Karnataka Times
Trending Stories, Viral News, Gossips & Everything in Kannada

Property Tax: ಸ್ವಂತ ಮನೆ ಜಮೀನು ಇರುವವರಿಗೆ ಕರ್ನಾಟಕದಲ್ಲಿ ಹೊಸ ರೂಲ್ಸ್! ತಕ್ಷಣ ತಿಳಿದುಕೊಳ್ಳಿ

advertisement

ತೆರಿಗೆ ಕಟ್ಟುವುದು ಈ ದೇಶದ ಪ್ರತಿಯೊಬ್ಬ ನಾಗರೀಕನ ಮುಲಭೂತ ಕರ್ತವ್ಯವಾಗಿದೆ. ಕಾಲಕ್ಕೆ ತಕ್ಕಂತೆ ತೆರಿಗೆ ನಿಯಮ ಕೂಡ ಆಗಾಗ ಬದಲಾಗುತ್ತಿದ್ದು ರಾಜ್ಯದಲ್ಲಿ BBMP ವ್ಯಾಪ್ತಿಯಲ್ಲಿ ಹೊಸ ತೆರಿಗೆ ಪದ್ಧತಿ ಅನುಸರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಇನ್ನು ಮುಂದೆ ಈ ನಿಯಮವು ಕರ್ನಾಟಕದಲ್ಲಿ ಇರಲಿದ್ದು ಆಸ್ತಿ ತೆರಿಗೆ (Property Tax) ಪದ್ಧತಿ ಅನುಕರಣೆ ಮಾಡುವವರು ಈ ವಿಚಾರ ಪೂರ್ತಿ ಓದಲೇಬೇಕು.

ಯಾವುದು ಈ ಹೊಸ ನಿಯಮ:

 

Image Source: Hindustan Times

 

ರಾಜ್ಯದಲ್ಲಿ ನಂಬಿಕೆ ರಕ್ಷಾ ಯೋಜನೆ ಎಂಬ ಹೊಸತಾದ ತೆರಿಗೆ ಪದ್ಧತಿ ಅನುಕರಣೆ ಬಗ್ಗೆ ಮಾಹಿತಿ ನೀಡಲಾಗಿದೆ. ಅಂದರೆ ತೆರಿಗೆ ಮೊತ್ತ ಇರಲಿದ್ದು ಮನೆ ಕಟ್ಟುವವರಿಗೆ ನಂಬಿಕೆ ರಕ್ಷೆ ಯೋಜನೆಯಡಿಯಲ್ಲಿ ಕೆಲವು ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಮಾಹಿತಿ ಹಂಚಿಕೊಂಡಿದ್ದರು. ಅದಾದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ಈ ಒಂದು ನಂಬಿಕೆ ರಕ್ಷೆ ಯೋಜನೆ ಅಡಿಯಲ್ಲಿ ಸಿಗುವ ಸೇವ ಸೌಕರ್ಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ.

ಬಹಳ ಸಹಕಾರಿ:

 

advertisement

Image Source: YouTube

 

