Karnataka Times
Trending Stories, Viral News, Gossips & Everything in Kannada

Loan: ಎಲೆಕ್ಷನ್ ಗೂ ಮುನ್ನ ಹೊಸ ಟ್ವಿಸ್ಟ್! ಸಾಲ ಬಾಕಿ ಇರಿಸಿಕೊಂಡ ಎಲ್ಲಾ ರೈತರಿಗೆ ಹೊಸ ಅಪ್ಡೇಟ್

advertisement

Kisan Loan Waiver Scheme 2024: ಸ್ನೇಹಿತರೆ, ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತದಲ್ಲಿ ಕೃಷಿ ವ್ಯವಸಾಯಕ್ಕೆ ಅತಿ ಹೆಚ್ಚಿನ ಮನ್ನಣೆ ಹಾಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆಂದರೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕೃಷಿಯನ್ನು ಆಧರಿಸಿ ಬದುಕನ್ನು ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಸರ್ಕಾರ ಕೃಷಿಯನ್ನು ಪ್ರೋತ್ಸಾಹಿಸಲು ಹಾಗೂ ವ್ಯವಸಾಯ ವರ್ಗವನ್ನು ಮತ್ತಷ್ಟು ಉತ್ತೇಜನಗೊಳಿಸಲು ರೈತ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಹೀಗೆ ರೈತ ವರ್ಗಕ್ಕೆ ನಾನಾ ರೀತಿಯ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ರೈತರ ಸಾಲ ಮನ್ನ ಮಾಡಲು ಮುಂದಾಗಿರುವಂತಹ ಸರ್ಕಾರ ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದೆ.

ಬ್ಯಾಂಕಿನಿಂದ ಪಡೆದಿರುವ ಸಾಲ ತೀರಿಸಲು ಆತಂಕ ಪಡುವ ಅಗತ್ಯವಿಲ್ಲ!

ಕೃಷಿ ಭೂಮಿಯ ಮೇಲೆ ರೈತರು ಹತ್ತಾರು ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಿ ಅದರಿಂದ ದುಪ್ಪಟ್ಟು ಆದಾಯವನ್ನು ನಿರೀಕ್ಷೆ ಮಾಡುತ್ತಾರೆ. ಆದರೆ ಸರಿಯಾದ ಕ್ರಮದಲ್ಲಿ ಮಳೆಯಾಗದೆ, ಬೆಳೆ ಹಾನಿ ಉಂಟಾಗಿ ಇಳುವರಿ ಕೊರತೆಯಿಂದ ನಷ್ಟವನ್ನು ಅನುಭವಿಸುತ್ತಾರೆ.

ಅಲ್ಲದೆಕೃಷಿ ಕೆಲಸಕ್ಕಾಗಿ ರಾಜ್ಯದ ವಾಣಿಜ್ಯ ಬ್ಯಾಂಕ್ಗಳಲ್ಲಿ ಪಡೆದಿರುವಂತಹ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲಾಗದೆ ಕಂಗೆಟ್ಟು ಹೋಗುತ್ತಾರೆ. ರೈತರ ಈ ಸಂಕಷ್ಟವನ್ನು ಅರಿತಿರುವಂತಹ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತಹ ಭರವಸೆಯನ್ನು ನೀಡಿ ನಾನಾ ರೀತಿಯ ಯೋಜನೆಯ 2024ರಲ್ಲಿ ಜಾರಿಗೆ ತಂದಿದೆ.

Kisan Karj Mafi Yojana 2024:

 

Kisan Karj Mafi Yojana 2024
Image Source: India.Com

 

ಭಾರತೀಯ ರೈತರು ಕೃಷಿ ಕೆಲಸಗಳಿಗೆಂದು ಬ್ಯಾಂಕಿನಲ್ಲಿ ಸಾಲ (Loan) ಪಡೆದು ಅದನ್ನು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಲು ಸಾಧ್ಯವಾಗದೇ ಹೋದರೆ ಕಿಸಾನ್ ಕರ್ಜ್ ಮಾಫಿ ಯೋಜನೆ (Kisan Karj Mafi Yojana 2024) ಗೆ ಅರ್ಜಿ ಸಲ್ಲಿಸಬೇಕು. ಕೆಲ ದಿನಗಳಲ್ಲಿಯೇ ಸರ್ಕಾರವು ನಿಮ್ಮ ಅರ್ಜಿಯನ್ನು ಅನುಮೋದಿಸಿ, ಬ್ಯಾಂಕ್ ಗಳಲ್ಲಿ ಕೃಷಿ ಕೆಲಸಗಳಿಗೊಂದು ನೀವು ಮಾಡಿರುವ ಸಾಲವನ್ನು ಮನ್ನಾ ಮಾಡುತ್ತಾರೆ.

ಯಾವ ರಾಜ್ಯದ ರೈತರ ಸಾಲ ಮನ್ನಾವಾಗಲಿದೆ?

