Karnataka Times
Trending Stories, Viral News, Gossips & Everything in Kannada

Loan: ದಾಖಲೆ ಇಲ್ಲದೆ ಇನ್ನೊಬ್ಬರಿಗೆ ಸಾಲ ಕೊಟ್ಟಿದ್ದೀರಾ? ಇಲ್ಲಿದೆ ಹೊಸ ಅಪ್ಡೇಟ್

advertisement

ಹಣ ಪ್ರತಿಯೊಬ್ಬರ ಜೀವನಕ್ಕೂ ಬಹಳ ಅವಶ್ಯಕವಾಗಿದೆ ಎಂದು ಹೇಳಬಹುದು. ಹಣ ಕೊಟ್ಟರೆ ಇಡೀ ದುನಿಯಾನೇ ನಮ್ಮ ಅಂಗೈನಲ್ಲಿ ಇರುತ್ತದೆ ಎಂಬ ಮಾತು ಕೂಡ ಇದೆ. ಹಣದ ಮುಂದೆ ಸ್ನೇಹಿತರು, ಬಂಧು ಬಳಗ ಎಂಬ ಇತ್ಯಾದಿ ಸಂಬಂಧಗಳು ಮೂಲೆ ಗುಂಪಾಗುತ್ತಿದೆ ಎಂದು ಹೇಳಬಹುದು. ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರಿಗೆ ಅವರ ತುರ್ತು ಸಂದರ್ಭದಲ್ಲಿ ಹಣ ನೀಡಿದರೆ ಬಳಿಕ ನಿಮಗೆ ವಾಪಾಸ್ಸು ಪಡೆಯಲು ಕಾನೂನು ಮೊರೆ ಹೋಗಬಹುದೆ ಎಂಬುದಕ್ಕೆ ನಾವಿಂದು ನಿಮಗೆ ಸೂಕ್ತ ಮಾಹಿತಿ ನೀಡಲಿದ್ದೇವೆ.

ಹಣ ನೀಡಿಬಳಿಕ ಪಡೆಯಬಹುದೇ?

ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತದೆ ಅದರಲ್ಲೂ ಆರ್ಥಿಕ ಕಷ್ಟವಂತೂ ಬಹುತೇಕರಿಗೆ ಬರುವ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಮನೆ, ಮದುವೆ, ಮಕ್ಕಳ ಶಿಕ್ಷಣ ಎಂಬ ಅನೇಕ ಕಾರಣಕ್ಕೆ ಸಾಲ ಮಾಡಿಕೊಂಡಿದ್ದವರಿಗೆ ಬಳಿಕ ಹಣಕಾಸು ಅಗತ್ಯ ಬಿದ್ದಾಗ ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ಮೊರೆ ಕೇಳುತ್ತಾರೆ.

ಹೀಗೆ ಕಷ್ಟದ ಸಂದರ್ಭದಲ್ಲಿ ಅವರಿಗೆ ನೆರವಾದರೂ ಕೂಡ ಆ ಹಣ ವಾಪಾಸ್ಸು ಪಡೆಯುವಷ್ಟರಲ್ಲಿ ಸಾಕು ಸಾಕಾಗಿ ಬಿಡಲಿದೆ. ಹಾಗಾಗಿ ಇಂತಹ ಹಣ ಪಡೆಯುವುದು ಹೇಗೆಂದು ನೀವು ತಿಳಿದುಕೊಳ್ಳಿ.

