Bank Account: ಮೃತ ವ್ಯಕ್ತಿಯ ಖಾತೆಯಿಂದ ಹಣ ತೆಗೆಯಲು ನಿಯಮ ಬದಲಿಸಿದ ರಿಸರ್ವ್ ಬ್ಯಾಂಕ್! ದೇಶದಾದ್ಯಂತ ಹೊಸ ಸುತ್ತೋಲೆ
ಸಾಮಾನ್ಯವಾಗಿ ಎಲ್ಲರ ಬಳಿಯೂ ಬ್ಯಾಂಕ್ ಅಕೌಂಟ್ (Bank Account) ನ ಖಾತೆ ಇದ್ದೇ ಇರುತ್ತದೆ. ಇನ್ನು ಬ್ಯಾಂಕ್ ಅಕೌಂಟ್ ಖಾತೆ ಚಿಕ್ಕ ಮಕ್ಕಳಿಂದ ಶುರುವಾಗಿ ವಯಸ್ಸಾದವರವರೆಗೂ ಪ್ರತಿಯೊಬ್ಬರ ಹೆಸರಿನಲ್ಲಿಯೂ ಇರುವಂತಹ ಒಂದು ಪ್ರಮುಖ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಬ್ಯಾಂಕ್ ಖಾತೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಯೊಬ್ಬ ನಾಗರಿಕನೂ ಕೂಡ ಬ್ಯಾಂಕಿನಿಂದ ನೀಡಿರುವಂತಹ ನಿಯಮಗಳನ್ನು ಪಾಲನೆ ಮಾಡಲೇಬೇಕು. ಇದರ ಜೊತೆಗೆ ಬ್ಯಾಂಕ್ ನ ಕೆಲವು ಮುನ್ನೆಚ್ಚರಿಕೆಗಳನ್ನು ತಿಳಿದುಕೊಂಡಿರುವುದು ಕೂಡ ಬಹಳ ಉತ್ತಮ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸ್ಕಾಲರ್ ಶಿಪ್, ಕೆಲಸ ಮಾಡುವವರ ವೇತನ, ವೃದ್ಧರಿಗೆ ಪಿಂಚಣಿ ಹೀಗೆ ಮುಂತಾದ ವಿಚಾರಗಳಿಗೆ ಬ್ಯಾಂಕ್ ನ ಖಾತೆ ಇರುವುದು ತುಂಬಾ ಅವಶ್ಯಕವಾಗಿದೆ. ಇನ್ನು ಕೆಲವೊಮ್ಮೆ ಬ್ಯಾಂಕ್ ನೀಡಿರುವ ನಿಯಮಗಳನ್ನು ತಿಳಿಯದೆ ಹಲವರು ಸಂಕಷ್ಟಕ್ಕೆ ಸಿಲುಕುವುದು ಉಂಟು. ಇನ್ನು ಆಕಸ್ಮಿಕವಾಗಿ ಅಥವಾ ವಯಸ್ಸಾಗಿ ಯಾರಾದರೂ ಮರಣ ಹೊಂದಿದ ನಂತರ ಅವರ ಬ್ಯಾಂಕ್ ನಲ್ಲಿ ಹಣ ಇದ್ದರೆ ಅದನ್ನು ಹೇಗೆ ಪಡೆಯಬಹುದು ಎಂಬುದರ ಕುರಿತಾಗಿ, ಇತ್ತೀಚಿಗೆ ಬ್ಯಾಂಕ್ ಹೊಸ ನಿಯಮವನ್ನು ಜಾರಿ ಮಾಡಿದೆ.
ಬ್ಯಾಂಕ್ ನಿಯಮದ ಹೈಲೈಟ್ಸ್ ಮತ್ತು ಉಪಯೋಗಗಳು:
ಇನ್ನು ಸಾಮಾನ್ಯವಾಗಿ ಮರಣ ಹೊಂದಿದ ನಂತರ ಮರಣ ಹೊಂದಿದ ವ್ಯಕ್ತಿಯ ಅಕೌಂಟ್ (Bank Account)ನಲ್ಲಿ ಹಣ ಇದ್ದು, ಅದನ್ನು ವಿತ್ ಡ್ರಾ ಮಾಡುವುದು ಹೇಗೆ? ಎಂಬುದರ ಕುರಿತಾಗಿ ಹಲವರು ತಿಳಿಯದೆ ಇರುತ್ತಾರೆ. ಇನ್ನು ಕೆಲವೊಬ್ಬರು ATM ಕಾರ್ಡ್ ಮೂಲಕ ಹಣವನ್ನು ಪಡೆಯಬಹುದು ಎಂಬ ಯೋಚನೆ ಮಾಡಿ ಸುಮ್ಮನಾಗಿರುತ್ತಾರೆ. ಆದರೆ ಇದು ತಪ್ಪಾದ ವಿಧಾನವಾಗಿದೆ ಇದು ನಿಯಮಕ್ಕೆ ಮೀರಿದಂತಾಗಿದೆ. ಆದ್ದರಿಂದ ಮರಣ ಹೊಂದಿದ ನಂತರ ಒಬ್ಬ ವ್ಯಕ್ತಿಯ ಖಾತೆಯಲ್ಲಿನ ಹಣವನ್ನು ತೆಗೆಯಲು ಸುಲಭವಾಗಿ ಎರಡು ವಿಧಾನವನ್ನು ಬ್ಯಾಂಕ್ ಜಾರಿ ಮಾಡಿದೆ. ಅವು ಏನೆಂದು ತಿಳಿಯುವುದು ಅವಶ್ಯಕ.
