Karnataka Times
Trending Stories, Viral News, Gossips & Everything in Kannada

Honda Scrambler: ರಾಯಲ್ ಎನ್ಫೀಲ್ಡ್ ಬೈಕ್ ಗೆ ಟಕ್ಕರ್ ಕೊಡಲು ಬರುತ್ತಿದೆ ಹೋಂಡಾದ ಈ ಹೊಸ ಬೈಕ್; ಬೆಲೆ ಎಷ್ಟು ಗೊತ್ತಾ?

advertisement

ನೀವು ರಾಯಲ್ ಎನ್ಫೀಲ್ಡ್ ಬೈಕ್ ನ ಅಭಿಮಾನಿ ಆಗಿದ್ದರೆ, ಇನ್ನು ಮುಂದೆ ಹೋಂಡಾ ಕ್ಕೆ ನಿಮ್ಮ ಒಲವು ಶಿಫ್ಟ್ ಆಗುವುದು ಗ್ಯಾರಂಟಿ. ಅಂತಹ ಅತ್ಯುತ್ತಮವಾಗಿರುವ ಬೈಕ್ ಅನ್ನು ಹೋಂಡಾ ಬಿಡುಗಡೆ ಮಾಡಿದೆ.

Honda Scrambler:

 

 

ಈ ಬೈಕ್ ನ ಬಗ್ಗೆ ಮಾಹಿತಿಗಳು ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರಾಂಬ್ಲರ್ (Honda Scrambler) ಬೈಕ್ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. 350 ಸಿಸಿ ಎಂಜಿನ್ ಹೊಂದಿರುವ ರೈಡರ್ ಬೈಕ್ ಇದಾಗಿದ್ದು, ಅದ್ಭುತ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲಿದೆ.

ಸ್ಕ್ರಾಂಬ್ಲರ್ ಬೈಕ್ ನ ವೈಶಿಷ್ಟ್ಯತೆ ನೋಡುವುದಾದರೆ 800 ಎಂಎಂ ಎತ್ತರದ ಸೀಟ್ ಮತ್ತು ಸಸ್ಪೆನ್ಷನ್ ಸೆಟ್ ಅಪ್ ಕೊಡಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಟ್ವಿನ್ ರಿಯಲ್ ಶಾಕ್ ಅಬ್ಸರ್ಬರ್ ಆರಾಮದಾಯಕ ಪ್ರಯಾಣವನ್ನು ಉತ್ತೇಜಿಸುತ್ತದೆ.

advertisement

Honda Scrambler Engine:

 

 

ಹೋಂಡಾದ ಸ್ಕ್ರಾಂಬ್ಲರ್ (Honda Scrambler) ರೈಡರ್ ಬೈಕ್ 348.66 ಸಿಸಿ ಎಂಜಿನ್ ಹೊಂದಿದೆ. 24 ಪಿ ಎಸ್ ಪವರ್ ಹಾಗೂ 30nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಈ ಎಂಜಿನ್ ನಲ್ಲಿ ಇದೆ. ಐದು ಸ್ಪೀಡ್ ಗೇರ್ ಬಾಕ್ಸ್, CB350 ಕಂಪೋನೆಂಟ್ ಕೂಡ ಕೊಡಲಾಗಿದೆ.

ಶಕ್ತಿಶಾಲಿ ಬೈಕ್ಗಳೊಂದಿಗೆ ಪೈಪೋಟಿ!

2025 ಕ್ಕೆ ಮಾರುಕಟ್ಟೆಗೆ ಪ್ರವೇಶಿಸಲಿರುವ ಈ ಬೈಕ್, ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 411, ಟ್ರಯಂಫ್ ಸ್ಕ್ರ್ಯಾಂಬ್ಲರ್ 400x ಗೆ ನೇರವಾಗಿ ಸ್ಪರ್ಧೆ ನೀಡಲಿದೆ. ಈ ಬೈಕ್ ನಾ ಬಿಡುಗಡೆ ದಿನಾಂಕವನ್ನು ಕಂಪನಿ ಇದುವರೆಗೆ ಘೋಷಿಸಿಲ್ಲ. ಆದರೆ 2025 ರಲ್ಲಿ ಮಾರುಕಟ್ಟೆಗೆ ಹೋಂಡಾದ ಹೊಸ ರೈಡರ್ ಬೈಕ್ ಲಗ್ಗೆ ಇಡಲಿದೆ. ಇನ್ನು ಇದರ ಎಕ್ಸ್ ಶೋರೂಮ್ ಬೆಲೆ 2.50 ಲಕ್ಷ ರೂಪಾಯಿಗಳಿಂದ ಆರಂಭವಾಗಬಹುದು ಎಂದು ಊಹಿಸಲಾಗಿದೆ.

advertisement

Leave A Reply

Your email address will not be published.