ನೂತನವಾಗಿ ಮನೆ ನಿರ್ಮಾಣ ಮಾಡುವವರಿಗೆ ಈ ಒಂದು ನಂಬಿಕೆ ರಕ್ಷೆ ಯೋಜನೆ ಸಹಕಾರಿಯಾಗಲಿದೆ. ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡುವವರು 50×80 ಅಳತೆಯ ನಿರ್ಮಾಣದ ಕಟ್ಟಡ ನಕ್ಷೆ ಸ್ವಯಂಚಾಲಿತ ಗೊಳಿಸ ಲಾಗುತ್ತಿದ್ದು ನಕ್ಷೆಯ ಅನುಮೋದನೆಯಲ್ಲಿ ಕ್ರಾಂತಿಕಾರಕ ವ್ಯವಸ್ಥೆ ಇದು ಆಗಲಿದೆ ಎನ್ನಬಹುದು. ಮನೆಗಳ ನಕ್ಷೆಯನ್ನು ಮನೆ ಬಾಗಿಲಿಗೆ ತಲುಪಿಸುವ ಒಂದು ಯೋಜನೆ ಇದಾಗಿದೆ. ಇದಕ್ಕಾಗಿ ಅರ್ಜಿ ದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಇಂಜಿನಿಯರ್ ಮೂಲಕ ಅನುಮೋದನೆ ಸಿಗಲಿದೆ. ಮಾರ್ಚ್ 22 ರಂದು ನಂಬಿಕೆ ರಕ್ಷೆ ಯೋಜನೆ ಉದ್ಘಾಟನೆ ನಡೆದಿದ್ದು ಮೊದಲಿಗೆ ಬೆಂಗಳೂರಿನ ರಾಜರಾಜೇಶ್ವರಿ, ದಾಸರ ಹಳ್ಳಿಯಲ್ಲಿ ಜಾರಿಗೆ ಬರಲಿದ್ದು ಮುಂದಿನ ದಿನದಲ್ಲಿ ಸೇವೆ ವಿಸ್ತರಣೆ ಆಗಲಿದೆ.

ಸಮಯ ಉಳಿತಾಯ:

ಆನ್ಲೈನ್ ಮೂಲಕ ಕಟ್ಟಡದ ನಕ್ಷೆ ದೊರೆಯುವ ಕಾರಣ ಹೊಸ ಕಟ್ಟಡ ಅಥವಾ ಮನೆ ಕಟ್ಟುವವರಿಗೆ ಕಚೇರಿ ಅಲೆಯುವ ಅಗತ್ಯ ಬರಲ್ಲ. ಆಸ್ತಿ ತೆರಿಗೆ (Property Tax) ಸಲ್ಲಿಕೆಗೆ ಆನ್ಲೈನ್ ಮೂಲಕ ದಾಖಲೆ ಕಳಿಸಿದರೆ ಶುಲ್ಕವನ್ನು ಕೂಡ ಆನ್ಲೈನ್ ಮೂಲಕವೆ ಪಾವತಿ ಮಾಡಬಹುದಾಗಿದೆ. ಇದರಲ್ಲಿ ಇಂಜಿನಿಯರ್ ಗಳು ನಿರ್ಮಾಣ ಯೋಜನೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಬಳಿಕ ನಕ್ಷೆಯನ್ನು ಅರ್ಜಿ ದಾರರ ಮನೆ ಬಾಗಿಲಿಗೆ ತಲುಪಿಸುವಂತೆ ಮಾಡಲಿದ್ದಾರೆ. 2008ರಲ್ಲಿ ಜಾರಿಗೆ ಬಂದ ಆಸ್ತಿ ತೆರಿಗೆ ಪದ್ಧತಿಯನ್ನು ಸರಳೀಕರಣ ಗೊಳಿಸಿ ಈ ವಿಧಾನವನ್ನು ಕಂಡುಕೊಳ್ಳಲಾಗಿದೆ.

ಇಷ್ಟು ಮಾತ್ರವಲ್ಲದೆ ಸ್ವಂತ ಆಸ್ತಿ ಹೊಂದಿದ್ದವರು ಸ್ವಯಂ ಆಗಿ ತಮ್ಮ ಆಸ್ತಿ ಘೋಷಣೆ ಮಾಡಬಹುದು. ದಾಖಲೆಗಳು ಸರಿಯಾಗಿದ್ದರೆ ಆಸ್ತಿ ತೆರಿಗೆ ಸಂಖ್ಯೆ ಹಾಗೂ ಬಿಬಿಎಂಪಿ ಖಾತಾವನ್ನು ಸುಲಭವಾಗಿ ನಾಗರಿಕರಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಡಿಸಿಎಂ ಆದ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಆದೇಶ ನೀಡಿದ್ದಾರೆ.

advertisement

Leave A Reply

Your email address will not be published.