರು ತುಂಬಾ ಮಂದಿ ಇದ್ದಾರೆ. ಅದರಲ್ಲೂ ಇನ್ನೇನೂ ಮದುವೆ ಸಮಾರಂಭ ಗಳು ಹೆಚ್ಚಾಗಿ ನಡೆಯಲು ಇರುವುದರಿಂದ ಮಾಂಸದ ಬೆಲೆಯಂತು ಇದೀಗ ಗಗನಕ್ಕೆ ಏರಿದೆ. ರಾಜ್ಯದ ಎಲ್ಲ ಮಾರುಕಟ್ಟೆ ಯಲ್ಲಿಯು ಕೋಳಿ ಮಾಂಸದ ಬೆಲೆ ಬಹಳಷ್ಟು ಏರಿಕೆ ಯಾಗಿದೆ.

ಯಾಕಾಗಿ ಬೆಲೆ ಏರಿಕೆ?

 

Image Source: Dajiworld

 

ಬಿಸಿಲಿನ ಪರಿಣಾಮ, ಮಳೆ ಇಲ್ಲದ ಕಾರಣ ಕೋಳಿಯ ಆಹಾರಗಳಿಗೆ ಬಳಸುವ ಸೋಯಾ, ದವಸ ಧಾನ್ಯಗಳು ಮೊದಲಾದ ಬೆಳೆಗಳ ಪ್ರಮಾಣ ಕಡಿಮೆಯಾಗಿ ಕೋಳಿ ಮಾಂಸದ ದರ ಏರಿಕೆಯಾಗುತ್ತಲೆ ಇದೆ. ಕೋಳಿ ಮಾಂಸ (Chicken Meat) ಉತ್ಪಾದನೆ ಬಹಳಷ್ಟು ವಿಳಂಬವಾಗುತ್ತಿದೆ. ಇತರ ರಾಜ್ಯಗಳಲ್ಲೂ ಕೂಡ ಕೋಳಿ ಉತ್ಪಾದನೆ ಕಡಿಮೆಯಾಗಿದೆ. ಇನ್ನು ಬೇಸಿಗೆಯಲ್ಲಿ ಕೋಳಿಗಳು ಆಹಾರ ಸೇವಿಸದೇ ಹೆಚ್ಚು ನೀರು ಕುಡಿಯುವುದ್ದರಿಂದ ತೂಕ ಕೂಡ ಕಡಿಮೆ ಬರಲಿದ್ದು ಇದು ಕೂಡ ಒಂದು ಕಾರಣವಾಗಿ ಬಿಟ್ಟಿದೆ.

ಎಷ್ಟಾಗಿದೆ ಬೆಲೆ?

 

advertisement

Image Source: Business Recorder

 

ಇಂದು ಒಂದು ಕೆಜಿ ಚಿಕನ್ ಮಾಂಸದ ದರ (1 Kg Chicken Meat Price) ರಾಜ್ಯದ ಮಾರುಕಟ್ಟೆಯಲ್ಲಿ ರೂ 300 ಆಗಿದೆ. ಸಾಮಾನ್ಯವಾಗಿ ಕೋಳಿಗೆ 110ರೂ.ರಿಂದ 120 ರೂ.ವರಗೆ ಇರುತ್ತಿತ್ತು. ಇಂದು ಫಾರಂ ಕೋಳಿ ಬೆಲೆಯೇ ಅಧಿಕವಾಗಿದ್ದು ಹೆಚ್ಚಿನ‌ ಬೇಡಿಕೆ ಯುಳ್ಳ ನಾಟಿಕೋಳಿ,ಟೈಸನ್ ಕೋಳಿ ಬೆಲೆಯಂತು ಮತ್ತಷ್ಟು ದುಪ್ಪಟ್ಟು ಆಗಿದೆ.

ಕೋಳಿ ಉತ್ಪಾದನೆ ಕಡಿಮೆ:

ಇಂದು ಬೇಡಿಕೆಗೆ ಅನುಗುಣವಾಗಿರುವ ಕೋಳಿ‌ ಮರಿಗಳು ಸಿಗುತ್ತಿಲ್ಲ ಅಲ್ಲದೆ ಮರಿಗಳ ದರದಲ್ಲೂ ಬೆಲೆ ಹೆಚ್ಚಳವಾಗಿದೆ. ಅದೇ ರೀತಿ ಮೊಟ್ಟೆ ಬೆಲೆಯೂ ಏರಿಕೆಯಾಗಿದ್ದು ಸಾಮನ್ಯವಾಗಿ 5 ರೂಪಾಯಿ ಇದ್ದ ಒಂದು ಮೊಟ್ಟೆ ಬೆಲೆ ಈಗ 6.5 ರೂಪಾಯಿಗೆ ಏರಿಕೆಯಾಗಿದೆ.

ಇನ್ನು ಸಾಮಾನ್ಯವಾಗಿ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುತ್ತದೆ.ಇನ್ನು ಹಬ್ಬ, ಮದುವೆ ಮತ್ತಿತರ ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಾಗಿಯೇ ಇರುತ್ತದೆ.ಈ ಸಮಯದಲ್ಲೂ ಕೋಳಿ ಮಾಂಸಕ್ಕೆ ಬೆಲೆ (Chicken Meat Price) ಏರಿಕೆ ಕಂಡು ಮಾಂಸ ಪ್ರಿಯರಂತು ಶಾಕ್ ಆಗಿದ್ದಾರೆ.

advertisement

Leave A Reply

Your email address will not be published.