Karnataka Times
Trending Stories, Viral News, Gossips & Everything in Kannada

Loan: ಹೆಂಡತಿಯ ಹೆಸರಲ್ಲಿ ಸಾಲ ಮಾಡೋರಿಗೆ ಸಿಹಿಸುದ್ದಿ! ಬೆಸ್ಟ್ ಸ್ಕೀಮ್

advertisement

ಇಂದು ಪ್ರತಿಯೊಬ್ಬರಿಗೂ ತಮ್ಮ ಸ್ವಂತ ವಾದ ಮನೆ ಇರಬೇಕು, ತನ್ನ ಕನಸಿನಂತೆ ಮನೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಹೊಸದಾದ ಮನೆ ಮಾಡಲು ಹೆಚ್ಚಿನ ಖರ್ಚು ವೆಚ್ಚಗಳು ಇರುವುದರಿಂದ ಮನೆ ಮಾಡಲು ಹೆಚ್ಚಿನ ಜನರು ಹಿಂದೆ ಸರಿಯುತ್ತಾರೆ. ಆದರೆ ನಿವೀಗ ಮನೆ ನಿರ್ಮಾಣ ಮಾಡುದಾದ್ರೆ ಬ್ಯಾಂಕ್ ನಲ್ಲಿ ಸುಲಭವಾಗಿ ಸಾಲ‌ ಸೌಲಭ್ಯ ಪಡೆಯಬಹುದು. ಹೆಚ್ಚಿನ ಬ್ಯಾಂಕ್ ಗಳು ಇಂದು ಕಡಿಮೆ ಬಡ್ಡಿ ಯಲ್ಲಿ ಗೃಹ ಸಾಲ (Home Loan) ನೀಡುತ್ತಿದ್ದು ಈ ಬಗ್ಗೆ ಈ ಮೊದಲೇ ತಿಳಿದುಕೊಂಡರೆ ಸುಲಭವಾಗಿ ನೀವು ಸಾಲ (Loan) ಸೌಲಭ್ಯ ಪಡೆಯಬಹುದು.

ಗೃಹ ಸಾಲ(Home Loan):

ಈಗಾಗಲೇ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸ್ವಂತವಾದ ಮನೆ ನಿರ್ಮಾಣ ಮಾಡಲು ಬಡ್ಡಿರಹಿತ ಗೃಹ ಸಾಲ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ನೀವು ಸಬ್ಸಿಡಿ ಮೊತ್ತವು ಪಡೆಯಬಹುದು. ಅದೇ ರೀತಿ ನೀವು ಗೃಹ ಸಾಲ (Home Loan) ಮಾಡುದಾದ್ರೆ ಜಂಟಿ ಗೃಹ ಸಾಲ ಪಡೆಯುವುದು ಉತ್ತಮ. ಇದು ನಿಮ್ಮ ತೆರಿಗೆ ಉಳಿತಾಯ ಮಾಡುತ್ತದೆ. ಅದೇ ರೀತಿ ಆದಾಯ ತೆರಿಗೆ ಕಾಯ್ದೆಯ ಯಾವ ಸೆಕ್ಷನ್ ಅಡಿ ನಿಮಗೆ ಟ್ಯಾಕ್ಸ್ ಉಳಿತಾಯದ ಲಾಭ ಸಿಗಲಿದೆ ಎಂಬುದನ್ನು ತಿಳಿದು‌ಕೊಂಡು ಗೃಹ ಸಾಲ ಆಯ್ಕೆ ಮಾಡಿಕೊಳ್ಳಿ.