ಕೇಂದ್ರ ಸರ್ಕಾರವು ಆರ್ಥಿಕವಾಗಿ ದುರ್ಬಲವಾಗಿರುವ, ತಮ್ಮ ರಾಜ್ಯದ ರೈತರು ಮಾಡಿರುವಂತಹ ಸಾಲವನ್ನು ತೀರಿಸಲಾಗದ ಪರಿಸ್ಥಿತಿಯಲ್ಲಿರುವಂತಹ ರಾಜ್ಯಗಳ ಮಾಹಿತಿ ತಿಳಿದು, ಅಂತಹ ರೈತರ ಸಾಲ ಮನ್ನಾ ಮಾಡುವ ಪ್ರಾಥಮಿಕ ಉದ್ದೇಶವನ್ನು ಹೊಂದಿದೆ.

advertisement

ಕಿಸಾನ್ ಸಾಲ ಮನ್ನಾ ಯೋಜನೆಯ ಅರ್ಹತೆ:

 

Image Source: Housing

 

ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಸಾಲ ಪಡೆದುಕೊಂಡಂತಹ ಪುರಾವೆ (Loan Proof) ಹಾಗೂ ಅದಕ್ಕೆ ಸಂಬಂಧಿಸಿದಂತಹ ವಿವರಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಹಾಗೂ ರೈತರು ಮಾಡಿರುವ ಸಾಲದ ಅವಧಿಯು ಮರುಪಾವತಿ ಸ್ಥಿತಿಗಿಂತ ಹೆಚ್ಚಿರಬೇಕು.

ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು

ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಅಗತ್ಯವಿರುವ ಭೂ ದಾಖಲೆಗಳು, ಸಾಲದ ಪುರಾವೆ, ಪಾಸ್ಪೋರ್ಟ್ ಗಾತ್ರದ ಫೋಟೋ (Passport Size Photo) ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ (Registered Mobile Number)ಯನ್ನು ರೈತರು ಹೊಂದಿರಬೇಕು.

ಕಿಸಾನ್ ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ಆನ್ಲೈನ್ ನಲ್ಲಿ ಲಭ್ಯವಿರುವಂತಹ ಕಿಸಾನ್ ಸಾಲ ಮನ್ನ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೊಂದಣಿ ಪ್ರಕ್ರಿಯೆಯನ್ನು (Registration Process) ಪೂರ್ಣಗೊಳಿಸಿ.
  • ಅನಂತರ ನೀವು ಮಾಡಿರುವ ಸಾಲದ ವಿವರವೂ ಆನ್ಲೈನ್ ಪೋರ್ಟಲ್ನಲ್ಲಿ ಲಭ್ಯವಾಗುತ್ತದೆ.
  • ಮುಂದುವರೆಯಿರಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ ಹೊಸ ಪುಟ್ಟ ಒಂದು ತೆರೆಯುತ್ತದೆ.
  • ಅಲ್ಲಿ ನೀವು ಕಿಸಾನ್ ಸಾಲ ಮನ್ನಾ ಯೋಜನೆಗೆ ಬೇಕಾಗಿರುವಂತಹ ದಾಖಲೆಗಳನ್ನೆಲ್ಲ ಭರ್ತಿ ಮಾಡಿ ಕೇಳಲಾಗುವಂತಹ ಎಲ್ಲಾ ದಾಖಲೆ ಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ‘ಸಲ್ಲಿಸಿ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಕಿಸಾನ್ ಸಾಲ ಮನ್ನಾ ಯೋಜನೆಗೆ ನಿಮ್ಮ ಅರ್ಜಿ ದಾಖಲಾಗುತ್ತದೆ.

ಎರಡು ಲಕ್ಷ ರೈತರ ಸಾಲ ಮನ್ನಾ ಮಾಡಲು ಮುಂದಾದ ಸರ್ಕಾರ!

ಕಿಸಾನ್ ಸಾಲ ಮನ್ನಾ ಯೋಜನೆ (Kisan Loan Waiver Scheme) ಯ ಅಡಿಯಲ್ಲಿ ಸರ್ಕಾರ ಬರೋಬ್ಬರಿ ಎರಡು ಲಕ್ಷ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದು, ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸುತ್ತಾರೋ ಅವರ ಸಾಲವನ್ನು ಮನ್ನಾ ಮಾಡುವಂತಹ ಭರವಸೆಯನ್ನು ನೀಡಿರುವ ಸರ್ಕಾರ, ಅರ್ಜಿದಾರರ ಒಂದು ಲಕ್ಷದವರೆಗಿನ ಬ್ಯಾಂಕ್ ಸಾಲಗಳನ್ನೆಲ್ಲ ಮನ್ನ ಮಾಡಲಿದ್ದಾರೆ. ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಕಿಸಾನ್ ಸಾಲ ಮನ್ನಾ ಯೋಜನೆಯ ಅಧಿಕೃತ ವೆಬ್ಸೈಟ್ನ (Official Website) ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪಟ್ಟಿಯ ಮೂಲಕ ನಿಮ್ಮ ಸಾಲವನ್ನು ಮನ್ನಾ ಮಾಡಲಾಗಿದೆಯೇ? ಎಂಬುದನ್ನು ತಿಳಿಯಬಹುದು.

advertisement

Leave A Reply

Your email address will not be published.