ದಾಖಲೆ ಇಲ್ಲದ ಸಾಲ:

 

Image Source: Shutterstock

 

advertisement

ಪರಿಚಯಸ್ಥರು, ಸ್ನೇಹಿತರು ಅಥವಾ ಕುಟುಂಬದವರು ಎಂಬ ಕಾರಣಕ್ಕೆ ಸಾಲ (Loan) ವನ್ನು ಹಾಗೇ ಯಾವುದೇ ದಾಖಲಾತಿ ಪಡೆಯದೆ ನೀಡಿಬಿಟ್ಟು ಬಳಿಕ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ನೀವು ಯಾವುದೇ ತರನಾಗಿ ಎಷ್ಟೇ ಮೊತ್ತದ ಸಾಲ ನೀಡಿದರೂ ಅದಕ್ಕೆ ಚೆಕ್, ಬಾಂಡ್ ಅಥವಾ ಅಗ್ರಿಮೆಂಟ್ ಎನ್ನುವುದು ಇದ್ದರೆ ಮಾತ್ರವೇ ಕಾನೂನಾತ್ಮಕ ಹೋರಾಟ ಮಾಡಬಹುದು. ಯಾವುದೇ ಚೆಕ್ ಅಥವಾ ಅಗ್ರಿಮೆಂಟ್ ಇಲ್ಲದೆ ಇದ್ದರೆ ನೀವು ಏನು ಮಾಡಲು ಸಾಧ್ಯವಿಲ್ಲ.

ಕೋರ್ಟ್ ನಲ್ಲಿ ಕೇಸ್ ನಡೆಯುತ್ತಾ?

 

Image Source: The Statesman

 

ಲಕ್ಷಾಂತರ ರೂಪಾಯಿ ಸಾಲ (Loan) ನೀಡಿದ್ದೇನೆ ಆದರೆ ಸಾಲ ನೀಡಿದ್ದಕ್ಕೆ ಸಾಕ್ಷಿ ಇಲ್ಲ ಎನ್ನೊ ಅನೇಕರು ನಮ್ಮ ನಡುವೆ ಇರಬಹುದು. ಸಾಲ ನೀಡಿದ್ದಕ್ಕೆ ಸೂಕ್ತ ದಾಖಲೆ ಇಲ್ಲದಿದ್ದರೆ ಅಂತವರ ವಿರುದ್ಧ ಕೇಸು ಕೂಡ ಸಾಧ್ಯವಿಲ್ಲ.

ಸಾಲ ನೀಡಿದಾತ ವಂಚನೆ ಪ್ರಕರಣದ ಅಡಿಯಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು ಆದರೂ ಸರಿಯಾದ ಸಾಕ್ಷಿ ಇಲ್ಲದೆ ಪೊಲೀಸರಿಗೂ ಇದು ಜಟಿಲ ಸಮಸ್ಯೆ ಆಗಿರಲಿದೆ. ಹಾಗಾಗಿ ದಾಖಲೆ ಇಲ್ಲದೆ ಸಾಲ ನೀಡುವುದನ್ನು ಬಿಟ್ಟು ಬಿಡಬೇಕು.

ಈ ದಾಖಲೆ ಇದೆಯೇ ನೋಡಿಕೊಳ್ಳಿ:

ನೀವು ಸಾಲ ದೊಡ್ಡ ಮೊತ್ತದಲ್ಲಿ ನೀಡುವುದಾದರೆ ಅವರಿಂದ ಚೆಕ್ ಕರೆಸಿಕೊಳ್ಳುವ ಅಥವಾ ಒಂದು ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಚೆಕ್ ನಲ್ಲಿ ನೀವು ಹಣ ಹಿಂಪಡೆಯುವ ಅವಕಾಶ ಇರಲಿದೆ. ಒಂದು ವೇಳೆ ಆ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿ ಅಷ್ಟು ಮೊತ್ತ ಇಲ್ಲದಿದ್ದರೆ ಚೆಕ್ ಬೌನ್ಸ್ (Cheque Bounce) ಕೇಸ್ ಕೂಡ ಹಾಕಲು ಅವಕಾಶ ಇರಲಿದೆ. ಹಾಗಾಗಿ ಇಂತಹ ದಾಖಲೆ ಹೊಂದಿರುವುದು ಹಣಕಾಸಿನ ವ್ಯವಹಾರಕ್ಕೆ ಬಹಳ ಅಗತ್ಯವಾಗಿದೆ.

advertisement

Leave A Reply

Your email address will not be published.