advertisement

Image Source: Alamy

ಮಹಿಳೆಯರ ಹೆಸರಿನಲ್ಲಿ ಗೃಹ ಸಾಲ (Home Loan) ಲಾಭಕರ

ಮಹಿಳೆಯರಿಗೆ ಇಂದು ಸರಕಾರದಿಂದ ಹಲವು ರೀತಿಯ ಸಾಲ (Loan) ಸೌಲಭ್ಯ ಗಳು ಸಿಗುತ್ತಿದೆ.‌ ಸ್ವಂತ ಉದ್ಯಮ, ಶಿಕ್ಷಣ, ತರಬೇತಿ ಇತ್ಯಾದಿ ಗಳನ್ನು ಸರಕಾರ ಆಯೋಜನೆ ಮಾಡುತ್ತಿದೆ. ಅದೇ ರೀತಿ ವಿವಿಧ ಕ್ಷೇತ್ರದಲ್ಲಿ ಕೂಡ ಮಹಿಳೆಯರಿಗೆ ಮೀಸಲಾತಿ ಹಾಗೂ ಕೆಲ ರಿಯಾಯಿತಿ ನೀಡಲಾಗುತ್ತಿದೆ. ಇನ್ನು ಮಹಿಳೆಯರು ಅಭಿವೃದ್ಧಿ ಯಾಗಬೇಕೆಂದು ಬ್ಯಾಂಕ್ ಗಳು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗಾಗಿ ಸಾಲ ಸೌಲಭ್ಯ ನೀಡುತ್ತಿವೆ.

  • ಇಂದು ಪುರುಷರಿಗೆ ಹೋಲಿಸಿದರೆ ಸುಮಾರು 0.05% ರಿಂದ 0.10% ನಷ್ಟು ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗುತ್ತಿದೆ. ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ವಿಭಿನ್ನವಾಗಿರುತ್ತದೆ.
  • SBI ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆಯುದಾದರೆ 9.15% ಮೇಲ್ಪಟ್ಟು ಬಡ್ಡಿದರ ಇರುತ್ತದೆ.ಆದರೆ ಪತ್ನಿಯ ಹೆಸರಿನಲ್ಲಿ ಈ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡರೆ 9.10% ಬಡ್ಡಿದರ ವಿಧಿಸಲಿದೆ
  • ಸೆಂಟ್ರಲ್ ಬ್ಯಾಂಕ್ ನಲ್ಲಿ ನಲ್ಲಿ‌ ಗೃಹ ಸಾಲ ಪಡೆದುಕೊಂಡರೆ 8.5% ರಿಂದ 9.5% ಬಡ್ಡಿ ವಿಧಿಸಲಾಗುತ್ತದೆ, ಆತನ ಪತ್ನಿಯ ಹೆಸರಿನಲ್ಲಿ ಗೃಹ ಸಾಲ ಪಡೆದುಕೊಂಡರೆ 8.35% ರಿಂದ 9.25% ಬಡ್ಡಿ ದರ ನೀಡಲಾಗುತ್ತದೆ.ಹೀಗೆ ಕೆಲವೊಂದು ಬ್ಯಾಂಕ್ ನಲ್ಲಿ‌ ಮಹಿಳೆಯರಿಗೆ ವಿಶೇಷ ರಿಯಾಯಿತಿ ಇದೆ.
  • ಇನ್ನು ಪಿಎಂ ಆವಾಸ್‌ ಯೋಜನೆ (PM Awas Yojana) ಯಡಿಯಲ್ಲಿ ಮಹಿಳೆಯರಿಗೆ ಗರಿಷ್ಠ ಸಬ್ಸಿಡಿ ಕೂಡ ದೊರಕುತ್ತದೆ.
  • ಮನೆ ಖರೀದಿ ಮಾಡುವ ಮಹಿಳಾ ಸಾಲಗಾರರಿಗೆ ಪುರುಷ ಸಾಲಗಾರರಿಗಿಂತ ಸ್ಟ್ಯಾಂಪ್‌ ಡ್ಯೂಟಿ ಸಹ ಕಡಿಮೆ.
  • ಅದೇ ರೀತಿ ಮಹಿಳೆಯರಿಗೆ ದೀರ್ಘಾವಧಿಯ ಗೃಹ ಸಾಲ ಪಡೆಯುವ ಅವಕಾಶ ಇರುತ್ತದೆ.

advertisement

Leave A Reply

Your email address will not be published.