Karnataka Times
Trending Stories, Viral News, Gossips & Everything in Kannada

Property Tax: ಆಸ್ತಿ ತೆರಿಗೆ ಬಾಕಿ ಉಳಿಸಿರುವವರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್; ಶೇಕಡ 50 ರಷ್ಟು ರಿಯಾಯಿತಿ

advertisement

ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡವರಿಗೆ ಬೆಂಗಳೂರು ಮಹಾನಗರ ಪಾಲಿಕೆ ಗುಡ್ ನ್ಯೂಸ್ ಕೊಟ್ಟಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶೇಕಡ 50 ರಷ್ಟು ತೆರಿಗೆ (Tax) ಪಾವತಿಗೆ ಪಾಲಿಕೆ ಆಫರ್ ನೀಡಿದೆ. ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ಪ್ಲ್ಯಾನ್ ಮಾಡಿದ್ದು ರಿಯಾಯಿತಿ ನೀಡಿದೆ. ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತಿಳಿಸಿದ್ದಾರೆ.

BBMP ಹೊಸ ಆಫೇರ್ ಏನು?

ಸ್ಥಳೀಯ ಪಾಲಿಕೆ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆ ಕಟ್ಟಿ, ಉಳಿದರರ್ಧ ತೆರಿಗೆ ಮನ್ನಾಕೆ ಮನವಿ ಸಲ್ಲಿಸಬೇಕು. ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ ನಂತರ ಪಾಲಿಕೆಗೆ ಅಪೀಲ್ ಸಲ್ಲಿಸಬೇಕು. ಸರ್ಕಾರ ಆಸ್ತಿ ತೆರಿಗೆ (Property Tax) ಸಂಗ್ರಹದಲ್ಲಿ ತಿದ್ದುಪಡಿ ಮಾಡಿದ್ರೆ ಅರ್ಧದಷ್ಟು ತೆರಿಗೆ ವಿನಾಯಿತಿಯಾಗುವ ಸಾಧ್ಯತೆ ಇದೆ. ಸದ್ಯ ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

 

advertisement

 

ಈ ಹಿಂದೆ ತೆರಿಗೆ ರಿಯಾಯಿತಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಸುಳಿವು ನೀಡಿದ್ದರು. ಸದ್ಯ ರಿಯಾಯಿತಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಮತ್ತೊಂದು ಮಾರ್ಗದಲ್ಲಿ ತೆರಿಗೆ ವಸೂಲಿಗೆ ಪಾಲಿಕೆ ಪ್ಲಾನ್ ಮಾಡಿದೆ. ರಿಯಾಯಿತಿ ಆಫರ್ ಕೊಟ್ಟು ಅರ್ಧದಷ್ಟಾದ್ರೂ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ. ಟಾರ್ಗೆಟ್ ರೀಚ್ ಮಾಡಲು ಹೊಸ ಅಸ್ತ್ರಕ್ಕೆ ಪಾಲಿಕೆ ಮುಂದಾಗಿದೆ.

ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪಾಲಿಕೆ ಸ್ಪೇಷಲ್ ಡ್ರೈವ್:

BBMP ವಲಯಗಳಲ್ಲಿ ಹಳೆ ಬಾಕಿ ಬಿಲ್ ಉಳಿಸಿಕೊಂಡಿದ್ದ ಸಣ್ಣ ಪುಟ್ಟ ಅಂಗಡಿಗಳಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಿತ್ತು. ನಿನ್ನೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ಪೇಷಲ್ ಡ್ರೈವ್ ನಡೆಸಿರೋ ಬಿಬಿಎಂಪಿ ಅಧಿಕಾರಿಗಳು 2016-17 ನೇ ಸಾಲಿನಿಂದ ಪಾಲಿಕೆ ತೆರಿಗೆಯನ್ನ ಸರಿ ಪ್ರಮಾಣದಲ್ಲಿ ಕಟ್ಟದೇ ಇರುವ ಹಾಗೂ ದೊಡ್ಡ ಮೊತ್ತದಲ್ಲಿ ಹಳೆ ಬಾಕಿ ಬಿಲ್ ಉಳಿಸಿಕೊಂಡ ಹಲವಾರು ಕಂಪನಿಗಳಿಗೆ ನೋಟಿಸ್ ನೀಡಿ ಬೀಗ ಹಾಕಿದೆ.

advertisement

Leave A Reply

Your email address will not be published.