RBI: ಬ್ಯಾಂಕ್ ಗಳಲ್ಲಿ ಹಣವೇ ಇಡದವರಿಗೆ ರಿಸರ್ವ್ ಬ್ಯಾಂಕ್ ಹೊಸ ಸೂಚನೆ
ಇಂದು ಬ್ಯಾಂಕ್ ಖಾತೆ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ವರೆಗೂ ಯಾವುದೇ ಸರಕಾರದ ಸೌಲಭ್ಯ ಪಡೆಯುದಾದ್ರು ಬ್ಯಾಂಕ್ ಖಾತೆ (Bank Account) ಗೆ ಹಣ ಜಮೆ ಮಾಡಲಾಗುತ್ತದೆ. ನಾವು ಉದ್ಯೋಗದ ಕಾರಣ ಕ್ರೆಡಿಟ್ ಕಾರ್ಡ್ (Credit Card)ಗಾಗಿ, ಸರಕಾರದ ಸೌಲಭ್ಯ ಕ್ಕಾಗಿ, ಸಾಲ ಪಡೆಯಲು, ಫಿಕ್ಸಿಡ್ ಡೆಪಾಸಿಟ್ (Fixed Deposit)ಗಾಗಿ, ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಬ್ಯಾಂಕ್ ಖಾತೆಯ ಅವಶ್ಯಕತೆ ಇದ್ದೆ ಇರುತ್ತದೆ. ನೀವು ಹೊಸದಾಗಿ ಬ್ಯಾಂಕ್ ಖಾತೆ ತೆರೆದಾಗ ಮಿನಿಮಮ್ ಬ್ಯಾಲೆನ್ಸ್ ಇರಬೇಕು, ಇಲ್ಲದಿದ್ದಲ್ಲಿ ದಂಡ ಬೀಳಲಿದೆ ಎನ್ನುವ ಮಾತುಗಳನ್ನು ನೀವು ಕೇಳಿದ್ದೀರಿ. ಹಾಗಾಗಿ ಹೆಚ್ಚಿನ ಜನರು ಮಿನಿಮಮ್ ಬ್ಯಾಲೆನ್ಸ್ ಅನ್ನು ಖಾತೆಯಲ್ಲಿ ಇಟ್ಟಿರುತ್ತಾರೆ. ಮಿನಿಮಮ್ ಬ್ಯಾಲೆನ್ಸ್ (Minimum Balance) ಇಲ್ಲದೆ ಇದ್ದಾಗ ಬ್ಯಾಂಕ್ ಅಕೌಂಟ್ಗೆ ಸ್ಯಾಲರಿ ಬಂದಾಗ ಮಿನಿಮಮ್ ಬ್ಯಾಲೆನ್ಸ್ ಮೆಂಟೈನ್ ಗಾಗಿ ಒಂದಿಷ್ಟು ಹಣ ಕಟ್ ಆಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ (RBI) ನಿಯಮ ಯೇನು? ಈ ಬಗ್ಗೆ ಇಲ್ಲಿದೆ ಮಾಹಿತಿ.
ರಿಸರ್ವ್ ಬ್ಯಾಂಕ್ (RBI) ನಿಯಮ:
ರಿಸರ್ವ್ ಬ್ಯಾಂಕ್ ಕೂಡ ಪ್ರತಿಯೊಂದು ಬ್ಯಾಂಕ್ ಗಳಿಗೂ ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಬೇಕು ಎಂಬುದರ ಬಗ್ಗೆ ಸೂಚನೆ ನೀಡುತ್ತದೆ. ಬ್ಯಾಂಕ್ ರೂಲ್ಸ್ ಪ್ರಕಾರ ವರ್ಷದಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ದಲ್ಲಿ ಅದಕ್ಕೆ ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ. ಆದರೆ ಈಗ ಆರ್ ಬಿ ಐ (RBI) ಹೊಸ ನಿಯಮವನ್ನು ಜಾರಿಗೆತಂದಿದ್ದು, ಬ್ಯಾಂಕುಗಳು ಶುಲ್ಕ ಹಾಕಬಾರದು ಎಂಬ ನಿಯಮ ಜಾರಿಗೆ ತಂದಿದೆ.
ಯಾವ ಖಾತೆಗೆ ಶುಲ್ಕ ಇಲ್ಲ
- ನಿಷ್ಕ್ರಿಯ ಗೊಂಡಿರುವ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ಬ್ಯಾಂಕ್ ಶುಲ್ಕ ವಿಧಿಸುವಂತಿಲ್ಲ ಎನ್ನುವ ನಿಯಮವು ಇದೆ.
- ಇನ್ನು ಸ್ಕಾಲರ್ಷಿಪ್ ಅಥವಾ ಸರಕಾರದ ಸೌಲಭ್ಯ ಪಡೆಯುವ ಖಾತೆಗಳನ್ನು ಬಳಸುತ್ತಿದ್ದರೆ ಅಂತಹ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ದಾಗಲೂ ಶುಲ್ಕ ನೀಡುವಂತಿಲ್ಲ
- ನೀವು ಖಾತೆಯನ್ನು ನಿರ್ವಹಣೆ ಮಾಡದೇ ಇದ್ದಲ್ಲಿ ಅಥವಾ ಬ್ಯಾಂಕ್ ವ್ಯವಹಾರ ಮಾಡದೆ ಇದ್ದಲ್ಲಿ, ಶುಲ್ಕ ಹಾಕುವಂತಿಲ್ಲ. ಬ್ಯಾಂಕ್ ಖಾತೆಯಲ್ಲಿ ಹಣ ಇದ್ದು ನೀವು ಖಾತೆಯ ಬಳಕೆ ಮಾಡದೆ ಇದ್ದಾಗ ಆಗ ದಂಡ ವಿಧಿಸಬಹುದು.
ಖಾತೆಯಲ್ಲಿಹಣ ಇಡುವ ಬಗ್ಗೆಯು ಸೂಚನೆ
ನೀವು ನಿಮ್ಮ ಖಾತೆಯಲ್ಲಿ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಾಕುದಾದ್ರೆ ನೀವು ಅದರೊಂದಿಗೆ ಪ್ಯಾನ್ ಸಂಖ್ಯೆ ಯನ್ನು ನೀಡಬೇಕು. ಇನ್ನು ಸಾಮಾನ್ಯ ಉಳಿತಾಯ ಖಾತೆಯಲ್ಲಿ ನಗದು ಠೇವಣಿ ಮಿತಿ 10 ಲಕ್ಷ ರೂ. ಇರಲಿದ್ದು, 10 ಲಕ್ಷ ರೂಪಾಯಿಗಿಂತ ಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ ಬ್ಯಾಂಕ್ಗಳು ತಕ್ಷಣ ಆದಾಯ ತೆರಿಗೆ (Income Tax) ಇಲಾಖೆಗೆ ಮಾಹಿತಿ ನೀಡುತ್ತವೆ. ಹಾಗಾಗಿ ಹಣ ಖಾತೆಯಲ್ಲಿ ಇಡುವ ಬಗ್ಗೆಯು ನಿಯಮಗಳನ್ನು ತಿಳಿದುಕೊಳ್ಳಿ.