ಒಬ್ಬ ವ್ಯಕ್ತಿ ತನ್ನ ಅಕೌಂಟ್ ನಾಮಿನಿ ಫೆಸಿಲಿಟಿ ಹೊಂದಿದ್ದು ಆಕಸ್ಮಿಕವಾಗಿ ಮೃತ ಹೊಂದಿದರೆ, ಆತನ ಅಕೌಂಟ ಅಲ್ಲಿರುವ ಹಣವನ್ನು ಪಡೆಯುವುದು ಸ್ವಲ್ಪ ಸುಲಭವಾದಂತಹ ವಿಧಾನವಾಗಿದೆ. ಅಂದರೆ ನಾಮಿನಿ ಫೆಸಿಲಿಟಿ ಹೊಂದಿರುವ ವ್ಯಕ್ತಿ , ನಾಮಿನಿ ಮಾಡುವಂತಹ ವ್ಯಕ್ತಿಯ ಆಧಾರ್ ಕಾರ್ಡನ್ನು ಮೂಲ ದಾಖಲೆಯಾಗಿ ನೀಡಿರುತ್ತಾರೆ. ಹಾಗಾಗಿ ಆತ ಮರಣ ಹೊಂದಿದ ನಂತರ ನಾಮಿನಿ ಆಗಿರುವಂತ ವ್ಯಕ್ತಿಯ ಆಧಾರ್ ಕಾರ್ಡ್, ಮತ್ತು ಮರಣ ಹೊಂದಿದ ವ್ಯಕ್ತಿಯ ಆಧಾರ್ ಕಾರ್ಡ್ ಅಥವಾ ಜಂಟಿ ಖಾತೆಯಾದರೆ ಅದನ್ನು ಸಿಂಗಲ್ ಖಾತೆಯಾಗಿ ಪರಿವರ್ತಿಸಲು, ಮತ್ತು ಹಣವನ್ನು ಪಡೆದುಕೊಳ್ಳಲು, ಖಾತೆಗೆ ಸಂಬಂಧಿಸಿದಂತಹ ದಾಖಲೆಗಳು ಮತ್ತು ಮರಣ ಪ್ರಮಾಣ ಪತ್ರ ಇದನ್ನು ಬ್ಯಾಂಕಿಗೆ ಸಲ್ಲಿಸುವ ಮೂಲಕ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಇನ್ನು ಎರಡನೆಯದಾಗಿ ನಾಮಿನಿ ಫೆಸಿಲಿಟಿ ಪಡೆಯುವ ವ್ಯಕ್ತಿ ಮೃತ ಹೊಂದಿದಾಗ, ಬ್ಯಾಂಕ್ ನಿಯಮದ ಪ್ರಕಾರ ಆತನ ಖಾತೆಯಲ್ಲಿರುವ ಹಣವನ್ನು ಪಡೆದುಕೊಳ್ಳಲು ಕುಟುಂಬದ ವಂಶವೃಕ್ಷ ಮತ್ತು ಅಕೌಂಟ್ ನ ದಾಖಲೆಗಳು ಅಂದರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್ (Aadhaar Card) ವಾರಸುದಾರನಾ ಆಧಾರ್ ಕಾರ್ಡ್, ಬ್ಯಾಂಕ್ ನ ದಾಖಲೆಗಳು, ಮರಣ ಪ್ರಮಾಣ ಪತ್ರ ಇವುಗಳ ಆಧಾರದ ಮೇಲೆ ಕುಟುಂಬದ ವಾರಸುದಾರರು ಅರ್ಜಿ ಸಲ್ಲಿಸಿ, ಕಾನೂನು ಬದ್ಧವಾಗಿ ನೀಡಬೇಕಾದಂತಹ ದಾಖಲೆಗಳನ್ನು ಬ್ಯಾಂಕ್ ಅಲ್ಲಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದು. ಈ ಎರಡು ವಿಧಾನಗಳ ಮೂಲಕ ಮೃತಪಟ್ಟಂತಹ ವ್ಯಕ್ತಿಯ ಖಾತೆಯಲ್ಲಿರುವಂತಹ ಹಣವನ್ನು ಪಡೆದುಕೊಳ್ಳಬಹುದಾಗಿದೆ.